ಭಾರತ ಸಂವಿಧಾನ ಶ್ರೇಷ್ಠ ಸಂವಿಧಾನ


ಕೊಪ್ಪಳ 28): ಭಾರತದ ಸಂವಿಧಾನ ವಿಶ್ವಮಾನ್ಯತೆಯನ್ನು ಪಡೆದ ಅತ್ಯುತ್ತಮ ಸಂವಿಧಾನವಾಗಿದೆ ಎಂದು ಕೊಪ್ಪಳ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೊತ್ತರ ಕೇಂದ್ರದ ನಿದರ್ೇಶಕರಾದ ಪ್ರೊ. ಬಸವರಾಜ ಬೆಣ್ಣಿ ಹೇಳಿದರು.

ಕೊಪ್ಪಳದ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ನ. 26 ರಂದು ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಸಂವಿಧಾನ ವಿಶ್ವದ ಗಣ್ಯ ಮಾನ್ಯರಾದ ನೆಲ್ಸನ್ ಮಂಡೇಲಾ, ಐನಸ್ಟೀನ್ ಚಚರ್ಿಲ್, ಬರಾಕ್ ಓಬಾಮಾ ರವರಿಂದ ಪ್ರಶಂಸಿಸಲ್ಪಟ್ಟಿದೆ. ಭಾರತ ಸಂವಿಧಾನದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾಯರ್ಾಂಗ, ನ್ಯಾಯಾಂಗಗಳು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹಿತಾಸಕ್ತಿಯನ್ನು ಕಾಪಾಡುವ ಮತ್ತು ಪೋಷಿಸುವ ಮೂಲಾಂಶಗಳನ್ನು ಹೊಂದಿದೆ. ಸಾಂವಿಧಾನಿಕ ಹಕ್ಕುಗಳು ಸುಂದರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಸಮಾನತೆ, ಧಾರ್ಮಿಕತೆ ಮತ್ತು ಸ್ವಾತಂತ್ರ್ಯದಂತಹ ಹಕ್ಕುಗಳು ವ್ಯಕ್ತಿಗತವಾಗಿ ಮತ್ತು ಸಮಾಜಮುಖಿಯಾಗಿ ಬೆಳೆಯಲು ಅವಶ್ಯಕವಾಗಿದೆ. ಸಂವಿಧಾನ ನಮಗೆ ನೀಡಿರುವ ಸ್ವಾತಂತ್ರದ ಹಕ್ಕು ಅತ್ಯಂತ ಮಹತ್ವವಾದದ್ದು. ಪ್ರತಿಯೊಬ್ಬ ವ್ಯಕ್ತಿ ಸ್ವತಂತ್ರವಾಗಿ ಆಲೋಚಿಸುವ ಮತ್ತು ಚಿಂತಿಸುವ ಶಕ್ತಿಯನ್ನು ಹೊಂದಿದ್ದಾನೆ. ನಿರ್ಭಂದಿತ ವಾತಾವರಣದಲ್ಲಿ ಬದುಕನ್ನು ಸಾಗಿಸುವುದು ಸುಲಭ ಸಾಧ್ಯವಲ್ಲ. ಭವ್ಯ ಭಾರತದಲ್ಲಿ ಯಾವುದೇ ವೃತ್ತಿಗಳನ್ನು ಕೈಗೊಳ್ಳುವ, ಧರ್ಮವನ್ನು ಪಾಲಿಸುವ, ಭಾರತದಾದ್ಯಂತ ಎಲ್ಲಿಯಾದರೂ ನೆಲೆಸುವ ಹಕ್ಕನ್ನು ಸಂವಿಧಾನ ದಯಪಾಲಿಸಿದೆ. ಹಕ್ಕುಗಳು ಮತ್ತು ಕರ್ತವ್ಯಗಳು ಸಂವಿಧಾನದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ನೀಡಲಾಗಿದೆ ಅಂದರೆ ಅದಕ್ಕೆ ಪೂರಕವಾದ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ರಾಜ್ಯಶಾಸ್ತ್ರದ ಉಪನ್ಯಾಸಕಿ ಎಚ್. ಕವಿತಾ ಮಾತನಾಡಿ, ಸಂವಿಧಾನದ ಹುಟ್ಟು, ರಚನಾ ಸಮಿತಿ, ಸಾರಾಂಶ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಉಪನ್ಯಾಸಕ ಗಿರೀಶ ಕುಮಾರ ಗೌಡ ನಿರೂಪಿಸಿದರು, ಸಮಾಜಕಾರ್ಯ ವಿಭಾಗದ ಉಪನ್ಯಾಸಕ ವಿನಾಯಕ ಎ. ವಂದಿಸಿದರು. ಸೂರ್ಯಕಾಂತ್ ಸಾಧು, ಚಾಂದ್ ಬಾಷಾ, ಶ್ರೀಕಾಂತ್ ಕೆ, ಅಕ್ಷಯ ಕುಲಕರ್ಣಿ, ಯರ್ರಿಸಾಮಿ, ಗುರುಲಿಂಗ ಸ್ವಾಮಿ, ಶ್ರೀಕಾಂತ್ ಸಜ್ಜನ್, ರವಿಚಂದ್ರ, ಗೀತಾ ಪಾಟೀಲ್, ಶೃತಿ ದೇಸಾಯಿ, ವಿಶಾಲಾಕ್ಷೀ ಮತ್ತು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.