ದಾಂಡೇಲಿ ಸರಕಾರಿ ಆಸ್ಪತ್ರೆ ಸಮಸ್ಯೆ ಬಗೆಹರಿಸಲು ಆಗ್ರಹ

ಲೋಕದರ್ಶನ ವರದಿ

ದಾಂಡೇಲಿ20: ನಗರದ ಸರಕಾರಿ ಆಸ್ಪತ್ರೆಯಲ್ಲಿ ಮಧ್ಯ ರಾತ್ರಿ ಹೆರಿಗೆ ವೈದ್ಯರು ಪ್ರಕರಣವೊಂದರಲ್ಲಿ ಹೆರಿಗೆ ಮಾಡಲು ನಿರಾಕರಿಸಿ ರೋಗಿಯನ್ನು ಧಾರವಾಡಕ್ಕೆ ಕರೆದುಕೊಂಡು ಹೋಗಲು ಲಿಖಿತವಾಗಿ ಶಿಪಾರಸ್ಸು ಮಾಡಿದ್ದರ ಬಗ್ಗೆ ಮುಖ್ಯ ವಿಷಯವನ್ನಾಗಿಟ್ಟುಕೊಂಡು ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯ ಪದಾಧಿಕಾರಿಗಳು ಆಸ್ಪತೆಯ ವೈದ್ಯಾಧಿಕಾರಿ ಡಾ.ಪ್ರಸಾದರವರ ಬಳಿ ಆಸ್ಪತ್ರೆಯಲ್ಲಿನ ವಿವಿಧ ಸಮಸ್ಯೆಗಳ ನಿವಾರಣೆಗಾಗಿ ಸುಧೀರ್ಘ ಚಚರ್ೆ ನಡೆಸಿದರು.

ಶನಿವಾರ ರಾತ್ರಿ ಹೆರಿಗೆ ಪ್ರಕರಣವೊಂದರಲ್ಲಿ ಆಸ್ಪತ್ರೆಯ ವೈದ್ಯ ಡಾ.ಚಿತ್ರಾ ನಗರದ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವ ಸಾಧ್ಯತೆಯಿದ್ದರೂ ಸಹ ಅನಾವಶ್ಯಕವಾಗಿ ರೋಗಿಯ ಸಂಬಂಧಿಕರಿಗೆ ಹೆರಿಗೆ ಮಾಡಿಸಲು ಧಾರವಾಡಕ್ಕೆ ಕರೆದುಕೊಂಡು ಹೋಗಲು ಲಿಖಿತವಾಗಿ ಶಿಫಾರಸ್ಸು ಮಾಡಿದ್ದರು ಆದರೆ ರೋಗಿಯ ಸಂಬಂಧಿಕರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದರು. 

ಈ ಬಗ್ಗೆ ಚಚರ್ೆ ನಡೆಸಿದ ಪದಾಧಿಕಾರಿಗಳಿಗೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ ಡಾ.ಪ್ರಸಾದ ಈಗಾಗಲೆ ವೈದ್ಯೆ ಡಾ.ಚಿತ್ರಾರವರ ಮೇಲೆ ಅನೇಕ ಬಾರಿ ದೂರು ನೀಡಲಾಗಿದೆ ವಗರ್ಾವಣೆ ಮಾಡಿಕೊಳ್ಳುವ ದುರುದ್ದೇಶದಿಂದ ಈಕೆಯು ಈ ರೀತಿಯ ವರ್ತನೆ ಮಾಡುತ್ತಿದ್ದಾಳೆ ದೂರು ಆರೋಗ್ಯ ಮಂತ್ರಿಯವರೆಗೆ ಹೋಗಿದೆ ಎಂದು ವಿವರಿಸಿ ಹೇಳಿದರು. ಅಲ್ಲದೆ ಬುಧವಾರ ಮತ್ತು ಶನಿವಾರ ನಗರದ ಸರಕಾರಿ ಆಸ್ಪತ್ರೆಯ ಅರವಳಿಕೆ ವೈದ್ಯರು ಹಳಿಯಾಳದಲ್ಲಿ ಕಾರ್ಯ ನಿರ್ವಹಿಸುವುದರಿಂದ ಇವೆರಡು ದಿನಗಳಲ್ಲಿ ತುತರ್ು ಸಂದರ್ಭದಲ್ಲಿ ಹೆರಿಗೆಯ ಸಲುವಾಗಿ ದಾಂಡೇಲಿಯ ಖಾಸಗಿ ಅರವಳಿಕೆ ವೈದ್ಯರು ಹಾಗೂ ಧಾರವಾಡದಿಂದಲು ವೈದ್ಯರನ್ನು ಕರೆಸಬಹುದಾಗಿದೆಯೆಂದು ಸ್ಪಷ್ಠೀಕರಣ ನೀಡಿದ ಅವರು ಹೆರಿಗೆ ಪ್ರಕರಣಗಳಲ್ಲಿ ವೈದ್ಯೆಯ ಸಮಸ್ಯೆಯನ್ನು ಬಿಟ್ಟರೆ ಹೆಚ್ಚಿನ ಯಾವುದೆ ಸಮಸ್ಯೆಯಿಲ್ಲವೆಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಆರು ವೈದ್ಯರು ಲಭ್ಯರಿದ್ದು ಪ್ರತಿ ದಿನ ಸುಮಾರು ನಾನೂರು ರೋಗಿಗಳನ್ನು ಪರಿಕ್ಷೀಸಲಾಗುತ್ತದೆ, ಹೊಸದಾಗಿ ಆರಂಭಗೊಂಡ 60 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ 84 ಹುದ್ದೆಗಳು ಭತರ್ಿಯಾಗಬೇಕಾಗಿದೆ ಆದರೆ ಕನರ್ಾಟಕದಲ್ಲಿ ಈ ರೀತಿಯ ಯಾವುದೆ ಆಸ್ಪತ್ರೆಯಲ್ಲಿ ಹುದ್ದೆಗಳನ್ನು ಭತರ್ಿ ಮಾಡಲಾಗಲಿಲ್ಲ ಅದರಿಂದ ದಾಂಡೇಲಿ ನಗರದಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿ ಮಹಿಳಾ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ವೈದ್ಯಾಧಿಕಾರಿ ಡಾ.ಪ್ರಸಾದ ಹೇಳಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಅಕ್ರಂ ಖಾನ, ಬಲವಂತ ಬೊಮ್ಮನಹಳ್ಳಿ, ಫೀರೋಜ್ ಫೀರಜಾದೆ, ರಮೇಶ ನಾಯ್ಕ, ರಾಜೇಂದ್ರ ಸೋಲಾಪುರಿ ಮುಂತಾದವರು ಉಪಸ್ಥಿತರಿದ್ದರು.