ನಾಗರಾಜ ಹರಪನಹಳ್ಳಿ
ಕಾರವಾರ 24: ಕಡಲತೀರದ ನಗರಿ ಕಾರವಾರದ ರಾಕ್ ಗಾರ್ಡನ್, ರವೀಂದ್ರನಾಥ್ ಕಡಲತೀರ, ಯುದ್ಧನೌಕೆ ಮ್ಯುಜಿಯಂ, ಹೊಸ ವಷರ್ಾಚರಣೆ ಸಂಭ್ರಮಕ್ಕೆ ಮೈತೆರೆದು ನಿಂತಿವೆ. ಕಾರವಾರದ ಕಡಲತೀರ ಪ್ರವಾಸಿಗರನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದೆ. ಇಲ್ಲಿನ ಕಾಳಿ ರಿವರ್ ಗಾರ್ಡನ್, ಸದಾಶಿವಗಡದ ದುಗರ್ಾದೇವಿ ದೇವಸ್ಥಾನ ಹಾಗೂ ಅಲ್ಲಿಂದ ಕಾಣುವ ಕಾಳಿ ನದಿಯ ವಿಹಂಗಮ ನೋಟ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿ ಪರಿಣಮಿಸಿದ್ದು, ಪ್ರವಾಸಿಗರು ವಾರ ಮೊದಲೇ ಹೊಟೆಲ್ ಬಾಡಿಗೆ ರೂಮು ಕಾಯ್ದಿಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಸ್ಥಾನ, ಟಿಬೇಟಿಯನ್ ಕ್ಯಾಂಪ್, ಯಾಣದ ಶಿಖರ, ಗೋಕರ್ಣ, ಓಂ,ಕುಡ್ಲೆ,ಅಪ್ಸರ ಕೊಂಡ, ಮುರುಡೇಶ್ವರ ಬೀಚ್ಗಳು ಪ್ರವಾಸೋದ್ಯಮದಲ್ಲಿ ಗೋವಾಕ್ಕೆ ಪ್ರತಿಸ್ಪಧರ್ಿಯಾಗಿ ಬೆಳೆಯುತ್ತಿವೆ. ಅದರಲ್ಲಿ ಪ್ರಮುಖವಾಗಿ ಇಲ್ಲಿನ ರವೀಂದ್ರನಾಥ್ ಕಡಲತೀರ ಪ್ರವಾಸಿಗರನ್ನು ಹೊಸ ವಷರ್ಾಚರಣೆಗೆ ಕೈ ಬೀಸಿ ಕರೆಯುತ್ತಿದೆ.
ರಾಜ್ಯದ ಮೂಲಕ ಹಾದು ಹೋಗುವ ಪ್ರವಾಸಿಗರು ಗೋವಾದಲ್ಲಿ ಹೊಸ ವಷರ್ಾಚರಣೆ ನಡೆಸಲು ಹೆಚ್ಚು ಇಷ್ಟಪಡುತ್ತಿದ್ದರು. ಆದರೆ ಸುಂದರ ಬೀಚ್, ಸ್ಕೂಬಾ ಡೈವಿಂಗ್, ಡಾಲ್ಫೀನ್ ವೀಕ್ಷಣೆ, ಬೋಟಿಂಗ್, ಸಮುದ್ರ ಮೀನಿನ ಆಹಾರ ಮುಂತಾದ ಪ್ರವಾಸಿ ಆಕರ್ಷಕ ಮನರಂಜನಾ ತಾಣಗಳು, ಇಷ್ಟವಾದ ಸೀಫುಡ್ ಇಲ್ಲಿಯೂ ಲಭ್ಯವಿದೆ. ಗೋವಾದಲ್ಲಿ ನೋಡಲು ಸಿಗುವ ಎಲ್ಲವೂ ಅತ್ಯಂತ ಸುಲಭ ಬೆಲೆಯಲ್ಲಿ ಇಲ್ಲಿಯೇ ಸಿಗುತ್ತಿರುವುದರಿಂದ ಹೊಸ ವರ್ಷದ ಸಂಭ್ರಮಕ್ಕಾಗಿ ಪ್ರವಾಸಿಗರು ಗೋವಾ ಬದಲಿಗೆ ಜಿಲ್ಲಾ ಕೇಂದ್ರ ಕಾರವಾರದ ರವೀಂದ್ರನಾಥ್ ಕಡಲತೀರಕ್ಕೆ ಬರಲು ಒಲವು ತೋರುತ್ತಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಒಂದು ವಾರ ಮುಂಚೆನೇ ಇಲ್ಲಿನ ಹೊಟೆಲ್ಗಳಲ್ಲಿ ಬಾಡಿಗೆ ರೂಮು ಕಾಯ್ದಿಡುತ್ತಿರುವುದರಿಂದ ಇಲ್ಲಿನ ಹೊಟೆಲ್ಗಳ ಬಾಡಿಗೆ ರೂಮುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕ್ರಿಸ್ಮಸ್ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಹಾಗೂ ಹೊಸ ವರ್ಷದ ಸಂಭ್ರಮಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಗೋವಾದತ್ತ ಪ್ರವಾಸಿಗರು ಹೆಜ್ಜೆ ಹಾಕುತ್ತಾರೆ. ಆದರೆ ಗೋವಾದ ಲಾಡ್ಜ್ಗಳು ದುಬಾರಿ ಹಾಗೂ ಅಲ್ಲಿ ಎಲ್ಲರಿಗೂ ಬಾಡಿಗೆ ರೂಮು ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಇದಲ್ಲದೇ ಅಲ್ಲಿ ಹೊಸ ವಷರ್ಾಚರಣೆ ನಿಮಿತ್ತ ಟ್ರಾಫಿಕ್ ಜಾಮ್ ಆಗುವುದರಿಂದ ವರ್ಷದ ಕೊನೆಯ ದಿನ ಇಲ್ಲಿನ ಗಡಿ ಮೂಲಕ ಗೋವಾಕ್ಕೆ ಬರುವ ವಾಹನಗಳನ್ನು ಗೋವಾ ಪೊಲೀಸ್ ಇಲಾಖೆ ವಾಹನ ಸಂಚಾರ ನಿಯಂತ್ರಿಸುತ್ತದೆ. ಈ ಹಿನ್ನೆಲೆಯಲ್ಲಿ ಗಡಿ ಸಮೀಪ ರಾಜ್ಯದಿಂದ ಬರುವ ವಾಹನಗಳನ್ನು ಅಲ್ಲಿನ ಪೊಲೀಸರಿಂದ ಅರ್ಧಕ್ಕೆ ತಡೆಯಲಾಗುತ್ತದೆ. ಹೀಗಾಗಿ ಬಹಳಷ್ಟು ಪ್ರವಾಸಿಗರು ರವೀಂದ್ರನಾಥ್ ಕಡಲ ತೀರದತ್ತ ವಾಪಸ್ ಆಗಿ ಸಂಭ್ರಮಿಸುವ ಘಟನೆಗಳು ಮರುಕಳಿಸುತ್ತಿವೆ.
ಒಟ್ಟಾರೆ ಗೋವಾ ಪ್ರವಾಸದಲ್ಲಿ ಕಳೆದ ಬಾರಿ ಕಷ್ಟ ಅನುಭವಿಸಿದ ಪ್ರವಾಸಿಗರಿಂದ ಗೋವಾ ಹೊಸ ವಷರ್ಾಚರಣೆ ಸಂಭ್ರಮ ವಂಚಿತರಾಗ ಬಾರದೆಂದು ಮತ್ತು ಇಲ್ಲಿಯೇ ನೂತನ ವರ್ಷವನ್ನು ಬರಮಾಡಿಕೊಳ್ಳುವ ಉದ್ದೇಶದಿಂದ ಒಂದು ವಾರ ಮೊದಲೇ ಇಲ್ಲಿನ ಹೊಟೆಲ್ಗಳ ಬಾಡಿಗೆ ರೂಮುಗಳನ್ನು ಕಾಯ್ದಿರಿಸಲಾಗುತ್ತಿದೆ.
ಹೋಟೆಲ್ ಭತರ್ಿ :
ಇಲ್ಲಿನ ಪ್ರತಿಷ್ಠಿತ ಹೊಟೆಲ್ಗಳ ರೂಮುಗಳೆಲ್ಲವೂ 2019 ರ ಜನವರಿ 1 ರ ತನಕ ಬುಕ್ ಆಗಿದ್ದು, ರೂಮು ಬಾಡಿಗೆ ಸಾಮಾನ್ಯ ಮತ್ತು ಎಸಿ ಶ್ರೇಣಿಗೆ ತಕ್ಕಂತೆ, 1350 ರೂ.ನಿಂದ 2500 ರೂ.ತನಕ ದರ ಏರಿದೆ.ಮೂಲ ದರದೊಂದಿಗೆ ಶೇ.12 ಜಿಎಸ್ಟಿ ಕರ ಇದೆ. ಹೆಚ್ಚಿನ ಸೌಲಭ್ಯ ಬೇಕಾದರೆ ಹೆಚ್ಚುವರಿ ಬೆಲೆ ಆಕರಿಸಲಾಗುತ್ತದೆ. ಹೀಗಾಗಿ ಸಾಮಾನ್ಯ ದಿನಗಳಲ್ಲಿ ರೂಮ್ ಒಂದಕ್ಕೆ 1000 ರೂ.ಗಳ ಇದ್ದ ದರ, ಒಮ್ಮಿಂದಲೇ ಗಗನ ಮುಖಿಯಾಗಿದೆ ಎಂದು ಇಲ್ಲಿನ ಹೊಟೆಲ್ ಸಿಬ್ಬಂದಿ ರಮೇಶ್ ತಿಳಿಸಿದರು.