ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಲೋಕದರ್ಶನ ವರದಿ

ಶಿಗ್ಗಾವಿ 12: ತಾಲೂಕಿನ ಹಿರೇಮಲ್ಲೂರ ಗ್ರಾಮ ಲೆಕ್ಕಾಧಿಕಾರಿ ಆನಂದ ಯಮನಪ್ಪ ದೇಸಾಯಿ. ಚಿಕ್ಕಮಲ್ಲೂರ ಗ್ರಾಮದ ಶೇಖಪ್ಪ ಭೀಮಪ್ಪ ಸಂಜೀವಪ್ಪನವರ ಇವರ ತಂದೆ ತೀರಿಕೊಂಡಿದ್ದರಿಂದ ಜಮೀನಿನ ವಾರಸಾ ಮಾಡಿಕೊಡಲು 6 ಸಾವಿರಗಳ ಹಣದ ಬೇಡಿಕೆಯಿಟ್ಟು ಕೊನೆಗೆ 3500 ರೂಗಳಿಗೆ ಒಪ್ಪಿಸಿ ಕಾನೂನು ಬಾಹಿರವಾಗಿ ಹಣ ಪಡೆಯುತ್ತಿರುವಾಗ ದಾಖಲೆಯ ಸಮೇತ ಶುಕ್ರವಾರ ಎ.ಸಿ.ಬಿ ಬಲೆಗೆ ಬಿದ್ದಿದ್ದಾನೆ.

ಈ ಕುರಿತು ಮಾಹಿತಿ ನೀಡಿದ ಡಿ.ವಾಯ್.ಎಸ್.ಪಿ ಎ.ಸಿ.ಬಿ ಪ್ರಲ್ಹಾದ ಎಸ್.ಕೆ, ಖಚಿತ ಮಾಹಿತಿ ನೀಡಿದ್ದು ಗ್ರಾಮಲೆಕ್ಕಾಧಿಕಾರಿ ಹಣ ಪಡೆಯುತ್ತಿರುವುದು ಖಚಿತ ಮಾಹಿತಿ ಮೇರೆಗೆ ಬಲೆ ಬೀಸಿದ್ದು ದೂರಿನನ್ವಯ ಕೇಸ ದಾಖಲಿಸಿ ಕ್ರಮ ಕೈಗೊಂಡಿದ್ದೇವೆ ಎಂದು ಖಚಿತ ಪಡಿಸಿದ್ದಾರೆ. ಜೊತೆಗೆ ಈತನು ಆಗಾಗ ಸಾರ್ವಜನಿಕರಿಗೆ ಹಣದ ಕುರಿತು ಪದೆ ಪದೆ ಕಿರಿ ಕಿರಿ ಮಾಡುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು. ಕಾಯರ್ಾಚರಣೆಯಲ್ಲಿ ಸುದರ್ಶನ ಕೆ.ಪಿ, ಬಸವರಾಜ ಹಳವಣ್ಣರ ಭಾಗವಹಿಸಿದ್ದರು.