ಉನ್ನತ ಪ್ರಾಥಮಿಕ ಶಾಲೆಗೆ ಇನ್ನರ್ ವೀಲ್ ಕ್ಲಬ್‌ನಿಂದ ಆರ್‌ಒ ನೀರು ಶುದ್ಧೀಕರಣ ಯಂತ್ರ ದಾನ
ಕೊಪ್ಪಳ 26: ಇನ್ನರ್ ವೀಲ್ ಕ್ಲಬ್ ಕೊಪ್ಪಳವು ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆ (ಜಿಎಚ್ಪಿಎಸ್) ಗೆ 2 ಲಕ್ಷ ಮೌಲ್ಯದ ಆಧುನಿಕ ಆರ್‌ಒ ನೀರು ಶುದ್ಧೀಕರಣ ಯಂತ್ರವನ್ನು ಸ್ಥಾಪಿಸಿರುವುದನ್ನು ಹೆಮ್ಮೆಪಡುವಂತೆ ಘೋಷಿಸುತ್ತದೆ.
ಈ ಮಹತ್ವದ ದಾನವನ್ನು ಬೆಂಗಳೂರು ಮೂಲದ ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ಸ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರಕಾಂತ ಪಾಟೀಲ ಅವರು ಮಾಡಿರುವುದು ವಿಶೇಷವಾಗಿರುತ್ತದೆ.ಈ ಯೋಜನೆಯು ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳಿಗೆ ಶುಚಿ ಮತ್ತು ಸುರಕ್ಷಿತ ಕುಡಿಯುವ ನೀರಿನ ಪ್ರಾಪ್ತಿಯನ್ನು ಖಾತ್ರಿಪಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದು ಸಮುದಾಯದ ಕಲ್ಯಾಣ ಮತ್ತು ಆರೋಗ್ಯಕ್ಕೆ ತೆರೆದ ಹೃದಯದಿಂದ ಸೇವೆ ನೀಡುವ ಇನ್ನರ್ ವೀಲ್ ಕ್ಲಬ್ನ ತಾತ್ಪರ್ಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.ಈ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಕೊಪ್ಪಳದ ಅಧ್ಯಕ್ಷೆ ಉಮಾ ತಂಬ್ರಳ್ಳಿ ಮತ್ತು ಮಾಜಿ ಅಧ್ಯಕ್ಷೆ ಸುಜಾತಾ ಪಟ್ಟಣಶೆಟ್ಟಿ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕ ನಟರಾಜ್, ನಾಗರಾಜ್ ಮತ್ತು ಆರ ಓ ಟೆಕ್ನಿಷಿಯನ್ ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.