ಮೈಸೂರು ದಸರಾ ಮಾದರಿ ಜಗಮಗಿಸುತ್ತಿವೆ ದೀಪಾಲಂಕಾರ
ಪಾರೇಶ ಭೋಸಲೆ
ಬೆಳಗಾವಿ : 1924ರಲ್ಲಿ ಗಂಡು ಮೆಟ್ಟಿನ ನಾಡಾದ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಜೀ ಅವರ ನೇತೃತ್ವದಲ್ಲಿ ನಡೆದಿದ್ದ 39ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನಕ್ಕೆ ಈಗ ನೂರು ವಸಂತಗಳು ಪೂರ್ತಿಯಾಗಿದು, ಈ ಅಧಿವೇಶನದ ನೂರರ ಸಂಭ್ರಮಾಚರಣೆಗೆ ಬೆಳಗಾವಿ ಸಜ್ಜಾಗಿದೆ. ಈ ಕಾರ‍್ಯಕ್ರಮ ಕೂಡಾ ಬೆಳಗಾವಿ ಇತಿಹಾಸದಲ್ಲಿ ಮತ್ತೊಂದು ಹೊಸ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಹೆಜ್ಜೆ ಗುರುತು ನೋಡ ಬನ್ನಿ ಎಂದು ಕುಂದಾನಗರಿಗೆ ದೇಶದ ಹಾಗೂ ರಾಜ್ಯದ ಜನರನ್ನು ಕೈಬಿಸಿ ಕರೆಯುತ್ತಿದೆ.
ಹೌದು ಓದುಗರೇ.... ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಮುಂದಾಳತ್ವವನ್ನು ವಹಿಸಿದ್ದ ಬೆಳಗಾವಿಯ ನೆಲವು ಈಗ ಮದುವಣಗಿತ್ತಿಯಂತಾಗಿದೆ. ಮೈಸೂರು ದಸರಾ ಮೀರಿಸುವ ರೀತಿಯಲ್ಲಿ ರಾಜ್ಯ ಸರಕಾರದ ಸಹಕಾದಿಂದ ಬೆಳಗಾವಿ ಜಿಲ್ಲಾಡಳಿತ ಎಲ್ಲ ವ್ಯವಸ್ಥೆಯನ್ನು ಮಾಡಿದ್ದು, ಸಂಭ್ರಮಾಚರಣೆಯನ್ನು ನೋಡಿ ರಾಜ್ಯದ ಜನ ಹುಬ್ಬೇರಿಸುವಂತೆ ಮಾಡಿದೆ. ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದರಲ್ಲು ವಿದ್ಯುತ್ ಬಲ್ಬಗಳಿಂದ ದೀಪಾಲಂಕಾರವನ್ನು ಮಾಡಲಾಗಿದು, ನಗರದ ಪ್ರಮುಖ ವೃತ್ತ (ಸರ್ಕಲ್)ಗಳಲ್ಲಿ ಮಹಾತ್ಮರ ಹಾಗೂ ದೇವತೆಯರ ಮೂರ್ತಿಗಳನ್ನು ವಿದ್ಯುತ್ ದೀಪದಲ್ಲಿ ಜಗಮಗಿಸುವಂತೆ ಮಾಡಿರುವದರಿಂದ ಎಲ್ಲರ ಆಕರ್ಷಣೆಬಿಂದುಗಳಾಗಿವೆ.
1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಈ ಕಾಂಗ್ರೆಸ್ ಅಧಿವೇಶನದ ನೂರರ ಸವಿ ನೆನಪಿಗಾಗಿ ಇದೇ. ಡಿ. 26, 27ರಂದು (ಇಂದು ನಾಳೆ) ಎರಡು ದಿನಗಳವರೆಗೆ ವಿವಿಧ ಕರ‍್ಯಕ್ರವನ್ನು 1924ರಲ್ಲಿ ನಡೆದಿದ್ದ ಸ್ಥಳದಲ್ಲಿ ರಾಜ್ಯ ಸರಕಾರ ಸವಿನೆನಪಿನ ಅಂಗಳವನ್ನು ಮರು ಸ್ಥಾಪನೆ ಮಾಡಿದೆ. ಅದೇ ರೀತಿಯಾಗಿ ಬೆಳಗಾವಿಯಲ್ಲಿ ಗಾಂಧಿಜಿ ಅವರ ಮುಂದಾಳತ್ವದಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ವೇಳೆ ಇದ್ದ ಕಾಂಗ್ರೆಸ್ ಬಾವಿಯನ್ನು ಕೂಡಾ ಶೂಚಿ ಮಾಡುವರೊಂದಿಗೆ ಈ ವರೆಗೆ ಅದರ ಇತಿಹಾಸ ಕಾಯ್ದುಕೊಳ್ಳಲಾಗಿದೆ.
ಅಲ್ಲದೆ ಈ ಅಧಿವೇಶನವು ಕರ್ನಾಟಕ ಏಕೀಕರಣದ ಒಂದು ಭಾಗವಾಗಿತ್ತು. ಈ ಸಮ್ಮೇಳನದ ಮೂಲಕ ನಮ್ಮ ನಾಡಿನ ಏಕೀಕರಣದ ಹೋರಾಟಕ್ಕೆ ಅಧಿಕೃತವಾಗಿ ಚಾಲನೆ, ಪ್ರೇರಣೆ ದೊರೆತಿತ್ತು, ಸ್ವಾತಂತ್ರ ಹೋರಾಟದೊಂದಿಗೇ ನಾಡುಕಟ್ಟುವ ಕಾರ್ಯವೂ ಆರಂಭಗೊಂಡಿತ್ತು ಎನ್ನುವದು ಇತಿಹಾಸವಾಗಿದೆ. ಹಲವಾರು ಕಾರಣಗಳಿಂದಾಗಿ ಮಹತ್ಮಾ ಗಾಂಧೀಜಿಯವರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಅಧಿವೇಶನ ಸಂಘಟನೆ, ಸಮರ್ಥ ಆಯೋಜನೆ, ಶಿಸ್ತುಬದ್ಧ ಕಾರ್ಯಕಲಾಪ, ಪ್ರಜಾತಾಂತ್ರಿಕ ಮೌಲ್ಯಗಳಿಗೆ ಮನ್ನಣಿ ಈ ಎಲ್ಲ ಕಾರಣಗಳಿಂದಾಗಿ ಸ್ವಾತಂತ್ರ ಸಂಗ್ರಾಮದ ಇತಿಹಾಸದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಅಧಿವೇಶನಕ್ಕೆ ಈ ಭಾಗದ ಸ್ವಾತಂತ್ರ್ಯ ಸೇನಾನಿ ಗಂಗಾಧರರಾವ್ ದೇಶಪಾಂಡೆ ಅವರ ಮಾರ್ಗದಲ್ಲಿ ನಡೆದ ಇಂಥ ಘಟನೆ, ಅಧಿವೇಶನ ನಡೆದು ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಣೆ ಹೊಸ ಪಿಳಿಗೆಗೆ ಸ್ಪೂತಿ, ಪ್ರೇರಣೆ ಸಿಕ್ಕಂತಾಗಿದೆ.
ತಾತಾನ ಮೆಚ್ಚುಗೆಗೆ ಪಾತ್ರವಾಗಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನ :
1924ರಲ್ಲಿ ನಡೆದ ಬೆಳಗಾವಿಯಲ್ಲಿ 39ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವರಾಜ್ಯ ಸ್ಥಾಪನೆಗಾಗಿ, ಸರ್ವ ಜನರ ಸ್ವಾಭಿಮಾನಕ್ಕಾಗಿ ಹೋರಾಡುತ್ತಿದ್ದ ದೇಶದ ಅಧಿವೇಶನಕ್ಕೆ ಈಗ ಶತಮಾನದ ಸಂಭ್ರಮ. ಅಂದು ದೇಶದ ಸ್ವಾಂತ್ರತ್ರಕ್ಕಾಗಿ, ಏಕೈಕ ಬೃಹತ್ ಸಂಘಟನೆಯಾಗಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್. ಹೀಗಾಗಿಯೇ ಈ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಸ್ವಾತಂತ್ರ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿತ್ತು.
ಬೇರೆ ಬೇರೆ ಕಾರಣಗಳಿಂದ ಕಾಂಗ್ರೆಸ್‌ನಿAದ ದೂರ ಇದ್ದವರು ಸ್ವಾತಂತ್ರö್ಯ ಹೋರಾಟದಿಂದ ದೂರ ಉಳಿದವರು ಈ ಅಧಿವೇಶನದ ಮನಪರಿವರ್ತನೆಗೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ಮರಳಲಾರಂಭಿಸಿದ್ದರು. ಮುನಿಸಿಕೊಂಡಿದ್ದ ಸ್ವರಾಜ್ಯ ಪಕ್ಷದವರ ಮತ್ತು ಮುಸ್ಲಿಮರನ್ನು ಪುನಃ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಒಂದುಗೂಡಿಸಿದರಿಂದ ಈ ಅಧಿವೇಶನವು ಐಕ್ಯತಾ ಸಮ್ಮೇಳನ ಎಂದೇ ಹೆಸರು ಪಡೆದಿದೆ.
ನಂತರ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೇ ವಿಶೇಷವಾದ ಅಧಿವೇಶನ ಎಂಬ ಹೆಗ್ಗಳಿಕೆಗೂ ಈ ಬೆಳಗಾವಿ ಅಧಿವೇಶನ ಪಾತ್ರವಾಗಿದೆ. ಇದಕ್ಕೆ ಕಾರಣ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದು. ಅಲ್ಲದೆ ನಮ್ಮ ರಾಜ್ಯದಲ್ಲಿ ನಡೆದ ಏಕೈಕ ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಅಧಿವೇಶನ ಕೂಡ ಹೌದು. ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನು ಸಾರಿ, ಏಕತೆಯಿಂದ ಅಖಂಡ ಭಾರತದಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೆಚ್ಚಿಸಿದ, ‘ಗಾಂಧಿ ಎನ್ನುವ ಬಿಂಬ ಸಾವಿರ ಕಣ್ಣುಗಳಲ್ಲಿ ಸಾವಿರ ತೆರನಾಗಿ ರೂಪಗೊಳ್ಳಲು ಕಾರಣವಾದ ವೇದಿಕೆ ಇದಾಗಿತ್ತು.
1924ರ ವರೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಬರಿ ಸ್ವಾತಂತ್ರ್ಯ ಹೋರಾಟಕ್ಕೆ ಮೀಸಲಾಗಿದ್ದ ರಾಜಕೀಯ ಸಂಘಟನೆ. ಆದರೆ ಈ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ್ದ ಗಾಂಧೀಜಿಯವರು ಭಾರತದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಾಜ ಸುಧಾರಣೆಗಾಗಿಯೂ ಶ್ರಮಿಸುವ ಅಗತ್ಯವನ್ನು ಒತ್ತಿ ಹೇಳುವುದರ ಮೂಲಕ ಪಕ್ಷವನ್ನು ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೂ, ಅಣಿಗೊಳಿಸಿದ್ದರು.
ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಚರಕದ ಮೂಲಕ ಹೋರಾಟ ಆರಂಭಿಸಿದ ಹೋರಾಟಗಾರರಿಗೆ, ಚರಕದ ಮಹತ್ವವನ್ನು ಮಹಾತ್ಮ ಗಾಂಧೀಜಿ ಮನಮುಟ್ಟುವಂತೆ ತಿಳಿ ಹೇಳಿದ್ದು, ಇದೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಮುಂದೆ ಖಾದಿ ಪುಚಾರ ಚುರುಕು ಪಡೆದು, ಇಡೀ ದೇಶ ಖಾದಿಮಯವಾಗಿತ್ತು. ವಿದೇಶಿ ವಸ್ತು ದಹನ ಸಾಮನ್ಯಾವೆಂಬಂತಾಗಿತ್ತು. ’ಅಖಿಲ ಭಾರತ ಚರಕ ಸಂಘ ಸ್ಥಾಪನೆಗೂ ಕಾರಣವಾಯಿತು. ಚರಕದ ನೂಲು ಬ್ರಿಟೀಷರ ಪಾಲಿಗೆ ಉರುಳಾಗತೊಡಗಿತ್ತು.
1924ರ ಡಿ. 26 ಮತ್ತು 27ರಂದು ನಡೆದ ಈ ಅಧಿವೇಶನದಲ್ಲಿ ಅಖಂಡ ಭಾರತದ ಮೂಲೆ ಮೂಲೆಯಿಂದ ಆಗಮಿಸಿದ್ದ. 1,844 ಪ್ರತಿನಿಧಿಗಳು ಭಾಗವಹಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುತ್ತಿದ್ದ ಬಹುತೇಕ ಎಲ್ಲ ನಾಯಕರೂ ಈ ಅಧಿವೇಶನದಲ್ಲಿದ್ದರು.