ಎಸ್ಬಿಐ ಶಾಖೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲು ಆಗ್ರಹ

ಲೋಕದರ್ಶನ ವರದಿ

ಸಿದ್ದಾಪುರ 2: ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಹಿರಿಯ ನಾಗರಿಕರಿಗೆ, ಪಿಂಚಣಿದಾರರಿಗೆ, ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು, ಗ್ರಾಹಕರಿಗೆ ಅಗತ್ಯ ಮಾಹಿತಿನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.  ಅನಕ್ಷರಸ್ಥರಿಗೆ, ಅಬಲರಿಗೆ ಸಹಾಯಕರನ್ನು ಒದಗಿಸಬೇಕು, ಕೌಂಟರಿನಲ್ಲಿ ಸರದಿ ನಿಲ್ಲಲು ಸಮರ್ಪಕವಾದ ವ್ಯವಸ್ಥೆ ಕಲ್ಪಿಸಬೇಕು, ಬ್ಯಾಂಕಿನಲ್ಲಿ ಜನಜಂಗುಳಿಯಾಗದಂತೆ ಸೂಕ್ತಕ್ರಮ ಕೈಗೊಳ್ಳಬೇಕು, ಗ್ರಾಹಕರು ನೆಮ್ಮದಿಯಿಂದ ವ್ಯವಹರಿಸುವ ವಾತಾವರಣ ನಿಮರ್ಾಣವಾಗಬೇಕು, ಸಿಬ್ಬಂದಿಗಳು ಗ್ರಾಹಕರೊಂದಿಗೆ ಸಹನೆ, ಸೌಜನ್ಯದಿಂದ ವತರ್ಿಸುವಂತಾಗಬೇಕು ಎಂಬೆಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕಾ ನಿವೃತ್ತ ಸಂಘದ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳು ಬ್ಯಾಂಕ್ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ್, ಮನವಿ ಸಲ್ಲಿಸಿ ಎಂಟು ತಿಂಗಳು ಕಳೆದರೂ ನಮ್ಮ ಈ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ಮೇಲಾಧಿಕಾರಿಗಳಿಗೆ ಹಾಗೂ ಸಿಬ್ಬದಿಗಳಿಗೆ ಗ್ರಾಹಕರ ಬಗ್ಗೆ ಕಾಳಜಿ ಇದ್ದಂತೆ ತೋರುವುದಿಲ್ಲ. ಕೇವಲ ಠೇವಣಿ ಸಂಗ್ರಹ ಮಾಡಿದರೆ ಬ್ಯಾಂಕ್ ಉದ್ದಾರವಾಗುವುದಿಲ್ಲ. ಗ್ರಾಹಕರೊಂದಿಗೆ ಸಂಯಮದಿಂದ ನಡೆದುಕೊಳ್ಳಬೇಕು. 15 ದಿವಸದೊಳಗೆ ರೀಸನಲ್ ಮ್ಯಾನೇಜರ್ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು. ಧರಣಿ ಇಲ್ಲಿಗೇ ಮುಗಿದಿಲ್ಲ ಮುಂದುವರೆಯುತ್ತದೆ ಎಂದ ಅವರು ಸಿಂಡಿಕೇಟ್ ಬ್ಯಾಂಕಿನಲ್ಲಿಯೂ ಸಹ ಗ್ರಾಹಕರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿಯ ಸಿಬ್ಬಂದಿಗಳು ಕನ್ನಡ ಮಾತನಾಡಿ ಸಾರ್ವಜನಿಕರೊಂದಿಗೆ ಸಹಕರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ತಹಶೀಲ್ದಾರ ಮಂಜುನಾಥ ಮನೋಳಿ ಮಾತನಾಡಿ ಶಾಖಾ ವ್ಯವಸ್ಥಾಪಕರ ಹಂತದಲ್ಲಿ ಅಗುವ ಕೆಲಸಗಳನ್ನು ಮಾಡಲು ತಿಳಿಸಿದ್ದೇವೆ. ಹಿರಿಯ ನಾಗರಿಕರಿಗೆ, ಪಿಂಚಣಿದಾರರಿಗೆ, ಅಂಗವಿಕಲರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ನಲ್ಲಿ ಶೀಘ್ರ ಸೇವೆ ನೀಡಲು, ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಹಾಗೂ ಕನ್ನಡದಲ್ಲಿ ವ್ಯವಹರಿಸಿ ಗ್ರಾಹಕರೊಂದಿಗೆ ಸ್ಪಂದಿಸುವಂತೆ ತಿಳಿಸಿದರು.

ಸಹಾಯಕ ವ್ಯವಸ್ಥಾಪಕ ಪ್ರಕಾಶ್ ಪುರಾಣಿಕ್ ಮಾತನಾಡಿ ಗ್ರಾಹಕಮಿತ್ರರನ್ನು ನೇಮಿಸಿ ಎಲ್ಲರಿಗೂ ಸಹಾಯ ಒದಗಿಸುತ್ತೇವೆ. ಪಿಂಚಣಿ ಸಮಯದಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡುತ್ತೇವೆ. ಬ್ಯಾಂಕ್ ನವೀಕರಣಕ್ಕೆ ಈಗಾಗಲೇ ಪ್ರಸ್ಥಾವನೆ ಕಳಿಸಿದ್ದೇವೆ. ಗ್ರಾಹಕರೊಂದಿಗೆ ಸೌಜನ್ಯದಿಂದ ವತರ್ಿಸುವಂತೆ ಸಿಬ್ಬಂದಿಗಳ ಸಭೆಯಲ್ಲಿ ತಿಳಿಸಿದ್ದೇವೆ ಎಂದ ಅವರು ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ವೀರಭದ್ರ ನಾಯ್ಕ, ಸಂಕಲ್ಪ ಸೇವಾ ಟ್ರಸ್ಟ್ನ ಪಿ.ಬಿ. ಹೊಸೂರು, ವರ್ತಕರ ಸಂಘದ ಉಪಾಧ್ಯಕ್ಷ ವಿನಾಯಕ ಶೇಟ್, ಕ.ರ.ವೇ. ತಾಲೂಕಾಧ್ಯಕ್ಷ ದಿವಾಕರ ನಾಯ್ಕ, ಜಯಕನರ್ಾಟಕ ಸಂಘಟನೆ ತಾಲೂಕಾಧ್ಯಕ್ಷ ಶಂಕರಮೂತರ್ಿ ನಾಯ್ಕ, ಅಂಬೇಡ್ಕರ್ ಶಕ್ತಿಸಂಘದ ನಂದನ್ ಬೋರ್ಕರ್, ಜಾಗೃತ ನಾಗರಿಕ ವೇದಿಕೆಯ ವಾಸುದೇವ ಬಿಳಗಿ, ಯವ ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ಶಿರಳಗಿ ಹಾಗೂ ಈ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.