ಲೋಕದರ್ಶನ ವರದಿ
ಹಳಿಯಾಳ, 14: ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಶಾಖೆಯ ಎಟಿಎಂ ಹಾಗೂ ಸಿಡಿಎಂಗಳಿಗೆ ಗಾಡರ್್ಗಳನ್ನು ನೇಮಿಸುವಂತೆ ಜಯಕನರ್ಾಟಕ ಸಂಘಟನೆಯವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಂಘಟನೆಯ ನಿಯೋಗವು ತಹಶೀಲ್ದಾರರಿಗೆ ನಂತರ ಸ್ಟೇಟ್ ಬ್ಯಾಂಕ್ ಶಾಖಾಧಿಕಾರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು. ಎಟಿಎಂ ಹಾಗೂ ಸಿಡಿಎಂ ಯಂತ್ರಗಳ ಮೂಲಕ ವಹಿವಾಟು ಮಾಡಲು ಗ್ರಾಮಸ್ಥರಿಗೆ, ಅನಕ್ಷರಸ್ಥರಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮೊದಲಾದವರಿಗೆ ಬಹು ಕಷ್ಟದಾಯಕ ಕೆಲಸವಾಗಿದೆ. ಇದಕ್ಕೆ ಸಹಾಯಕರು ಬೇಕೆ-ಬೇಕು. ಸ್ಟೇಟ್ ಬ್ಯಾಂಕ್ ವತಿಯಿಂದ ನೇಮಿಸಿದವರನ್ನು ಹೊರತುಪಡಿಸಿ ಇತರರು ಸಹಾಯಕರಾಗಿ ಕೆಲಸ ಮಾಡಿದರೆ ದುರುಪಯೋಗ ಮಾಡಿಕೊಂಡರೆ ಅದನ್ನು ತಡೆಗಟ್ಟುವುದು ಹಾಗೂ ಕಂಡು ಹಿಡಿಯುವುದು ಅಸಾಧ್ಯದ ಸಂಗತಿಯಾಗಿದೆ. ಹೀಗಾಗಿ ಈ ಹಿಂದೆ ಇದ್ದ ವ್ಯವಸ್ಥೆಯಂತೆ ಭಾರತೀಯ ಸ್ಟೇಟ್ ಬ್ಯಾಂಕ್ನವರು ಎಟಿಎಂ ಹಾಗೂ ಸಿಡಿಎಂ ಯಂತ್ರಗಳ ಬಳಕೆಗೆ ಸಹಾಯಕವಾಗುವಂತೆ ಗಾಡರ್್ಗಳನ್ನು ನೇಮಕ ಮಾಡುವಂತೆ ಮನವಿಯಲ್ಲಿ ಕೋರಲಾಗಿದೆ.
ಸಂಘಟನೆಯ ಅಧ್ಯಕ್ಷ ವಿಲಾಸ ಕಣಗಲಿ, ಪ್ರಮುಖರಾದ ಗಣೇಶ ಗೋಸಪ್ಪನವರ, ಸಿರಾಜ್ ಮುನವಳ್ಳಿ, ಬಸವರಾಜ ತಳವಾರ, ಮಹೇಶ ಹುಲಕೊಪ್ಪ, ಮಹಾದೇವ ಚಲವಾದಿ, ಕಿರಣ ಕಮ್ಮಾರ, ವಿನೋದ ಗಿಂಡೆ, ಚೇತನ ಮನಗುಂಡಿ, ಈಶ್ವರ ಗಾಣಗೇರ, ಗೋಪಾಲ ಗರಗ, ಷಣ್ಮುಖ ಚಲವಾದಿ, ಎಂ.ಡಿ. ಕಮ್ಮಾರ, ಸಿಲ್ವೆನ್, ನವೀನ ಕಣಗಲಿ, ಮೊದಲಾದವರಿದ್ದರು.