ಕಲ್ಲೂರಿನಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ
Installation of Jagadguru Sri Renukacharya statue in Kallur
ಲೋಕದರ್ಶನ ವರದಿ
ಯಲಬುರ್ಗಾ 10 : ತಾಲೂಕಿನ ಕಲ್ಲೂರು ಗ್ರಾಮದ ವೀರಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕಲ್ಲಿನಾಥೇಶ್ವರ ದೇವಸ್ಥಾನದ ಅವರಣದಲ್ಲಿ ಬುಧವಾರ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ ಜರಗಿತು. ಬೆಳಿಗ್ಗೆ ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿಯವರ ದಿವ್ಯ ಸಾನಿದ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಸೇರಿ ರುದ್ರಾಭಿಷೇಕ,ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಮಂಗಳೂರಿನ ಹರಳೆಲೆ ಹಿರೇಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿಗಳು ಸಾನಿದ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ತಾಲೂಕಾ ಜಂಗಮ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ, ಡಾ.ಅಂದಾನಯ್ಯ ಶ್ಲಾಡ್ಲಗೇರಿಮಠ, ಕಲ್ಲಯ್ಯ ಜಾರಗಡ್ಡಿಮಠ, ಶಿವಕುಮಾರ ನಾಗಲಾಪೂರಮಠ,
ವರದಯ್ಯ ಹೊಸಮನಿ, ಮಲ್ಲಯ್ಯ ಗುರುಮಠ, ಬಸವರಾಜ ಮಠದ, ವೀರುಪಾಕ್ಷಯ್ಯ ಗಂಧದ, ಸಿದ್ದಯ್ಯ ಕಳ್ಳಿಮಠ, ಮಹೇಶ ಕಲ್ಮಠ, ಕಲ್ಲಪ್ಪ ತೊಂಡಿಹಾಳ, ಮಲ್ಲಪ್ಪ ಅಗಸಿನಮನಿ, ಬಸವರಾಜ ಸಾದರಖಾನ, ಕಲ್ಲಪ್ಪ ಕರಮುಡಿ, ಕಳಕಪ್ಪ ತೋಟದವರ, ಬಸವರಾಜ ಮ್ಯಾಗೇರಿ, ಪಿತಂಬರಗೌಡ ಮೇಟಿ, ರಾಮಣ್ಣ ಬಂಗಾಳಿಗಿಡ, ಕಲ್ಲಪ್ಪ ಕವಳಕೇರಿ, ಬಾಬುಸಾಬ ಕೂಕನೂರು, ಕಬೀರಸಾಬ ಕೂಕನೂರು, ಈರ್ಪ ಗುಡಿಸಲದರ, ನೀಲಪ್ಪ ಕವಳಕೇರಿ ಸೇರಿದಂತೆ ಗ್ರಾಮಸ್ಥರು, ಗ್ರಾಮದ ಜಂಗಮ ಸಮಾಜದ ಬಾಂಧವರು ಭಾಗವಹಿಸಿದ್ದರು. ಇಂದಿನಿಂದ ಪ್ರವಚನ;ಜಗದ್ಗುರು ರೇಣುಕಾಚಾರ್ಯ ತಾಲೂಕು ಮಟ್ಟದ ರೇಣುಕಾಚಾರ್ಯರ ಜಯಂತಿ ನಿಮಿತ್ತ ಅಂಗವಾಗಿ ಮಾ.11 ರಿಂದ 15 ರವರೆಗೆ ಪ್ರತಿನಿತ್ಯ ಸಂಜೆ ಕಲ್ಲೂರು ಗ್ರಾಮದಲ್ಲಿ ಶಿರಕೋಳದ ಗುರುಸಿದ್ದೇಶ್ವರ ಸ್ವಾಮೀಜಿಯವರಿಂದ ಆಧ್ಯಾತ್ಮಿಕ ಪ್ರವಚನ ದರುಶನ ಪ್ರವಚನ ನಡೆಯಲಿದೆ. ಮಾ.15 ರಂದು ತಾಲೂಕಾ ಮಟ್ಟದ ಸಮಾವೇಶ, ಜಂಗಮ ವಟುಗಳಿಗೆ ಅಯ್ಯಾಚಾರ,ಭಾವಚಿತ್ರ,ಕುಂಭ ಮೆರವಣಿಗೆ ಜರಗಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 