ಸಿಡಿಲಿಗೆ ಕುರಿಗಾಹಿ ಯುವಕ ಹಾಗೂ ಎತ್ತು ಸಾವು

A young shepherd goy and ox were killed by lightning

ದೇವರಹಿಪ್ಪರಗಿ 24: ತಾಲ್ಲೂಕಿನ ಆಲಗೂರ ಹಾಗೂ ಹುಣಶ್ಯಾಳ ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ಸಿಡಿಲು ಬಡಿದು ಕುರಿಗಾಹಿ ಯುವಕ ಹಾಗೂ ಎತ್ತು ಸಾವನ್ನಪ್ಪಿದೆ. 

ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಆಕಾಶ ಹಯ್ಯಾಳದಪ್ಪ ಯಂಕಂಚಿ(19) ಕುರಿಗಾಹಿ ಸಮಯದಲ್ಲಿ ಮಳೆ ಗಾಳಿ, ಸಿಡಿಲಿನ ಹೊಡೆತಕ್ಕೆ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಗೆ ಕಲಕೇರಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಹುಣಶ್ಯಾಳ ಗ್ರಾಮದ ಪ್ರಭುಗೌಡ ನಂ. ದೇವರಗುಡಿ ಎಂಬವರಿಗೆ ಸೇರಿದ ತೋಟದಲ್ಲಿ ಕಟ್ಟಿದ್ದ ಎತ್ತಿಗೆ ಸಿಡಿಲಿನ ಹೊಡೆತಕ್ಕೆ ಒಂದು ಎತ್ತು ಮೃತಪಟ್ಟಿದ್ದೆ. ಸ್ಥಳಕ್ಕೆ ಕೋರವಾರ ಪಶು ವೈದ್ಯಾಧಿಕಾರಿಗಳು ಡಾ. ಪ್ರಶಾಂತ ತಳವಾರ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿದ್ದಾರೆ.  

*ಬೇವಿನ ಮರದಡಿ ಘಟನೆ* ತಾಲೂಕಿನ ಆಲಗೂರ ಗ್ರಾಮದ ಕುರಿಗಾಹಿ ಯುವಕ ಎಂದಿನಂತೆ ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸಲು ತೆರಳಿದ್ದನು. ಇನ್ನೇನು ಮನೆ ಕಡೆಗೆ ಹೋಗಬೇಕು ಎನ್ನುವ ಸಮಯದಲ್ಲಿ ಸಂಜೆ 4:30ರ ವೇಳೆಗೆ ದಿಢೀರ್ ಮಳೆ ಸುರಿಯಲಾರಂಭಿಸಿದ್ದರಿಂದ ಬೇವಿನ ಮರದಡಿ ಆಶ್ರಯ ಪಡೆಯಲು ನಿಂತಿದ್ದ. ಈ ವೇಳೆ ಸಿಡಿಲು ಬಡೆದು ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. 

*ಸ್ಥಳಕ್ಕೆ ಅಧಿಕಾರಿಗಳು ದೌಡು*ವಿಷಯ ತಿಳಿಯುತ್ತಿದ್ದಂತೆ ದೇವರಹಿಪ್ಪರಗಿ ತಹಸೀಲ್ದಾರ್ ಪ್ರಕಾಶ ಸಿಂದಗಿ, ಕಂದಾಯ ನೀರೀಕ್ಷಕರಾದ ಸಂಗಮೇಶ ಗ್ವಾಳೇದ, ಕಲಕೇರಿ ಪಿಎಸ್‌ಐ ಸುರೇಶ ಮಂಟೂರ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

*ಇಲಾಖೆಯಿಂದ ಎಲ್ಲ ಕ್ರಮ* ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ್ದು ಪರೀಶೀಲನೆ ನಡೆಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಕ್ರಮ ಕೈಗೊಳ್ಳಲಾಗಿದ್ದು. ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಂದ ವರದಿ ಪಡೆದುಕೊಂಡು ಸರ್ಕಾರಕ್ಕೆ ವರದಿ ಒಪ್ಪಿಸಲಾಗುವುದು ಎಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ತಿಳ್ಸಿದ್ದಾರೆ.