ಸಮಾಜದ ಸ್ವಾಸ್ಥ್ಯಕ್ಕೆ ಮಾಧ್ಯಮ ಬಹು ಪರಿಣಾಮಕಾರಿ: ಸೋಮಶೇಖರ ರೆಡ್ಡಿ

ಬಳ್ಳಾರಿ: ಸಮಾಜದ ಅಭಿವೃದ್ದಿಗಾಗಿ  ಆಡಳಿತ ನಡೆಸುವವರು, ಸರಿದಾರಿಯಲ್ಲಿ ಹೋಗದಿದ್ದಾಗ ಎಚ್ಚರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಇಂದಿನಿಂದಲೂ ಮಾಧ್ಯಮಗಳ ಪಾತ್ರ ಮಹತ್ವ ಪೂರ್ಣವಾದುದು ಎಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಅವರು ನಿನ್ನೆ ಸಂಜೆ ಬಳ್ಳಾರಿ ಪತ್ರಕರ್ತರು ನಗರದ ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಗೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯ ನಡುವೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಮಾಧ್ಯಮಗಳು ಇಂದು ಹಲವು ರೀತಿಯಲ್ಲಿ ವಿಸ್ತಾರಗೊಂಡಿವೆ. ಪತ್ರಿಕೆ, ರೇಟಿಯೋ, ಟಿವಿ, ವೆಬ್ ಚಾಲನ್, ಪೋರ್ಟಲ್, ಸಮಾಜಿಕ ಜಲಾತಾಣಗಳಿಂದಲೂ ಇಂದಿನ ಆಗು ಹೋಗುಗಳ ಮಾಹಿತಿ ನೀಡುವುದರ ಜೊತೆ. ಸಮಾಜದಲ್ಲಿ ನಡೆಯುವ ತಪ್ಪು ಒಪ್ಪುಗಳನ್ನು ಸಹ ತಕ್ಷಣದಲ್ಲಿ ಪ್ರತಿಬಿಂಬಿಸುವ ಕಾರ್ಯ ಮಾಡುತ್ತಿವೆ ಎಂದರು.

ವಾತರ್ಾ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕ ಬಿ.ಕೆ.ರಾಮಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್ಪಿ ಅರುಣ್ ರಂಗರಾಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಸಹಾಯಕ ನಿದರ್ೇಶಕ ಬಿ.ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಸಮಾರಂಭಕ್ಕೂ ಮುನ್ನ ಸಾಯಿ ಶೃತಿ ಮತ್ತು ಶ್ರೀನಿವಾಸರೆಡ್ಡಿ ಅವರಿಂದ ಗಾಯನ, ಸೂರ್ಯ ಕಲಾ ಟ್ರಸ್ಡ್ ಮಕ್ಕಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು. ಮಾಧ್ಯಮ ಪ್ರತಿನಿಧಿಗಳಾದ ಸುರೇಶ್ ಚವ್ಹಾಣ್ ಕಾರ್ಯಕ್ರಮ ನಿರೂಪಣೆ ಮಾಡಿದರೆ, ನರಸಿಂಹ ಮೂತರ್ಿ ಕುಲಕಣರ್ಿ ಸ್ವಾಗತಿಸಿದರು