ದನಗಳನ್ನು ಸಾಗಿಸುತ್ತಿರುವ ವಾಹನ ತಡೆದು ಪೋಲಿಸ್ ವಶಕ್ಕೆ

ಅಥಣಿ 04: ಲಾರಿ ಒಂದರಲ್ಲಿ 15ಕ್ಕೂ ಮಿಕ್ಕಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು, ದರೂರ ಹತ್ತಿರ ಸಂಶಯದಿಂದ ಸಂಘದ ಕಾರ್ಯಕರ್ತರು ತಡೆದು ಅಥಣಿ ಪೋಲಿಸ ಠಾಣೆಗೆ ಒಪ್ಪಿಸಿದರು.

ಇಂದು ಮಂಗಳವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಮಹಾರಾಷ್ಟ್ರದ ಸಾಂಗೊಲಾದಿಂದ ರಾಯಬಾಗಕ್ಕೆ ಲಾರಿ ಒಂದರಲ್ಲಿ ಹೋರಿ ಮತ್ತು ಮರಿಗಳನ್ನು ಸಾಗಿಸುತ್ತಿದ್ದಾಗ, ಸಂಶಯಾಸ್ಪದದಿಂದ ಅದನ್ನು ದರೂರು ಹತ್ತಿರ ತಡೆದು ಅಥಣಿ ಪೋಲಿಸ ಠಾಣೆಗೆ ಸಂಘದ ಕಾರ್ಯಕರ್ತರು ಸುಪದರ್ಿಸಿದರು. ನಾಳೆ ಬುಧವಾರ ರಮಜಾನ್ ಹಬ್ಬವಿರುವದರಿಂದ  ಹಬ್ಬಕ್ಕಾಗಿ ಈ ದನಗಳನ್ನು ಸಾಗಿಸುತ್ತಿದ್ದಾರೆ ಎಂಬ ಆರೋಪ ಕಾರ್ಯಕರ್ತರದು. ಆದರೆ ಈ ವಾಹನದಲ್ಲಿ ಗೋವು ಅಥವಾ ಗೋವಿನ ಕರು ಒಂದು ಇರಲಿಲ್ಲ. ವಾಹನ ಚಾಲಕನ ಹೇಳಿಕೆೆ ಏನೆಂದರೆ ಇವನ್ನು ಹಬ್ಬಕ್ಕಾಗಿ ಸಾಗಿಸುತ್ತಿದ್ದರೆ ಇದರಲ್ಲಿ ಒಂದಾದರು ಗೋವು ಅಥವಾ ಕರು ಇದ್ದರೆ ನನ್ನ ವಾಹನವನ್ನು ಸುಟ್ಟು ಬಿಡಿ ಎಂದು ಹೇಳುತ್ತಿದ್ದರು.ಇವುಗಳನ್ನು ಮಾರಾಟಕ್ಕಾಗಿ ಸಾಗಿಸುತ್ತಿದ್ದೇವೆ ಎಂದರು.

       ಸಂಘದ ಕಾರ್ಯಕರ್ತರ ಸಂಶಯವೆಂದರೆ ನಾಳೆ ಹಬ್ಬ ಇವರು ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ. ಈ ರೀತಿ ಪೋಲಿಸ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಡಿ ವಾಯ್ ಎಸ್ ಪಿ ಕಾಯರ್ಾಲಯದ ಎದುರಿಗೆ ಸಂಘದ ಕಾರ್ಯಕರ್ತರ ಮತ್ತು ವಕೀಲರ ದಂಡು ಕೂಡಿತ್ತು. ಮಾಲಿಕರ ಎಮ್ ಎಚ್ 13 ಎ.ಎನ್.8007 ,ಎಲ್.ವಿ ಗೊರಾಂಡೆ, ಗುಂಡೆವಾಡೆ ಮಹಾರಾಷ್ಟ್ರದ ಸೊಲ್ಲಾಪುರದ್ದಾಗಿದ್ದು ವಾಹನವನ್ನು ಮತ್ತು ಅದರಲ್ಲಿರುವ ದನಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಸರಿಯಾದ ಕಾಗದ ಪತ್ರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಡಿವಾಯ್ಎಸ್ಪಿ ಆರ್. ಬಿ. ಬಸರಗಿಯವರು ತಿಳಿಸಿದರು. ಈ ಸಮಯದಲ್ಲಿ ಪಿಎಸ್ಆಯ್ ವಿ. ಎಸ್. ಅವಟಿಯವರು ಉಪಸ್ಥಿತರಿದ್ದರು.