ಕಾಗವಾಡ 24: ತಾಲೂಕಿನಲ್ಲಿ ಮಂಗಳವಾರ ಹಾಗೂ ಬುಧವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಪಟ್ಟಣದ ಅಥಣಿ ರಸ್ತೆಗೆ ಹಾಗೂ ಸುತ್ತಮುತ್ತಲಿನ ಸುಮಾರು 20 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿ, ತಂತಿಗಳು ತುಂಡಾಗಿವೆ. ಇದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಅಪಾರ ಹಾನಿ ಸಂಭವಿದೆ.
ಮಂಗಳವಾರ ರಾತ್ರಿ ಸುರಿದ ಮಳೆ ಬಿರುಗಾಳಿಗೆ ಪಟ್ಟಣದ ಬೆಳಗಾವಿ ರಸ್ತೆಗೆ ಹೊಂದಿಕೊಂಡಿರು ಬಾಬನಗೌಡ ಪಾಟೀಲ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ ಸುಮಾರು ನಾಲ್ಕು ಕೊಣೆಗಳ ಹಾಗೂ ಸಭಾಂಗಣದ ಮೇಲ್ಚಾವಣಿ ಹಾರಿ ಹೋಗಿದ್ದು, ಶಾಲೆಗಳು ರಜೆ ಇರುವು ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲಾ.
ಬುಧವಾರವು ಕೂಡ ರಭಸವಾದ ಗಾಳಿ ಮಳೆ ಬಿದ್ದಿರುವ ಪರಿಣಾಮ ಗಿಡಗಳು ರಸ್ತೆಯ ಮೇಲೆ ಹೊರಳಿದ್ದು, ಅಧಿಕಾರಿಗಳು ಕೂಡಲೇ ಮರಗಳನ್ನು ತೆರವು ಗೋಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಒಂದು ಕಡೆ ಬಿಸಿಲಿನ ಜಳಕ್ಕೆ ಬೇಸತ್ತಿದ್ದ ಜನಕ್ಕೆ ಮಳೆರಾಯ ತಂಪೆಯೆರೆದರೇ ಇನ್ನೊಂದು ಕಡೆ ಬಿರುಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಮೇಲ್ಚಾವಣಿಗಳು ಹಾರಿಹೋಗಿ ಬಹಳಷ್ಟು ಹಾನಿಯಾಗಿದೆ. ಶಾಸಕ ರಾಜು ಕಾಗೆ ಶಾಲೆಗೆ ಭೇಟಿ ನೀಡಿ, ಸರ್ಕಾರದಿಂದ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.