ದೇಶ ಭಕ್ತರ ಪ್ರಾಣ ಬಲಿದಾನದಿಂದ ದೇಶ ಸ್ವಾತಂತ್ರ್ಯ ಕಂಡಿದೆ: ಮುಜಮ್ಮೀಲ್

ಲೋಕದರ್ಶನ ವರದಿ

ಮಹಾಲಿಂಗಪುರ: ಭಾರತ ದೇಶ ಸ್ವಾತಂತ್ರವನ್ನು ಕಾಣಬೇಕಾದರೆ ಅನೇಕ ಮಹಾನ್ ದೇಶ ಭಕ್ತರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ ಅವರ ಬಲಿದಾನದ ಪ್ರತಿಫಲವೆ ಇಂದು ನಾವು ಭಾರತ ದೇಶವನ್ನು ಸ್ವಾತಂತ್ರವನ್ನಾಗಿ ಕಾಣುತ್ತಿದ್ದೇವೆ ಎಂದು ಮೌಲಾನಾ ಪಿ.ಎಮ್. ಮುಜಮ್ಮೀಲ್ ಸಾಹಬ್ ಹೇಳಿದರು. 

  ಶನಿವಾರ ಟಿಪ್ಪು ಸುಲ್ತಾನ ಮೊಹಲ್ಲಾದಲ್ಲಿ ನಡೆದ 4 ನೇ ಬಾರಿಗೆ ಸ್ವಾತಂತ್ರ್ಯ ಯೋಧರ ವಿಚಾರ ಸಂಕಿರ್ಣ ಸಮಾರಂಭದ ಭಾಗವಹಿಸಿ ಮಾತನಾಡಿದ ಅವರು ಭಾರತ ದೇಶ ಸ್ವತಂತ್ರವಾಗಲು ಎಲ್ಲ ಸಮುದಾಯ,ಜಾತಿ, ಜನಾಂಗಗಳ ದೇಶ ಭಕ್ತರು ಸುಮಾರು ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ ಅದರಲ್ಲಿ ಕೆಲವರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. 

           ಅಂಥವರಲ್ಲಿ ಮಹಾತ್ಮಾ ಗಾಂಧಿಜೀ,  ವೀರರಾಣಿ ಕಿತ್ತೂರ ಚನ್ನಮ್ಮ, ಸಂಗೋಳ್ಳಿ ರಾಯಣ್ಣ, ಅಬೇಡ್ಕರ, ಭಗತ ಸಿಂಗ್ ಇವರೊಂದಿಗೆ ಇನ್ನೂ ಹಲವಾರು ಜನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಇಂಥ ಮಹಾತ್ನ ಹೋರಾಟಗಾರರ ತತ್ವಾದರ್ಶಗಳನ್ನು ನಾವು ಕೂಡ ನಮ್ಮ ಜೀವನದಲ್ಲಿ ಸ್ವಲ್ಪ ಮಟ್ಟಿಗಾದರೂ ಅಳವಡಿಸಿಕೊಂಡಾಗ ಮಾತ್ರ ಇಂಥ ವಿಚಾರ ಸಂಕಿರ್ಣ ಕಾರ್ಯಕ್ರಮಗಳಿಗೆ ಒಂದು ಅರ್ಥ ಬರುತ್ತದೆ. ಬರೀ ಅವರ ಭಾವಚತ್ರಕ್ಕೆ  ಪೂಜೆ ಸಲ್ಲಿಸಿ ಮಾತನಾಡಿ ಹೋದರೆ ಸಾಲದು ಎಂದರು.

   ನಂತರ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಸಿಗೆ ನೀರು ಹಾಕುವ ಮೂಲಕ ಈ ಸಮಾರಂಭಕ್ಕೆ ಚಾಲನೆ ನೀಡಿದರು.ಜೊತೆಗೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು.ಮತ್ತು ವಿವಿದ ಶಾಲಾ ಮಕ್ಕಳು ದೇಶಭಕ್ತರ ವೇಶಭೂಷಣಗಳನ್ನು ಹಾಕಿ ಪ್ರದರ್ಶನ ನೀಡಿದರು.  

  ನಂತರ ಮುಧೋಳದ ಹಾಫೀಜ್ ಅಬ್ದುಲ್ವಹಾಬ್, ಮೌಲಾನಾ ಝಕರೀಯಾ ಸಾಹಬ್, ಮೌಲಾನಾ ಸಮೀರ, ಕನ್ನಡದ ಕಭೀರ ಇಬ್ರಾಹಿಂ ಸುತಾರ, ಎಸ್. ಎಂ.ಶೇಖ ಮಾತನಾಡಿ ಇತ್ತಿಚೇಗೆ ದೇಶದ ಕೆಲ ಪಟ್ಟಬದ್ದ ಹಿತಾಸಕ್ತಿಗಳ ವಿಚಾರದಾರೆಗೆ ನಮ್ಮ ನಾಯಕರು ಒಳಗಾಗಿ ದೇಶ ಒಡೆದು ಹಾಕುವ ಹುನ್ನಾರ ನಡೆಸುತ್ತಿದ್ದಾರೆ.

     ಆದರೆ ನಮ್ಮ ದೇಶದ ಯುವ ಶಕ್ತಿ ಮುಂದಾದರೆ ನಮ್ಮ ದೇಶವನ್ನು ಒಡೆಯುವುದು ಇರಲಿ, ಸಮೀಪ ಸುತ್ತುವುದು ಸಹ ಕಷ್ಟದ ವಿಷಯವಾಗಿದೆ. ಆದ್ದರಿಂದ ನಮ್ಮ ಯುವಕರು ಬೇರೆಯವರ ಮಾತಿಗೆ ಬಲಿಯಾಗದೆ ಎಲ್ಲರೂ ಒಂದಾಗಿ ದೇಶವನ್ನು ಉಳಿಸಲು, ಕಟ್ಟಿಬೆಳೆಸುವಲ್ಲಿ ಮುಂದಾಗಬೇಕು ಎಂದರು. 

  ನಜೀರಸಾಬ್ ಕಂಗನೋಳ,  ಮೈನುದ್ದಿನ ರೆವಡಿಗಾರ, ಸಜನಸಾಬ ಪೆಂಡಾರಿ, ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ,  ನಿಜಾಮ ಅಲ್ಲಾಖಾನ,ಸೈಯದ ಜಕಲಿ, ಮಹಿಬೂಬ ಬಾರಿಗಡ್ಡಿ,  ಗಂಗಾಧರ ಮೇಟಿ, ಅಸ್ಲಂ ಕೌಜಲಗಿ, ಪಾರೂಖ ಪಕಾಲಿ, ಟಿಪ್ಪು ಸುಲ್ತಾನ ಸಂಘರ್ಷ ಸಮೀತಿ ಅಧ್ಯಕ್ಷ ಅಬ್ದುಲ್ಲಾಹ ಆಲಗೂರ, ಶಫೀಕ ಪೇಬಾರಿ, ಯುನೂಸ ಬೀಳಗಿ, ಗುಲಾಭ ನಧಾಫ, ಬಂದೇನಮಾಜ ಸಿಂದಗಿ, ಹುಸೇನ ಗಡ್ಡಿ, ಸೈಯದ ಅಂಬಿ, ದಾನೇಶ ಶೇಖ ಸೇರಿದಂತೆ ಹಲವರು ಇದ್ದರು. ಇಬ್ರಾಹಿಂ ಸುತಾರ ಸ್ವಾಗತಿಸಿದರು.ಫಜಲ್ ಪಣಿಬಂದ ನಿರೂಪಿಸಿದರು. ಯಾಸೀನ ಅವಟಿ ವಂದಿಸಿದರು.