ಯರಗಟ್ಟಿ, 24: ಸಮೀಪದ ಕೊಡ್ಲಿವಾಡ ಗ್ರಾಮದಯುವಕ ಯುಪಿಎಸ್ಸಿ 910 ನೇ ರಾ್ಯಂಕ್ ಸಾಧನೆ ಮಾಡಿದ ಹನುಮಂತ ನಂದಿಗೆ ಸನ್ಮಾನಿಸಿ ಸಿಹಿ ತಿನಿಸಿ ಮಾತನಾಡಿದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಜನಪ್ರಿಯ ಶಾಸಕ ವಿಶ್ವಾಸ ವೈದ್ಯ" ನಮ್ಮ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕೊಡ್ಲಿವಾಡ ಗ್ರಾಮದ ಯುವಕ ಯುಪಿಎಸ್ಸಿ ಪರೀಕ್ಷೆಯಲ್ಲಿ 910 ರಾ್ಯಂಕ್ ಪಡೆದಿದ್ದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯ ಅವನ ಮುಂದಿನಭವಿಷ್ಯ ಉಜ್ವಲವಾಗಲಿ ಉನ್ನತ ಹುದ್ದೆಯನ್ನು ಅಲಂಕರಿಸಲಿ.ನನ್ನ ಮತಕ್ಷೇತ್ರದ ಬಡವಿದ್ಯಾರ್ಥಿಗಳು ಪ್ರತಿಭಾವಂತರೇ ಅನ್ನೋದಕ್ಕೆ ಹನುಮಂತನೇ ಸಾಕ್ಷಿ. ಶಿಕ್ಷಣ ಕಲಿಯುವ ಮಕ್ಕಳಿಗೆ ಹನುಮಂತನನ್ನು ಮಾದರಿಯನ್ನಾಗಿರಿಸಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳೇ ನಿಮ್ಮ ಆಸ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸವದತ್ತಿ ಕಾಂಗ್ರೆಸ್ ಮುಖಂಡ ಅಶ್ವತ್ ವೈದ್ಯ, ಪ್ರಕಾಶ ವಾಲಿ, ಬೇಮೂಲ್ ನಿರ್ದೇಶಕ ಶಂಕರ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯಕ್ಷರಾದ ನೀಲಕಂಠ ಶಿದ್ದಬಸನ್ನವರ, ಯರಗಟ್ಟಿ ಪಟ್ಟಣ ಪಂಚಾಯತ ಸದಸ್ಯ ನಿಖಿಲ್ ಪಾಟೀಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.