ಲೋಕದರ್ಶನ ವರದಿ
ಕೊಪ್ಪಳ 30: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸಕರ್ಾರದ ನಮ್ಮ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಉತ್ತಮ ಜನಪರ ಕಾರ್ಯಕ್ರಮ ಸಹಿಸದ ಕೆಲವರು ಅವರ ಹೆಸರಿಗೆ ಕಪ್ಪು ಚುಕ್ಕಿ ತರಲು ಮುಖ್ಯಮಂತ್ರಿ ಸ್ಥಾನಕ್ಕೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ವಿರೇಶ ಮಹಾಂತಯ್ಯನಮಠ ಆಕ್ರೋಶ ವ್ಯಕ್ತಪಡಿಸಿ ಇಂತಹ ಹುನ್ನಾರ ಕೈಬಿಡುವಂತೆ ಒತ್ತಯಿಸಿದ ಅವರು ಇದು ಒಳ್ಳೆಯದಲ್ಲ ಎಂದಿದ್ದಾರೆ.
ಅವರು ಸೋಮವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸ್ವರಾಜ ಇಂಡಿಯಾ ಕಂಪನಿ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಲು ರೈತರ ಸಾಲ ಮನ್ನಾ ವಿಷಯದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿ ಮಾಡಿದ್ದಾರೆ ಉದ್ದೇಸ ಪೂರ್ವಕವಾಗಿ ಈ ರೀತಿ ರೈತರ ದಾರಿ ತಪ್ಪಿಸುವ ಕೆಲಸ ಮಾಡಿ ಮುಖ್ಯಮಂತ್ರಿ ಮತ್ತು ಸಕರ್ಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಎಮದು ಹೇಳಿದರು.
ಅಧಿಕಾರ ಕಳೆದುಕೊಂಡ ಬಿಜೆಪಿ ಹತಾಶಯ ಭಾವನೆಯಿಂದ ರೈತರಿಗೆತಪ್ಪು ಮಾಹಿತಿ ನೀಡಿ ಸಕರ್ಾರದ ವಿರುದ್ಧ ಮತ್ತು ಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆ ನಮ್ಮ ನಾಯಕ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಜಾತಿ ಮತ ಬಿಟ್ಟು ನನಗೆ ಓಟು ಹಾಕಿಲ್ಲ ಎಂದಿದ್ದಾರೆ ವಿನಃ ಉತ್ತರ ಕನರ್ಾಟಕ ಜನರ ಬಗ್ಗೆ ಕೊಪ್ಪಳದ ಜನರ ಬಗ್ಗೆ ರೈತರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಇದನ್ನು ತಿರುಚಿ ಇ ರಿತಿ ಗೊಂದಲ ಸೃಷ್ಟಿಸಿ ಪ್ರತಿಭಟನೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ದರ್ಶನ ಪುಟ್ಟಣ್ಣಯ್ಯನವರು ಮಹಾದಾಯಿ ವಿಷಯದ ಬಗ್ಗೆ ಏಕೆ ವಿಷಯ ಎತ್ತಿಲ್ಲ ಈಗ ಃಈಗೆಕೆ ಮಾಡಿದ್ದಾರೆಂಬುವುದು ತಿಳಿಯದಂತಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ವಿರೇಶ ಮಹಾಂತಯ್ಯನಮಠರವರು ಪ್ರಶ್ನಿಸಿ ಅಗಸ್ಟ್ 2ರ ಪ್ರತಿಭಟನೆ ಮತ್ತು ಬಂದ್ಗೆ ಯಾರೂ ಬೆಂಬಲಿಸುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸಿದ್ದೇಶ ಪುಜಾರ್, ತಾಲೂಕ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಯ್ಯೂಬ್ ಅಡ್ಡೇವಾಲೆ ಹಾಗೂ ವಕ್ತಾರ ಮೌನೇಶ ವಡ್ಡಟ್ಟಿ ಮತ್ತಿತರರು ಉಪಸ್ಥಿತರಿದ್ದರು.