ಅಂತರ್ ವಿಶ್ವವಿದ್ಯಾಲಯಗಳ ವ್ಹಾಲಿಬಾಲ್ ಕ್ರೀಡಾಕೂಟ
ಮುಂಡರಗಿ 27: ಡಿ.18 ರಿಂದ 22ರವರೆಗೆ ಕೇರಳ ವಿಶ್ವವಿದ್ಯಾಲಯ ಕ್ಯಾಲಿಕಟ್‌ನಲ್ಲಿ ಜರುಗಿದ 2024-25ನೇ ಸಾಲಿನ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ವ್ಹಾಲಿಬಾಲ್ ಕ್ರೀಡಾಕೂಟದಲ್ಲಿ ಮುಂಡರಗಿಯ ಜ.ಅ.ವಿದ್ಯಾ ಸಮಿತಿಯ ಕ.ರಾ.ಬೆಲ್ಲದ ಮಹಾವಿದ್ಯಾಲಯದ ಬಿ.ಎ ದ್ವಿತೀಯ ವರ್ಷದ ವಿದ್ಯಾರ್ಥಿ ನಾರಾಯಣ ರಾಯರೆಡ್ಡಿ ಭಾಗವಹಿಸುವ ಮೂಲಕ ವಿದ್ಯಾ ಸಮಿತಿ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿ ತರುವಲ್ಲಿ ಯಶಸ್ವಿಯಾದನು. ಈ ವಿದ್ಯಾರ್ಥಿಗೆ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಹಾಗೂ ಶ್ರೀಮಠದ ಉತ್ತರಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳವರು ಆಶೀರ್ವದಿಸಿರುವರು. ಮತ್ತು ಶ್ರೀ.ಜ.ಅ. ವಿದ್ಯಾ ಸಮಿತಿಯ ಆಡಳಿತಾಧಿಕಾರಿಗಳು, ಮಹಾವಿದ್ಯಾಲಯದ ಕಾರ್ಯಾಧ್ಯಕ್ಷರು, ಉಪಕಾರ್ಯಾಧ್ಯಕ್ಷರು, ಸರ್ವಸದಸ್ಯರು, ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾಥಿಗಳು ಅಭಿನಂದಿಸಿರುವರು.