ಚೆನ್ನೈ 30: ಕಾಳಧನ ಪ್ರಕರಣದಲ್ಲಿ ಆಗಸ್ಟ್ 20ರಂದು ತನ್ನ ಮುಂದೆ ತಪ್ಪದೇ ಹಾಜರಾಗುವಂತೆ ನಗರದ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಇಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕುಟುಂಬ ಸದಸ್ಯರಿಗೆ ಆದೇಶಿಸಿದೆ.
ಚಿದಂಬರಂ ಅವರ ಪತ್ನಿ ನಳಿನಿ, ಪುತ್ರ ಕಾತರ್ಿ ಮತ್ತು ಆತನ ಪತ್ನಿ ಶ್ರೀನಿಧಿ ಅವರು ಇಂದು ಈ ಪ್ರಕರಣಕ್ಕೆ ಸಂಬಂಧಿಸಿ ಕೋಟರ್ಿನಲ್ಲಿ ಹಾಜರಿರಬೇಕಿತ್ತು. ಅದಕ್ಕೆ ವಿಫಲರಾಗಿರುವ ಕಾರಣ ಇವರು ಆಗಸ್ಟ್ 20ರಂದು ತಪ್ಪದೇ ಹಾಜರಾಗಬೇಕೆಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಮಲರವಿಳಿ ಅವರು ಆದೇಶಿಸಿದರು.
ಐಟಿ ಇಲಾಖೆಯ ಪ್ರಕಾರ ಕಾತರ್ಿ ಚಿದಂಬರಂ ಅವರು ಬ್ರಿಟನ್ನಲ್ಲಿನ ಮೆಟ್ರೋ ಬ್ಯಾಂಕ್ನಲ್ಲಿರುವ ತನ್ನ ಖಾತೆಯನ್ನು ಮತ್ತು ಅಮೆರಿಕದ ನ್ಯಾನೋ ಹೋಲ್ಡಿಂಗ್ ಎಲ್ಎಲ್ಸಿಯಲ್ಲಿನ ತನ್ನ ಹೂಡಿಕೆಯನ್ನು ಬಹಿರಂಗಪಡಿಸಿಲ್ಲ; ಹಾಗೆಯೇ ತನ್ನ ಸಹ ಒಡೆತನದ ಚೆಸ್ ಗ್ಲೋಬಲ್ ಅಡ್ವೈಸರಿ ಕಂಪೆನಿ ಮಾಡಿರುವ ಹೂಡಿಕೆಯನ್ನು ಕೂಡ ಕಾತರ್ಿ ಬಹಿರಂಗಪಡಿಸಿಲ್ಲ; ಇದು ಕಾಳಧನ ಕಾಯಿದೆಯಡಿಯ ಅಪರಾಧವಾಗುತ್ತದೆ.