ಕಾಂಗ್ರೆಸ್ನವರು ಮಾಡಿರುವ ಆರೋಪಗಳು ಸುಳ್ಳು: ವೀರಣ್ಣ

ಲೋಕದರ್ಶನ ವರದಿ

ಯಲಬುಗರ್ಾ 09: ನಮ್ಮ ತಾಲೂಕಿಗೆ ಹೈದ್ರಾಬಾದ್ ಕನರ್ಾಟಕ ಅಭಿವೃದ್ಧಿ ಮಂಡಳಿಯಿಂದ ಶಾಸಕರಿಗೆ 30 ಕೋಟಿ ಅನುಧಾನ ಬಂದಿದೆ ಹೊರತು ರಾಜ್ಯ ಸರಕಾರದಿಂದ ಅಲ್ಲಾ ಇಲ್ಲಿಯವರೆಗೂ ಸರಕಾರದಿಂದ ಒಂದು ಪೈಸೆ ಕೂಡಾ ನಮ್ಮ ತಾಲೂಕಿಗೆ ಅನುಧಾನ ಬಿಡುಗಡೆಗೊಂಡಿಲ್ಲಾ ಎಂದು ಬಿಜೆಪಿ ತಾಲೂಕ ವಕ್ತಾರ ವೀರಣ್ಣ ಹುಬ್ಬಳ್ಳಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.  ನಗದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ನಮ್ಮ ಶಾಸಕರ ವಿರುದ್ಧ ಹುರುಳಿಲ್ಲದ ಆರೋಪ ಮಾಡಿದ್ದು ಸರಿಯಲ್ಲಾ, ಶೌಚಾಲಯ ಶಂಕುಸ್ಥಾಪನೆ ಮಾಡಿದ ಮೊದಲ ಶಾಸಕ ಎಂದಿದ್ದಾರೆ ಇವರಿಗೆ ಸ್ವಚ್ಚತೆ ಎಂದರೆ ಏನು ಎನ್ನುವ ಪರಿಕಲ್ಪನೆ ಗೊತ್ತಿಲ್ಲಾ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋಧಿಯವರ ಸ್ವಚ್ಚ ಭಾರತ ಕನಸು ಅದು ಆದ್ದರಿಂದ ಪ್ರತಿ ಮನೆಗೆ ಶಾಲೆಗೆ ಶೌಚಾಲಯ ನಿಮರ್ಿಸುವ ಗುರಿ ಹೊಂದಿದ್ದೆವೆ ಅದರಂತೆ ಶಾಸಕರು ಶಂಕುಸ್ಥಾಪನೆ ನೇರವೇರಿಸಿದ್ದರಲ್ಲಿ ತಪ್ಪಿಲ್ಲಾ, ನಮ್ಮ ತಾಲೂಕಿನಲ್ಲಿ ಸತತ 25 ವರ್ಷಗಳ ಕಾಲ ಆಡಳಿತ ಮಾಡಿದ ಮಾಜಿ ಸಚಿವ ರಾಯರಡ್ಡಿಯವರ ಕೊಡುಗೆ ಏನು ಎಂಬುವದನ್ನ ಅವರು ಹೇಳಲಿ ಹಾಗೂ ನೀರಾವರಿ, ಕನಕ ಭವನ, ಪುರ ಭವನ, ಕೆರೆ ತುಂಬಿಸುವ ಯೋಜನೆಗಳ ಜಾರಿಯಾಗಿದ್ದಾವೆ ಎಂದು ಬ್ಯಾನರ್ ಹಾಕಿಸಿ ಸುಳ್ಳು ಪ್ರಚಾರ  ಮಾಡಿ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದು ಕಾಂಗ್ರೆಸ್ನವರು ಅವರು ಹೇಳಿದ ಒಂದು ಕಾಮಗಾರಿಯೂ ಪ್ರಾರಂಭವಾಗಿರುವದಿಲ್ಲಾ ಹಾಗೂ ಸಿಸಿ ರಸ್ತೆ ಮಾಡುವದರಲ್ಲಿ ತಪ್ಪಿಲ್ಲಾ ಆದರೆ ಅದನ್ನು ಜನತೆಗೆ ಉಪಯೋಗವಾಗುವಂತೆ ಗುಣಮಟ್ಟದಿಂದ ಮಾಡಲಾಗುವದು ಹಾಗೂ ಇವರು ಮಾಡಿದ ಸಿಸಿ ರಸ್ತೆಗಳು  ಕೇವಲ ಒಂದು ವರ್ಷದಲ್ಲಿ ಕಿತ್ತು ಹೋಗಿದ್ದು ಜನತೆ ನಡೆದಾಡದ ಸ್ಥಿತಿಯಲ್ಲಿವೆ ಆ ರೀತಿ ಕಾಮಗಾರಿಗೆ ನಮ್ಮಲ್ಲಿ ಅವಕಾಶವಿಲ್ಲಾ.

ನಮ್ಮ ತಾಲೂಕಿಗೆ ಬಂದಂತಹ ಆ 30 ಕೋಟಿ ಅನುಧಾನದಲ್ಲಿ ಶಿಕ್ಷಣಕ್ಕಾಗಿಯೇ 15 ಕೋಟಿ ಹಣ ಖಚರ್ು ಮಾಡಲಾಗುತ್ತಿದೆ ಅದರಲ್ಲಿ ಶಾಲಾ ಕೊಠಡಿ, ಪಿಠೋಪಕರಣ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮಕ್ಕಳಿಗೆ ಮೂಲಭೂತ ಸೌಲಭ್ಯ ಒದಗಿಸಲು ವಿನಿಯೋಗಿಸಲಾಗುತ್ತಿದೆ, ಹಾಗೂ ನಮ್ಮ ಶಾಸಕರು ಯಾವ ಪಕ್ಷ ಬೇದ ಮಾಡದೆ ಅಭೀವೃದ್ಧಿ ದೃಷ್ಠಿಯಿಂದ ಎಲ್ಲರನ್ನೂ ಸರಿಸಮಾನವಾಗಿ ಕಾಣುತ್ತಾರೆ ಎಂದರು.

ಬಿಜೆಪಿ ತಾಲೂಕಾದ್ಯಕ್ಷ ರತನ್ ದೇಸಾಯಿ ಮಾತನಾಡಿ ನಾವು ಯಾವ ಗ್ರಾಮಕ್ಕೂ ಅನ್ಯಾಯ ಮಾಡಿರುವದಿಲ್ಲ ಎಲ್ಲಾ ಗ್ರಾಮಕ್ಕೂ ಅವಶ್ಯವಿರುವ ಮೂಲಭೂತ ಸೌಲಭ್ಯಗಳನ್ನ ಒದಗಿಸಲು ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ, ಕಾಂಗ್ರೇಸ್ನವರು ಮಾಡಿದ ಆಡಳಿತ ಎಂತಹದ್ದು ಎನ್ನುವದು ತಾಲೂಕಿನ ಜನತೆಗೆ ಗೊತ್ತಿದೆ ಕೇಂದ್ರ ಸರಕಾರದ ಯೋಜನೆಗಳು ನಾನೇ ಮಾಡಿದ್ದು ಎಂದು ಮಾಜಿ ಸಚಿವರು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದರು.

ಮುಖಂಡರಾದ ಸಿ ಎಚ್ ಪೋಲಿಸ್ ಪಾಟೀಲ ಮಾತನಾಡಿ, ಇಲ್ಲಿಯವರೆಗೆ ರೈತರ ಸಾಲಮನ್ನಾ ಆಗಿರುವದಿಲ್ಲ ಅದು ಆಗಿದ್ದರೆ ಜಿಲ್ಲೆಯ ಮೆತಗಲ್ ಗ್ರಾಮದ ಒಂದೆ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲಾ, ಇಲ್ಲಿಯವರೆಗೂ ಗೋಶಾಲೆಗಳು ಪ್ರಾರಂಭವಾಗಿರುವದಿಲ್ಲಾ ಜನ ಗುಳೆ ಹೋಗುತ್ತಿದ್ದು ಉದ್ಯೋಗ ನೀಡುತ್ತಿಲ್ಲಾ, ಬೆಳೆ ಪರಿಹಾರ ವಿತರಣೆಯಾಗಿಲ್ಲಾ ಹಿಗೇ ಹಲವಾರು ಯೋಜನೆಗಳಿಗೆ ರಾಜ್ಯ ಸರಕಾರ ಅನುಧಾನ ನಿಡುತ್ತಿಲ್ಲಾ ಎಂದರು.

ತಾಪಂ ಸದಸ್ಯ ಶರಣಪ್ಪ ಈಳಗೇರ, ಪಪಂ ಸದಸ್ಯರಾದ ಅಂದಯ್ಯ ಕಳ್ಳಿಮಠ, ಅಶೋಕ ಅರಕೇರಿ, ಬಸವಲಿಂಗಪ್ಪ ಕೊತ್ತಲ, ಅಮರೇಶ ಹುಬ್ಬಳ್ಳಿ, ಮುಖಂಡರಾದ ಪ್ರಭುರಾಜ ಕಲಬುಗರ್ಿ, ಸಿದ್ರಾಮೇಶ ಬೆಲೇರಿ, ಈರಪ್ಪ ಬಣಕಾರ, ಶಿವಾನಂದ ಬಣಕಾರ, ದೊಡ್ಡಯ್ಯ ಗುರುವಿನ, ಶಿವನಗೌಡ್ರ ಬನ್ನಪ್ಪಗೌಡ್ರ, ಸುರೇಶ ಹೊಸಳ್ಳಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.