ಕನರ್ಾಟಕ ಸರಕಾರ ಮರಾಠರಿಗೆ 2ಎ ವರ್ಗಕ್ಕೆ ಸೇರಿಸಲು ಆಗ್ರಹ

ಲೋಕದರ್ಶನ ವರದಿ

ಹಳಿಯಾಳ,18:  ಮಹಾರಾಷ್ಟ್ರ ಸರಕಾರವು ಆ ರಾಜ್ಯದ ಮರಾಠರಿಗೆ ಶೇ. 16 ರಷ್ಟು ಮೀಸಲಾತಿ ನೀಡಿದ್ದು ಸ್ವಾಗತಾರ್ಹವಾಗಿದ್ದು ಅದರಂತೆ ಕನರ್ಾಟಕ ಸರಕಾರವು ಮರಾಠರಿಗೆ 2ಎ ವರ್ಗಕ್ಕೆ ಸೇರಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹಳಿಯಾಳದ ಮರಾಠಾ ಮುಖಂಡರು ಆಗ್ರಹಿಸಿದ್ದಾರೆ.

ಕನರ್ಾಟಕ ಕ್ಷತ್ರೀಯ ಮರಾಠಾ ಪರಿಷತ್ (ಕೆಕೆಎಂಪಿ) ಜಿಲ್ಲಾಧ್ಯಕ್ಷ ನಾಗೇಂದ್ರ ಜಿವೋಜಿ, ಹಿರಿಯ ಮುಖಂಡರಾದ ಬಿ.ಡಿ. ಚೌಗುಲೆ, ದೇಮಣ್ಣಾ ಗೌಡಾ ಮೊದಲಾದವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.

ಕನರ್ಾಟಕದಲ್ಲಿರುವ ಮರಾಠರನ್ನು 3ಬಿ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ಸೇರಿಸಬೇಕೆಂದು ರಾಜ್ಯಾದ್ಯಂತ ಮರಾಠಾ ಮೀಸಲಾತಿ ಮೌನಕ್ರಾಂತಿ ಮೋಚರ್ಾದ ವತಿಯಿಂದ ಜನಾಗ್ರಹ ಚಳುವಳಿಗಳು ನಡೆದವು. ಹಳಿಯಾಳದಲ್ಲಿಯೂ ಸಹ ಜಿಲ್ಲಾ ಮಟ್ಟದ ಭಾರೀ ಮರಾಠಾ ಜನಬಲ ಪ್ರದರ್ಶನ ಯಶಸ್ವಿಯಾಗಿ ನೆರವೇರಿತು. ಸಮುದಾಯದ ರಾಜ್ಯ ಮುಖಂಡರು ಮುಖ್ಯಮಂತ್ರಿಗಳಿಗೆ ಭೇಟಿ ನೀಡಿ ಅಹವಾಲು ಸಲ್ಲಿಸಿದರು. ಮುಂದೆಯೂ ಸಹ ಹೋರಾಟಗಳು ನಡೆದವು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಈ ಬೇಡಿಕೆಯ ಬಗ್ಗೆ ಹಲವಾರು ಬಾರಿ ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ಆದರೂ ಸಹ ಬೇಡಿಕೆ ಈಡೇರದೇ ಇರುವುದು ನೋವಿನ ಸಂಗತಿಯಾಗಿದೆ.

ರಾಜ್ಯದ ಮರಾಠರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಭಾಜಪ ಸಕರ್ಾರದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶಂಕ್ರಪ್ಪನವರು ನೀಡಿದ ವರದಿ ಇನ್ನೂವರೆಗೂ ಸಹ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ರಾಜ್ಯ ಸಕರ್ಾರದ ಗಮನ ಸೆಳೆಯಲು ಕನರ್ಾಟಕ ಕ್ಷತ್ರೀಯ ಮರಾಠಾ ಪರಿಷತ್ ಕಾರ್ಯ ಮಾಡಲಿದೆ. ಪರಿಷತ್ನ ರಾಜ್ಯ ಸಮಿತಿಯ ನಿಯೋಗವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಗೆ ತೆರಳಿ ಮಹಾರಾಷ್ಟ್ರದಲ್ಲಿ ಮರಾಠರಿಗೆ ಶೇ. 16 ರಷ್ಟು ಮೀಸಲಾತಿ ಮಂಜೂರಿ ಮಾಡಿರುವದನ್ನು ಉಲ್ಲೇಖಿಸಿ ಕನರ್ಾಟಕದ ಮರಾಠಾ ಸಮುದಾಯದ ಬೇಡಿಕೆಯಂತೆ ಮರಾಠರನ್ನು 3ಬಿ ಪ್ರವರ್ಗದಿಂದ ಪ್ರತ್ಯೇಕಿಸಿ 2ಎ ಪ್ರವರ್ಗಕ್ಕೆ ಸೇರಿಸುವಂತೆ ಕೋರಲಾಗುವುದು. ನಂತರ ಬೇಡಿಕೆ ಈಡೇರಿಕೆಗಾಗಿ ಮುಂದಿನ ಹೋರಾಟ ಹಾಗೂ ಚಳುವಳಿಯ ರೂಪು-ರೇಷೆಗಳನ್ನು ರೂಪಿಸಲಾಗುವುದು ಎಂದು ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ನಾಗೇಂದ್ರ ಜಿವೋಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾನಾಜಿ (ಶಂಕರ) ಪಟ್ಟೇಕರ, ಪ್ರಕಾಶ ಗಿರಿ, ಪ್ರಕಾಶ ಕಮ್ಮಾರ, ರಾಜು ಹಳ್ಳೂರಕರ ಮೊದಲಾದವರು ಉಪಸ್ಥಿತರಿದ್ದರು.