ಲೋಕದರ್ಶನ ವರದಿ
ಬಸವನಬಾಗೇವಾಡಿ 01: ಪ್ರಯಾಣಿಕರನ್ನು ಕರೆದುಕೊಂಡು ತೆರಳುತ್ತಿರುವಾಗ ಆಕಸ್ಮಾತವಾಗಿ ಎದುರಾದ ಜಯರಾಯನ ಅಟ್ಟಹಾಸದ ಮಧ್ಯೆ ಸಾವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದ ಘಟನೆಯು ನೂತನ ತಾಲೂಕ ಕೋಲ್ಹಾರ ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಸವನಬಾಗೇವಾಡಿ ಬಸ್ ಡಿಪೋಕ್ಕೆ ಸೇರಿದ ಬಸವನಬಾಗೇವಾಡಿ-ಕೋಲ್ಹಾರ ಮಾರ್ಗದ ಬಸ್ ಚಾಲಕನಾದ ಸಂಗನಗೌಡ ತಂ: ಹಣಮಂತ್ರಾಯಗೌಡ ನಾಡಗೌಡ (56) ಅವರು ಕರ್ತವ್ಯಪ್ರಜ್ಞೆ ಮೆರೆದ ಚಾಲಕನಾಗಿದ್ದು ಚಾಲಕ ಸಂಗನಗೌಡ ನಾಡಗೌಡ ಅವರು ಹಿಂದಿನ ದಿನವೇ ಕರ್ತವ್ಯಕ್ಕೆ ಹಾಜರಾಗಿ ಶುಕ್ರವಾರ ಮಧ್ಯಾಹ್ನದವರೆಗೆ ಕರ್ತವ್ಯನಿರ್ವಹಿಸಬೇಕಿತ್ತು ದಿ.31ರಂದು ಬೆಳಗ್ಗೆ 11ಗಂಟೆಗೆ ಬಸವನಬಾಗೇವಾಡಿ ಬಸ್ ಡಿಪೋದಿಂದ ಬಸ್ ತೆಗೆದುಕೊಂಡು ಕೋಲ್ಹಾರ ಪಟ್ಟಣಕ್ಕೆ ತೆರಳುತ್ತಿರುವಾಗ ಕೋಲ್ಹಾರ ಯುಕೆಪಿ ಹತ್ತಿರ ಎದೆ ನೋವು ಕಾಣಿಸಿಕೊಂಡಾಗ ಸ್ವಲ್ಪ ಸುಧಾರಿಸಿಕೊಂಡು ಯಾರಿಗೂ ಹೇಳದೆ ಬಸ್ ಚಲಾಯಿಸಿಕೊಂಡು ಕೋಲ್ಹಾರ ಬಸ್ ನಿಲ್ದಾಣಕ್ಕೆ ತೆರಳುವಾಗ ಹೃದಯಾಘಾತವಾಗಿದ್ದು ಚಾಲಕನ ಸೀಟಿನಲ್ಲಿ ಕುಳಿತು ಸ್ಟೇರಿಂಗ್ ಮೇಲೆ ಮಲಗಿ ಪ್ರಾಣ ಬಿಟ್ಟಿದ್ದು ಆದರೇ ಬಸ್ ಪಕ್ಕದಲ್ಲಿ ನಿಲ್ಲಿಸುವ ಮುಖಾಂತರ ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ನಿವರ್ಾಹಕ ಕಾಮನಕೇರಿ ಸೇರಿದಂತೆ ಪ್ರಯಾಣಿಕರು ಚಾಲಕ ಹತ್ತಿರ ತೆರಳಿದಾಗ ಮೂಛರ್ೆ ಹೋಗಿರಬೇಕೆಂದು ಅಂಬ್ಯೂಲನ್ಸ ಕರೆದು ನೋಡಲಾಗಿ ಚಾಲಕ ಸಾವಿಗೀಡಾಗಿದ್ದರು ಎನ್ನಲಾಗಿದ್ದು ಕೂಡಲೇ ಬಸ್ ಡಿಪೋ ವ್ಯವಸ್ಥಾಪಕ ಎಂ.ಎಸ್.ಹಿರೇಮಠ ಸೇರಿದಂತೆ ಅಧಿಕಾರಿಗಳಿಗೆ ಫೋನಾಯಿಸಿ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ವ್ಯವಸ್ಥಾಪಕರು ಸೇರಿದಂತೆ ನೌಕರರು ಮೃತ ದೇಹವನ್ನು ಬಸವನಬಾಗೇವಾಡಿ ಪಟ್ಟಣದ ಡಾ.ಅಂಬೇಡ್ಕರ ವೃತ್ತ, ಬಸ್ ನಿಲ್ದಾಣ, ಬಸ್ ಡಿಪೋದಲ್ಲಿ ಅಂತಿಮ ನಮನ ಸಲ್ಲಿಸಿ ಮೃತ ಚಾಲಕನ ಸ್ವಗ್ರಾಮಕ್ಕೆ ತೆರಳದರು, ಕಳೆದ 20ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು ಇನ್ನೂ 4ವರ್ಷ ಸೇವೆ ಅವಧಿಯಿತ್ತು ಮೃತರು ಪತ್ನಿ, ಇಬ್ಬರು ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.