ಮೂಡಲಗಿ 07: ಸಾಲ ವಸುಲಾತಿಗಾಗಿ ಬಂದ ಗೋಕಾಕ ಪ್ರತಿಭಾ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳಿಗೆ ರೈತ ಸಂಘದ ಕಾರ್ಯಕರ್ತರಿಂದ ದಿಗ್ಬ್ಂಧನ ವಿಧಿಸಿರುವ ಘಟನೆ ಸೋಮವಾರ ಮೂಡಲಗಿ ತಾಲ್ಬ್ನ ಜೋಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ಜೋಕಾನಟ್ಟಿ ಗ್ರಾಮದ ಸಿದ್ದವ್ವ ಅಜ್ಜಪ್ಪ ಭಾಗನ್ನವರ, ಲಕ್ಷ್ಮಣ ಬಾಲಪ್ಪ ದಂಡಿನ್ನವರ, ಶಂಕರ ಲಕ್ಷ್ಮಣ ಮಾದರ ಇವರು ತಮ್ಮ ಜಮೀನಗಳ ಮೇಲೆ ಕಳೆದ 6 ವರ್ಷಗಳ ಹಿಂದ ಪಡೆದ ಜಾಮಿನ ಸಾಲದ ಮೊತ್ತ 3 ಲಕ್ಷ ರೂ. ಮತ್ತು ಬಡ್ಡಿ 2,60,200 ರೂಗಳ ವಸೂಲಾತಿಗಾಗಿ ಜಮೀನು ಹರಾಜಿಗಾಗಿ 25-6-2018 ರಂದು ನೀಡಿದ ನೋಟಿಸಿಗೆ ಸಾಲಗಾರರು ಸುಮಾರು 80 ಸಾವಿರ ರೂ.ಗಳನ್ನು 17-4-18 ರಂದು ಬ್ಯಾಂಕಿಗೆ ತುಂಬಿದರೂ ಸಹ ರೈತರಿಗೆ ಕಾಲಾವಕಾಶ ಕೊಡದೆ ಆ.6 ರಂದು ಜೋಕಾನಟ್ಟಿ ಗ್ರಾಮಕ್ಕೆ ಜಮೀನು ಹರಾಜು ಮಾಡಲು ಮುಂದಾದಾಗ ಬೆಳಗಾವಿ ಜಿಲ್ಲಾ ರೈತ ಸಂಘದ ಪದಾಧಿಕಾರಿ ವಸೂಲಾತಿಗಾಗಿ ಬಂದ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿರುದರಿಂದ ಅಧಿಕಾರಿಗಳು ಸಾಲ ಮರು ಪಾವತಿಗಾಗಿ ಕಾಲಾಅವಕಾಶ ನೀಡುವದಾಗಿ ಭರವಸೆ ನೀಡಿದ ನಂತರ ದಿಗ್ಬಂಧನದಿಂದ ಮುಕ್ತಗೊಳಿಸಿದ್ದರು.
ರೈತ ಸಂಘದ ಭೀಮಶಿ ಗದಾಡಿ, ಗಣಪತಿ ಈಳಿಗೇರ, ಮುತ್ತಪ್ಪ ಭಾಗನ್ನವರ, ಹಣಮಂತ ಬಿಳ್ಳುರ, ಮಹಾದೇವ ಗೋಡೆರ, ಕುಮಾರ ತೇಲಿ, ವಿವೇಕ ಸನದಿ, ಮಹಾಂತೇಶ ರಡ್ಡೇರಟ್ಟಿ, ಬಸು ಪಡದಳ್ಳಿ, ಪಾಂಡುರಂಗ ಬಿರಗಡ್ಡಿ, ಭೀಮಶಿ ಹುಲಕ್ಕುಂದ, ಕಲ್ಲಪ್ಪ ಉಪ್ಪಾರ, ವಿಠ್ಠಲ ಪೂಜೇರಿ ಮತ್ತಿತರರು ಉಪಸ್ಥಿತರಿದ್ದರು.