ಲೋಕದರ್ಶನ ವರದಿ
ಕಂಪ್ಲಿ:ಜ.16. ಕಾಂಗ್ರೆಸ್ ಮುಕ್ತ ಭಾರತದ ಭ್ರಮೆಯಲ್ಲಿದ್ದಾರೆ ಬಿಜೆಪಿಯವರು. ಆದರೆ, ದೇಶದಲ್ಲಿ 100 ಜನ ಮೋದಿಯವರು ಬಂದರೂ, ಕಾಂಗ್ರೆಸ್ ಭಾರತ ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಳ್ಳಾರಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಬಿಜೆಪಿ ವಿರುದ್ಧ ಹರಿಹಾಯ್ದರು.
ತಾಲ್ಲೂಕು ಸಮೀಪದ ದೇವಸಮುದ್ರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಉತ್ತರದ 5 ರಾಜ್ಯಗಳಲ್ಲಿ ಬಿಜೆಪಿ ಮಣ್ಣು ಮುಕ್ಕಿದೆ. ಹಾಗೂ ಐದು ರಾಜ್ಯದ ಜನರು ಭಾರತೀಯ ಜನತಾ ಪಾಟರ್ಿಗೆ ತಕ್ಕ ಪಾಠ ಕಲಿಸಿದ್ದರೆ. ಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ದಿಕ್ಕರಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮೋದಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದಂತಾಗಿದೆ. ಸವರ್ಾಧಿಕಾರರ ಪ್ರವೃತ್ತಿ ಮೋದಿಯಲ್ಲಿದೆ. ಮೋದಿಯವರು ಸುಳ್ಳಿನ ಮಾತುಗಾರ ಹೊರತು, ದೇಶದ ಅಭಿವೃದ್ಧಿ ಮಾಡುವ ಮನುಷ್ಯನಲ್ಲ. ಮೋದಿಗೆ ಬರುವ ಚುನಾವಣೆಯಲ್ಲಿ ಮತದಾರರ ಮತ ಕೇಳುವ ನೈತಿಕತೆಯಿಲ್ಲ. ಸುಳ್ಳಿನ ಮೋದಿಗೆ ನೋಬಲ್ ಪ್ರಶಸ್ತಿ ನೀಡಬೇಕಾಗಿದೆ. ಕಪ್ಪು ಹಣ ವಾಪಸ್ಸು ತರುವ ನೆಪದಲ್ಲಿ ದೇಶದ ಜನರಿಗೆ ಮಹಾಮೋಸ ಮಾಡಿದ್ದಾರೆ. ಜಿಎಸ್ಟಿ ತಂದು ಜನರ ಬದುಕಿಗೆ ಚೂರಿ ಹಾಕಿದ್ದಾರೆ. ಚುನಾವಣೆ ಪೂರ್ವದಲ್ಲಿ ಸಾಕಷ್ಟು ಉದ್ಯೋಗ ಸೃಷ್ಠಿ ಮಾಡುವ ಭರವಸೆ ನೀಡಿದ್ದರು. ಆದರೆ, ಕಳೆದ 4 ವರೆ ವರ್ಷದ ಅವಧಿಯಲ್ಲಿ ಉದ್ಯೋಗಗಳನ್ನು ಸೃಷ್ಠಿ ಮಾಡದೇ, ಇರುವ ಉದ್ಯೋಗಗಳನ್ನು ತೆಗೆದು, ದೇಶದ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ಅಲ್ಲದೆ, ದೇಶದ ಯುವಕ-ಯುವತಿಯರಿಗೆ ಅಪಮಾನ ಮಾಡಿದೆ ಕೇಂದ್ರ ಸಕರ್ಾರ. 39 ಸಾವಿರ ಕೋಟಿಯ ರಫೆಲ್ ಹಗರಣ ಮೋದಿಯವರ ಮೇಲಿದೆ. ಹೀಗಾಗಿ ಕೇಂದ್ರದ ನರೇಂದ್ರ ಮೋದಿಯವರು ದೇಶದ ಜನರಿಗೆ ಮಂಕುಬೂದಿ ಹಚ್ಚುತ್ತಿದ್ದಾರೆ. ಈಗಾಗಲೇ ಜನರು ಕೇಂದ್ರ ಸಕರ್ಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರೆ ಮೋದಿ ಸಕರ್ಾರ ಕಿತ್ತಿ ಹಾಕಲಿದ್ದಾರೆ ಎಂದರು.
ಅಪರೇಷನ್ ಕಮಲ ಅಂತ ಬಿಜೆಪಿ ಬೀಗುತ್ತಿದೆ. ಆದರೆ, ಅಪರೇಷನ್ ಕಮಲ ಛಿದ್ರಗೊಳ್ಳಲಿದೆ. ಯಾವುದೇ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಕೆಲ ಶಾಸಕರಿಗೆ ಬಿಜೆಪಿಯಿಂದ ಹೆಚ್ಚಿನ ಒತ್ತಡ ಬರುತ್ತಿದೆ. ಆದರೂ, ಶಾಸಕರು ಬಿಜೆಪಿಗೆ ಹೋಗದೇ ಕಾಂಗ್ರೆಸ್ನಲ್ಲಿರುತ್ತಾರೆ. ಮೈತ್ರಿ ಸಕರ್ಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಸಕರ್ಾರ ಐದು ವರ್ಷ ಪೂರ್ಣಗೊಳಿಸಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ನಿರುದ್ಯೋಗ, ಬಡತನ ಸೇರಿದಂತೆ ನಾನಾ ಸಮಸ್ಯೆಗಳಿಗೆ. ಮುಂದಿನ ದಿನದಲ್ಲಿ ಸಮಸ್ಯೆಗಳನ್ನು ಈಡೇರಿಸಲಾಗುವುದು. ತುಂಗಭದ್ರ ಜಲಾಶಯದಲ್ಲಿ 33 ಟಿಎಂಸಿಯಷ್ಟು ಹೂಳು ತಿಂಬಿಕೊಂಡಿದೆ. ಹೂಳು ತೆಗೆದರೆ ಮಾತ್ರ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಹಾಯಿಸಲು ಸಾಧ್ಯ. ಬಳ್ಳಾರಿ ಜಿಲ್ಲೆಯ ಜನರ ಸೇವಾ ಸದಾ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಗಣ್ಯತೀ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಿ.ವಿ.ಶಿವಯೋಗಿ, ದೇವಸಮುದ್ರ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಸದಸ್ಯ ಹಾಗೂ ಹೊಸಪೇಟೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಕಪ್ಪ, ತಾಪಂ ಸದಸ್ಯ ಎಚ್.ಈರಣ್ಣ, ಪುರಸಭೆ ಅಧ್ಯಕ್ಷ ಎಂ.ಸುಧೀರ್, ಗ್ರಾಪಂ ಸದಸ್ಯರಾದ ನಾಯಕರ ವೆಂಕೋಬಣ್ಣ, ದೊಡ್ಡ ಬಸಪ್ಪ, ಮುಖಂಡರಾದ ಗಿರಿಮಲ್ಲಪ್ಪ, ಕಲ್ಲಕಂಬ ಪಂಪಾಪತಿ, ಬಿ.ನಾರಾಯಣಪ್ಪ, ಪಿ.ಮೂಕಯ್ಯಸ್ವಾಮಿ, ಜಿ.ಪಂಪಣ್ಣ, ಉಸ್ಮಾನ್, ಭಟ್ಟ ಪ್ರಸಾದ್, ಕರೇಕಲ್ ಮನೋಹರ್, ಬೂದಗುಂಪಿ ಹುಸೇನ್ಸಾಬ್, ಜಾಫರ್, ವೀರಾಂಜಿನೀಯಲು, ಎಸ್.ಆರ್.ವಲಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.