ಲೋಕದರ್ಶನ ವರದಿ
ಯರಗಟ್ಟಿ 04: ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಯೋಗಾಸನ ಹಾಗೂ ವ್ಯಾಯಾಮ ಮಾಡುವುದರಿಂದ ದೇಹ ಸದೃಡಗೊಂಡು ಮನಸ್ಸು ಪರಶುದ್ದವಾಗಿರುತ್ತದೆ ಎಂದು ಸಿ.ಎಮ್.ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ. ಈರಣ್ಣ ಬೂಸ್ಥಳಿ ಹೇಳಿದರು.
ಇಲ್ಲಿನ ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘ ತಾವಲಗೇರಿ, ಸಿ. ಎಮ್. ಮಾಮನಿ ಸರಕಾರಿ ಪ್ರಥಮ ದಜರ್ೆ ಕಾಲೇಜು, ಯರಗಟ್ಟಿ ಹಾಗೂ ನೆಹರು ಯುವ ಕೇಂದ್ರ ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಾ.3 ರಂದು ಶಾಂತಿ-ಐಕ್ಯತೆಗಾಗಿ ಯೋಗ ಎಂಬ ಧ್ಯೇಯವಾಕ್ಯದೊಂದಿಗೆ ನೆರೆ ಹೊರೆ ಯುವ ಸಂಸತ್ತು ಕಾರ್ಯಕ್ರಮ 2019-20 ಮತ್ತು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಹರು ಯುವ ಕೇಂದ್ರ ಬೆಳಗಾವಿ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾತನಾಡಿ ಯುವಕ-ಯುವತಿಯರು ನಿರಂತರ ಅದ್ಯಯನದ ಮೂಲಕ ಯಶಸ್ಸು ಸಾದಿಸಬಹುದು ಎಂದರು.
ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ ಕಾರ್ಯಕ್ರಮ ಉದ್ಘಾಟಿಸಿದರು, ಯುಥ್ ರೆಡ್ ಕ್ರಾಸ್ ಸಂಚಾಲಕ ಶಿದ್ಲಿಂಗಪ್ಪ ಗಾಳಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಫ. ಖಂಡ್ರಿ, ಡಾ. ಮಹಾಂತೇಶ ಹಿರೇಮಠ, ಆರ್. ಆರ್. ಮುತಾಲಿಕ ದೇಸಾಯಿ, ಎಮ್ ಆರ್ ತಳವಾರ, ಮಂಜುನಾಥ್ ಸಿಂಗನ್ನವರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಬಿ. ಆರ್. ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘ ತಾವಲಗೇರಿ ಅಧ್ಯಕ್ಷ ಬಸವರಾಜ ಹರಿಜನ ನಿರೂಪಿಸಿದರು, ರಾಷ್ಟ್ರೀಯ ಸ್ವಯಂ ಸೇವಕ ಮಹಾದೇವ ಮುರುಗೋಡ ವಂದಿಸಿದರು.