ನಶಿಸಿ ಹೋಗುತ್ತಿರುವ ಸಂಗೀತ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು
ಕೊಪ್ಪಳ 19: ಪ್ರಾಚೀನ ಭಾರತದಲ್ಲಿ ಸಂಗೀತದ ಮೂಲವು ಹಿಂದೂ ಧರ್ಮದ ವೈದಿಕ ಸಾಹಿತ್ಯದಲ್ಲಿ ಕಂಡುಬರುತ್ತದೆ. ಭಾರತ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ಆಚಾರ- ವಿಚಾರ, ಸಾಂಪ್ರದಾಯಿಕವಾಗಿ ಮುಂದೆ ಇದೆ, ಹಾಗೆ ಸಂಗೀತ, ನೃತ್ಯ ದಲ್ಲೂ ಉನ್ನತ ಸ್ಥಾನದಲ್ಲಿದೆ. ಆದರೆ ದೇಶಿ ಸಂಗೀತವು ಕಾಲದಿಂದ ಕಾಲಕ್ಕೆ ನಶಿಸಿ ಹೋಗುತ್ತಿದೆ, ಈಗಿನ ಪೀಳಿಗೆಯವರು ದೇಶಿ ಸಂಗೀತವನ್ನು ಪ್ರೋತ್ಸಾಹಿಸಬೇಕು ಮತ್ತು ಉಳಿಸಬೇಕು. ಸಂಗೀತದಿಂದ ಮನುಷ್ಯನಿಗಿರುವ ಮಾನಸಿಕ ಒತ್ತಡ ನಿವಾರಣೆ ಆಗುತ್ತದೆ. ಎಂದು ಸರ್ಕಾರಿ ಪ್ರೌಢಶಾಲೆ ಬನ್ನಿಕಟ್ಟಿ ಮುಖ್ಯೋಪಾಧ್ಯಾಯರಾದ ಸೋಮರಡ್ಡಿ ಡಂಬ್ರಳ್ಳಿ ಹೇಳಿದರು. ಕೊಪ್ಪಳದ ಬನ್ನಿಕಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾನಾಮೃತ ಸಂಗೀತ ಪ್ರತಿಷ್ಠಾನ ಭಾಗ್ಯನಗರ, ಇವರ ವತಿಯಿಂದ "ರಾಗ ತರಂಗ" ಕಾರ್ಯಕ್ರಮ ನಡೆಯಿತು, ತಾಹೇರಾ ಬೇಗಂ ಸಹಶಿಕ್ಷಕರು, ತಬಲಾ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದೇಶ ಕಂಡ ಶ್ರೇಷ್ಠ ತಬಲಾ ವಾದಕರಾದ ಜಾಕೀರ್ ಹುಸೇನ್‌ರನ್ನು ನಾವು ಸ್ಮರಿಸಬೇಕು. ಅವರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ಪ್ರೇಕ್ಷಕರಿಗೆ ತರಲು ಹೆಸರುವಾಸಿಯಾಗಿದ್ದರು. ಸಂಗೀತ ಕಲಿಯಲು ಯಾವುದೇ ವಯೋಮಿತಿ ಇಲ್ಲ, ಇಂತಹ ಸಂಗೀತ ಕಾರ್ಯಕ್ರಮಗಳು ಶಾಲಾ ಮಕ್ಕಳಿಗೆ ತುಂಬಾ ಅವಶ್ಯಕ, ಓದಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆ ಬನ್ನಿಕಟ್ಟಿ ಮುಖ್ಯೋಪಾಧ್ಯಾಯರಾದ ಸೋಮರಡ್ಡಿ ಡಂಬ್ರಳ್ಳಿ ಉದ್ಘಾಟನೆ ತಾಹೇರಾ ಬೇಗಂ ಸಹಶಿಕ್ಷಕರು, ಮುಖ್ಯ ಅತಿಥಿಗಳಾಗಿ ಕಾವೇರಿ ಕೆ ಕುರಟ್ಟಿ, ಶಾರದಾ ಬಾಯಿ ರಜಪೂತ, ಗಣೇಶ ಬಾಗಲಕೋಟ, ಶಿವಾನಂದ ಗಾಢದಿನ್ನಿ, ಶೇಖರ್ಪ ಹಲಗೇರಿ, ಗೋಪಾಲರಾವ್ ಗುಡಿ, ಉಪಸ್ಥಿತರಿದ್ದರು. ನಂತರ ಸುಗಮ ಸಂಗೀತ ಪ್ರತಿಭಾ ಭೀಕ್ಷಾವತಿಮಠ, ಜಾನಪದ ಗೀತೆ ಕು.ಸಂಜನಾ ಕೋಣಿ, ಭಾವಗೀತೆ ಕು. ಸ್ನೇಹ ಮ್ಯಾಗಡೆ, ಸಮೂಹ ನೃತ್ಯ ರವಿ ಡ್ಯಾನ್ಸ್ ಅಕಾಡೆಮಿ ಕೊಪ್ಪಳ ಅವರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೊಳಗಿತು. ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ್ಪ ಉಪ್ಪಾರ ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ್ ಮೆರುಗು ನೀಡಿದರು.