ಲೋಕದರ್ಶನ ವರದಿ
ವಿಜಯಪುರ 03: ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯ ರಚನೆಗೆ ಆಗ್ರಹಿಸಿ ಗುರುವಾರ ಕರೆ ನೀಡಿದ್ದ ಬಂದ್ಗೆ ವಿಜಯಪುರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ರಚನೆ ವಿಚಾರಕ್ಕೆ ವಿರೋಧ ವ್ಯಕ್ತವಾಗಿ `ಅಖಂಡ ಕನರ್ಾಟಕ' ಕೂಗು ಪ್ರತಿಧ್ವನಿಸಿತು.
ಕರವೇ ಸಾಂಕೇತಿಕ ಧರಣಿ :
ಅಖಂಡ ಕನರ್ಾಟಕದ ಉಳಿವಿಗಾಗಿ ಕನರ್ಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ಕನರ್ಾಟಕ ಏಕೀಕರಣಕ್ಕಾಗಿ ಉತ್ತರ ಕನರ್ಾಟಕದ ಹಲವು ಮಹನೀಯರ ತ್ಯಾಗ ಬಲಿದಾನ ಮತ್ತು ಪರಿಶ್ರಮವಾಗಿದ್ದು, ಪ್ರತ್ಯೇಕ ರಾಜ್ಯದ ಕೂಗು ಕೇವಲ ರಾಜಕೀಯ ಹಿತಾಸಕ್ತಿಯಾಗಿದೆ. ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ರಚನೆಗೆ ಹೋರಾಟವು ಜನಪರ ಚಳುವಳಿಯಾಗಿರದೇ ರಾಜಕೀಯ ಸ್ವಾರ್ಥಕ್ಕೆ ನಡೆದ ಜನವಿರೋಧಿ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಲಾಭಕ್ಕಾಗಿ ಕೆಲವೊಂದು ಜನಪ್ರತಿನಿಧಿಗಳೇ ಪ್ರತ್ಯೇಕ ರಾಜ್ಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನಾದರೂ ಆಳುವ ಸಕರ್ಾರಗಳು ಉತ್ತರ ಕನರ್ಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸಕರ್ಾರಗಳು ಗಮನ ಹರಿಸಬೇಕು, ಕೂಡಲೇ ಎಚ್ಚೆತ್ತುಕೊಂಡು ಉತ್ತರ ಕನರ್ಾಟಕದ ಪ್ರಗತಿಗೆ ಪ್ರಥಮ ಆದ್ಯತೆ ನೀಡಬೇಖು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದಶರ್ಿ ಪ್ರಕಾಶ ಕುಂಬಾರ ಮಾತನಾಡಿ, ಉತ್ತರ ಕನರ್ಾಟಕಕ್ಕೆ ಸಕರ್ಾರಗಳು ಅನುಸರಿಸುತ್ತಿರುವ ಮಲತಾಯಿ ಧೋರಣೆ ನಿಲ್ಲಿಸಬೇಕು. ಹಲವಾರು ಯೋಜನೆಗಳಲ್ಲಿ ಉತ್ತರ ಕನರ್ಾಟಕಕ್ಕೆ ತಾರತಮ್ಯ ಎಸಗುವುದು ಸಕರ್ಾರಗಳ ಧೋರಣೆಯಾಗಿದೆ ಎಂದರು.
ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ಮಹಾದೇವ ರಾವಜಿ, ಅಶೋಕ ನಾವಿ, ಮಂಜುನಾಥ ಹಿರೇಮಠ, ಭರತ ಕೋಳಿ, ದಸ್ತಗೀರ ಸಾಲೋಟಗಿ, ಯಾಕೂಬ ಕೋಪರ, ವಿನೋದ ದಳವಾಯಿ, ಫಯಾಜ ಕಲಾದಗಿ, ಮೈಬೂಬ ಬೇನೂರ, ರಾಜು ಹಜೇರಿ, ದಯಾನಂದ ಸಾವಳಗಿ, ಪಿದಾ ಕಲಾದಗಿ, ಸಾದಿಕ ಜಾನ್ವೇಕರ, ಮೈಬೂಬ ಶೇಖ, ಹಾಜಮಲಿಂಗ ಬಡೆಘರ,ಭೀರಪ್ಪ ಹೂಗಾರ, ರಾಜೀವ ಹೆಗಡೆ, ರವಿ ಹಣಮಗೊಂಡ, ಮಲ್ಲನಗೌಡ ಬಿರಾದಾರ, ರಜಾಕ ಕಾಖಂಡಕಿ, ಸುಲ್ತಾನಸಾಬ ಅಗಸಿಮನಿ ಪಾಲ್ಗೊಂಡಿದ್ದರು.
ಗಾಂಧಿವೃತ್ತದಲ್ಲಿ ಧರಣಿ :
ಅಖಂಡ ಕನರ್ಾಟಕ ಉಳಿವಿಗಾಗಿ ವಿಜಯಪುರ ಅಂಧ ಮತ್ತು ಅನಾಥ ಮಕ್ಕಳ ಕ್ಷೇಮಾಭಿವೃದ್ಧಿ ಸಂಘ ವಿಜಯಪುರ ಹಾಗೂ ಡಿಎಸ್ಎಸ್, ಪ್ರಜಾವಿಮೋಚನಾ ಚಳುವಳಿ (ಅಂಬೇಡ್ಕರ್ವಾದ) ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಂಟಿಯಾಗಿ ಗಾಂಧಿವೃತ್ತದಲ್ಲಿ ರ್ಯಾಲಿ ನಡೆಸಿದವು. ರಾಜ್ಯ ಇಬ್ಬಾಗ ಮಾಡುವುದು ಬೇಡ...ಪ್ರತ್ಯೇಕತೆ ಕೂಗು ನಿಲ್ಲಲಿ...ನಿಲ್ಲಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ಸಂಘಟನೆಯ ಪ್ರಮುಖ ಶಕ್ತಿಕುಮಾರ (ಜ್ಯೂ.ಗಣೇಶ), ಸಿದ್ದು ರಾಯಣ್ಣವರ, ಯಶವಂತ ದೊಡಮನಿ, ರಾಜು ರಣದೇವಿ, ಅರುಣ ರಜಪೂತ, ಶಶಿ ಹಡಪದ, ಭೀಮರಾವ ಕಾಂಬಳೆ ಪಾಲ್ಗೊಂಡಿದ್ದರು.
ಪ್ರತ್ಯೇಕ ರಾಜ್ಯ ರಚನೆಯ ಕೂಗು ಸರಿಯಲ್ಲ. ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ ಕದಡಿದ ನೀರಲ್ಲಿ ಮೀನು ಹಿಡಿದಂತೆ ಎಂದು ಎಸ್.ಯು.ಸಿ.ಐ ಪಕ್ಷದ ಜಿಲ್ಲಾ ಕಾರ್ಯದಶರ್ಿ ಭಿ.ಭಗವಾನ ರೆಡ್ಡಿ ಹೇಳಿದ್ದಾರೆ.
ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯ ರಚನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೀಳು ಚುನಾವಣಾ ರಾಜಕೀಯದ ಗೀಳು ಹತ್ತಿಸಿಕೊಂಡ ಕೆಲವು ವ್ಯಕ್ತಿಗಳು ಈ ಕೂಗಿಗೆ ಶಕ್ತಿ ತುಂಬುತ್ತಿದ್ದಾರೆ. ಉತ್ತರಕನರ್ಾಟಕ ಪ್ರತ್ಯೇಕರಾಜ್ಯದ ಬಗ್ಗೆ ತುತ್ತೂರಿ ಊದುವವರು ಮೊದಲು ತಾವು ಕಲ್ಪಿಸಿಕೊಂಡ 'ಉತ್ತರಕನರ್ಾಟಕ'ದ ಬಗ್ಗೆ ಸ್ಪಷ್ಟ ತಿಳುವಳಿಕೆ ಹೊಂದಿದವರೇ ಎಂದು ಭಗವಾನರೆಡ್ಡಿ ಪ್ರಶ್ನಿಸಿದ್ದಾರೆ. ಜಾರ್ಖಂಡ್, ಛತ್ತೀಸ್ಘಡ್, ಉತ್ತರಖಾಂಡ, ತೆಲಂಗಾಣ ರಾಜ್ಯಗಳ ಜನರ ಪರಿಸ್ಥಿತಿಯೇನಾದರೂ ಬದಲಾಗಿದೆಯೇ? ಈ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ರಚನೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದ್ದಾರೆ.