ಜಾತಿಗೊಂದು ಜಯಂತಿ ಸಮಾಜ ಅಶಾಂತಿ

ಲೋಕದರ್ಶನ ವರದಿ

ಹರಪನಹಳ್ಳಿ 04: ಸಕರ್ಾರಗಳು ಜಾತಿಗೊಂದು ಜಯಂತಿ ಮಾಡಿ ಸಮಾಜದ ಶಾಂತಿಯನ್ನು ಕದಡುವಂತ ಕೆಲಸ ಮಾಡಿ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದ್ದಾರೆ ಎಂದು ಜಿ.ಪಂ. ಸದಸ್ಯೆ ಸುವರ್ಣ ಆರುಂಡಿ ನಾಗರಾಜ್ ಹೇಳಿದರು.

ಮುಂದಿನ ದಿನಗಳಲ್ಲಿ ಸರ್ವ ಜನಾಂಗದವರು ಸೇರಿ ಎಲ್ಲಾ ಮಹಾನಿಯರ ಜಯಂತಿಗಳನ್ನು ಒಂದೇ ದಿನದಂದು ಆಚರಣೆ ಮಾಡುವಂತಹ ದಿನಗಳು ಬರಲಿವೆ ಈ ದೇಶದಲ್ಲಿ ಇರುವುದು  ಒಂದೇ ಜಾತಿ ಅದು ಮಾನವ ಜಾತಿ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲರೂ ಒಂದೇ ಎಂಬ ಭಾವನೆಯನ್ನು ರೂಡಿಸಿಕೊಳ್ಳಬೇಕಾಗಿದೆ ಆಗಿನ ಕಾಲದಲ್ಲಿ ವಚನವನ್ನು ನಾವು ಮಾತನಾಡುವ ಭಾಷೆ ಎಂದು ಸ್ಪಷ್ಟಪಡಿಸಿದ್ದಾರೆ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ರವರಿಗೆ ಸಲ್ಲುತ್ತದೆ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮದ ಉದ್ಘಾಟನೆ ತಾಲೂಕು ಉಪವಿಭಾಗಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ನೆರವೇರಿಸಿದರು, ತಾಲೂಕು ದಂಡಾಧಿಕಾರಿ ಡಾ|| ನಾಗವೇಣಿ, ನಿಲಯ ಪಾಲಕರಾದ ಎನ್.ಜಿ.ಬಸವರಾಜ್, ಯಾಸ್ಮಿನ್ಬಾನು, ಸುನೀತ, ಸೈಯಾದ್, ನಿಚ್ಚವ್ವಹಳ್ಳಿ ಭೀಮಪ್ಪ, ಚಂದ್ರಶೇಖರ, ಸುಧೀರ್ನಾಯ್ಕ, ಶ್ರೀಕಾಂತ್, ಮತ್ತಿತರರು ಉಪಸ್ಥಿತರಿದ್ದರು.