ಬ್ರಿಟಿಷ್ ಕಾಲದ ನಗರಸಭೆಯ ಕಟ್ಟಡ ಇನ್ನು ನೆನಪು ಮಾತ್ರ

ಕಾರವಾರ 19 :ಇಲ್ಲಿನ ನಗರಸಭೆ ಕಾಯರ್ಾಲಯದ 151 ವರ್ಷಗಳ ಹಿಂದಿನ ಕಟ್ಟಡ ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ. ನೂತನ ಕಟ್ಟಡ ನಿಮರ್ಾಣ ಕಾರ್ಯಕ್ಕೆ ಇನ್ನಷ್ಟೇ ಚಾಲನೆ ಸಿಗಬೇಕಿದೆ.  ಹಳೆಯ ಕಟ್ಟಡ ನೆಲಸಮಗೊಳಿಸುವ ನಿಟ್ಟಿನಲ್ಲಿ ಕಚೇರಿಯನ್ನು ತಾತ್ಕಾಲಿಕವಾಗಿ ಮಾಲಾದೇವಿ ಮೈದಾನದ ಎದುರಿನ ನಗರಸಭೆಯ ಒಡೆತನದ ಕುಡ್ಸೆಂಪ್ ಅನುದಾನದಲ್ಲಿ ಕಟ್ಟಿದ ಕಟ್ಟಡಕ್ಕೆ ಸದ್ಯವೇ ಸ್ಥಳಾಂತರವಾಗಲಿದೆ.

ಕಾರವಾರ ನಗರಸಭೆ ಕಾರ್ಯಲಯ ಇರುವ ಈಗಿನ ಕಟ್ಟಡ 1864 ರಲ್ಲಿ ಬ್ರಿಟಿಷರಿಂದ  ನಿಮರ್ಾಣಗೊಂಡಿದ್ದು. ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾದ ಈ ಕಟ್ಟಡ ಈಗಲೂ ಗಟ್ಟಿಮುಟ್ಟಾಗಿದೆ. ಸ್ವಲ್ಪ ನಿರ್ವಹಣೆ ಮಾಡಿದರೂ ಪಾರಂಪರಿಕ ಕಟ್ಟಡವಾಗಿ ಉಳಿಯಲಿತ್ತು. ಆದರೆ ಕಟ್ಟಡ ಬೀಚ್ ಸಮೀಪದಲ್ಲಿ ಆಯಕಟ್ಟಿನ ಜಾಗದಲ್ಲಿದ್ದು, ಹೊಸದಾಗಿ ಕಟ್ಟಡ ನಿಮರ್ಿಸಿಕೊಳ್ಳಲು ನಗರಸಭೆಯ ಹಿಂದಿನ ಅವಧಿಯಲ್ಲಿ ನಿರ್ಣಯಿಸಲಾಗಿದೆ.  ಈ ಹಿನ್ನೆಲೆಯಲ್ಲಿ  4 ಕೋಟಿ ರೂ. ವೆಚ್ಚದ ನೂತನ ಕಟ್ಟಡ ನಿಮರ್ಾಣಕ್ಕೆ ಯೋಜನೆ ರೂಪುಗೊಂಡಿದ್ದು, 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.  ಟೆಂಡರ್ ಸಹ ಕರೆಯಲಾಗಿದೆ. 

ಹಳೆಯ ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿ ನೂತನ ಕಟ್ಟಡ ನಿಮರ್ಾಣಗೊಳ್ಳುವ ಅವಧಿಯವರೆಗೆ ನಗರಸಭೆ ಕಚೇರಿಯನ್ನು ಇಲ್ಲಿನ ಕೋಡಿಭಾಗ ರಸ್ತೆಯ ಮಾಲಾದೇವಿ ಮೈದಾನದ ಮುಂಭಾಗದ ನಗರಸಭೆ ಮಳಿಗೆಗೆ  ಸ್ಥಳಾಮತರಿಸಲಾಗುತ್ತದೆ. ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಇನ್ನು 2-3 ದಿನಗಳಲ್ಲಿ ತಾತ್ಕಾಲಿಕ ಕಚೇರಿ ಪ್ರಾರಂಭಗೊಳ್ಳಲಿದೆ ಎಂದು ಪೌರಾಯುಕ್ತ ಎಸ್.ಯೋಗೇಶ್ವರ  ತಿಳಿಸಿದ್ದಾರೆ. 

ಬ್ರಿಟಿಷರು ಕಟ್ಟಿದ ಕಟ್ಟಡ ಹಾಗೂ ರೂಪಿಸಿದ ನಗರ:

ಗೋವಾ ಪೋಚರ್ುಗೀಸರ ಪ್ರಾಭಲ್ಯವಿದ್ದ ಅವಧಿಯಲ್ಲಿ, ಗಡಿ ಭಾಗವಾದ ಕಾರವಾರದಲ್ಲಿ ಸಮರ್ಥ ಆಡಳಿತ ವ್ಯವಸ್ಥೆ ಕಲ್ಪಿಸುವ ಅಗತ್ಯ ಬ್ರಿಟಿಷರಿಗೆ ಇತ್ತು. ಈ ಹಿನ್ನೆಲೆಯಲ್ಲಿ ಅಂದಿನ ಕಾಲದಲ್ಲೇ ನಗರಸಭೆ ನಿಮರ್ಿಸಿ ಆಡಳಿತಕ್ಕೆ ಅವರು ಮುಂದಾದರು.  ಮೊದಲು ಮುಖ್ಯ ಕಟ್ಟಡ ಮಾತ್ರ ನಿಮರ್ಾಣಗೊಂಡಿದ್ದು ಬಳಿಕ ಕಾಲ ಕ್ರಮೇಣ ಅಗತ್ಯಕ್ಕೆ ತಕ್ಕಂತೆ ಇನ್ನು ಎರಡು ಕಟ್ಟಡಗಳು ನಿಮರ್ಾಣಗೊಂಡಿವೆ. ಅಗತ್ಯಕ್ಕೆ ತಕ್ಕಂತೆ ಈ ಕಟ್ಟಡ ಸಾಕಷ್ಟು ನವೀಕರಣವನ್ನೂ ಕಂಡಿದೆ. ಮೊದಲು ನಾಡ ಹಂಚಿನದಾಗಿದ್ದ ಕಟ್ಟಡಕ್ಕೆ ದಶಕಗಳ ಹಿಂದೆ ಮಂಗಳೂರು ಹಂಚನ್ನು ಹೊದಿಸಲಾಗಿದೆ, ಶಿಥಿಲಗೊಂಡ ಕೆಲ ಕಟ್ಟಿಗೆಯ ಸಾಮಗ್ರಿಗಳನ್ನು ಬದಲಾಯಿಸಲಾಗಿದೆ.   

ಇಷ್ಟಾದರೂ ಕಟ್ಟಡ ತನ್ನ ಐತಿಹಾಸಿಕ ಗಾಂಭೀರ್ಯವನ್ನು  ಕಳೆದುಕೊಂಡಿಲ್ಲ. ಆದರೆ ಕೆಲ ಅಧ್ಯಕ್ಷರಾಗಿ ಆಳಿದವರು ಕಾರವಾರ ನಗರಸಭೆಯ ಆಸ್ತಿಯನ್ನು ಲೀಜ್ ಮೇಲೆ ಅನ್ಯರ ಪಾಲು ಮಾಡಿದ್ದು ದುರಂತ. 

ಬ್ರಿಟಿಷರ  ಆಳ್ವಿಕೆ :

1864ರ ಜೂನ್ 30ರಿಂದ ಮೊದಲ ಬಾರಿಗೆ ಕಾರವಾರ ನಗರಸಭೆಯ ಅಧ್ಯಕ್ಷ ಖುಚರ್ಿಯ ಮೇಲೆ ಬ್ರಿಟಿಷ್ ಅಧಿಕಾರಿಗಳು ಕುಳಿತು ಆಳ್ವಿಕೆ ನಡೆಸಿದ್ದಾರೆ. ಎಂ. ಜೆ. ಶಾ ಸ್ಟೇವಾರ್ ಕಾರವಾರ ನಗರಸಭೆಯ ಮೊದಲ ಅಧ್ಯಕ್ಷ. ಅವರ ನಂತರ ಜೆ. ಮ್ಯಾಕ್ಪರ್ಸನ್ 1866-67ರವರೆಗೆ, ಜಾನ್ ಎಲ್ಫಿನ್ಸ್ಟನ್ 1867-71ರವರೆಗೆ, ಬಳಿಕ 1871ರಿಂದ 86ರವರೆಗಿನ ಅವಧಿಯಲ್ಲಿ ಎ.ಸಿ. ಜೆರ್ವೋಯ್ಸ್, ಎ. ಆರ್. ಮ್ಯಾಕ್ಡೋನಾಲ್ಡ್, ಎ. ಇ. ಕ್ಯಾಂಡಿ, ಜಿ. ವೈಡಲ್, ಸಿ. ಈ. ಬಾಥ್ವೇಟ್, ಹಾಗೂ ಎಸ್. ವಿ. ಟಾಕಿ ಎಂಬುವವರು ಕಾರವಾರ ನಗರಸಭೆಯ ಅಧ್ಯಕ್ಷರಾಗಿದ್ದ ಬ್ರಿಟಿಷ ಅಧಿಕಾರಿಗಳು.

1886ರಲ್ಲಿ ಮೊದಲ ಬಾರಿಗೆ ಸ್ಥಳೀಯರು ಅಧ್ಯಕ್ಷರಾಗಿ ಡಿ.ಕೆ.ಉಪ್ಪೋಣಿ ಅಧಿಕಾರ ವಹಿಸಿಕೊಂಡರು. 1886ರಿಂದ 1901ರವರೆಗೆ ಸುಧೀರ್ಘ 14 ವರ್ಷಗಳ ಕಾಲ ಡಿ. ಕೆ. ಉಪ್ಪೋಣಿ ಕಾರವಾರ ನಗರಸಭೆ ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ 1947-54ರವರೆಗೆ ಮಾಧವ ಕಸಬೇಕರ್ ಅಧ್ಯಕ್ಷರಾಗಿದ್ದರು. ಡಾ.ಎಸ್.ಆರ್.ಪಿಕಳೆ ಅವರು ಸೇರಿದಂತೆ ಈತನಕ ಒಟ್ಟು 59 ಜನ ಕಾರವಾರ ನಗರಸಭೆಯ ಅಧ್ಯಕ್ಷ ಸ್ಥಾನದಿಂದ ಕಾರವಾರವನ್ನು ಆಳಿದ್ದಾರೆ. 

ವಾಣಿಜ್ಯ ಮಳಿಗೆ ಸೇರಿದಂತೆ ನಗರಸಭೆಯ ಕಚೇರಿ:

ನೂತನ ಕಟ್ಟಡದ ನೀಲ ನಕ್ಷೆ ಸಿದ್ಧಗೊಂಡಿದ್ದು, 6000 ಚದರ ಅಡಿಯಲ್ಲಿ ಹೊಸ ಕಟ್ಟಡ ಬರಲಿದೆ. 2000 ಚದರ ಮೀಟರ್ ನಗರಸಭೆಯ ಕಚೇರಿ ಆವರಣ ಹೊಂದಲಿದೆ. ಅಲ್ಲದೇ 28 ಮಳಿಗೆಗಳು ಸಹ ಬಾಡಿಗೆ ನೀಡಲು ಅನುಕೂಲವಾಗುವಂತೆ ಕಟ್ಟಡ ನಿಮರ್ಾಣವಾಗಲಿದೆ. 

ಯೋಜನೆಯ ಪ್ರಕಾರ ಕಟ್ಟಡ ನೆಲ ಮಹಡಿ ಮತ್ತು ಮೊದಲನೇ ಮಹಡಿ ಸೇರಿ ಒಟ್ಟು ಎರಡು ಮಹಡಿಗಳನ್ನು ಒಳಗೊಂಡಿದೆ. ಪಾಕರ್ಿಂಗ್, ಸಭಾಭವನ, ಅಧ್ಯಕ್ಷರ ಕೊಠಡಿ, ಪೌರಾಯುಕ್ತರ ಕೊಠಡಿ, ವಿವಿಧ ವಿಭಾಗಗಳ ಅಧಿಕಾರಿಗಳ, ಸಿಬ್ಬಂದಿಗಳ  ಕೊಠಡಿಗಳನ್ನು ನೂತನ ಕಟ್ಟಡ ಒಳಗೊಳ್ಳಲಿದೆ ಎಂದು ಕಾರ್ಯನಿವರ್ಾಹಕ ಎಂಜಿನಿಯರ್ ಮೋಹನ್ ರಾಜ್  ಮಾಹಿತಿ ನೀಡಿದರು.