ದಿ. ವೀಂದ್ರರ ಶೆಟ್ಟಿ ಪುಣ್ಯ ಸ್ಮರಣೆ: 30ರಂದು ಬೃಹತ ಆರೋಗ್ಯ ತಪಾಸಣಾ ಶಿಬಿರ
ಹುಕ್ಕೇರಿ 23: ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ, ಸಮಾಜದಲ್ಲಿ ನೊಂದವರನ್ನು ಮುಖ್ಯವಾಹಿನಿಗೆ ತರುವುದರಲ್ಲಿ ಜೀವನ ಸವೆಸಿದ ಶಿಕ್ಷಣ ಪ್ರೇಮಿ, ದಿ. ವೀಂದ್ರರ ಶೆಟ್ಟಿ ಅವರ ಐದನೇಯ ಪುಣ್ಯ ಸ್ಮರಣೆ ನಿಮಿತ್ಯ ದಿ.30ರಂದು ಸಿ.ಆರ್.ಶೆಟ್ಟಿ ಫೌಂಡೇಶನ್, ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೆಳೆಯರ ಬಳಗ, ಹಾಗೂ ಸಿದ್ದಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕನ್ನೇರಿ ಮಠ ಕೊಲ್ಹಾಪೂರ ಇವರ ಆಶ್ರಯದಲ್ಲಿ ನುರಿತ ಅನುಭವಿ ತಜ್ಞ ವೈದ್ಯರಿಂದ ಬೃಹತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಸ್.ಕೆ.ಪಬ್ಲಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿಂಟು ಶೆಟ್ಟಿ ಹೇಳಿದರು.
ಗುರುವಾರ ಪಟ್ಟಣದ ಎಸ್.ಕೆ. ಹೈಸ್ಕೂಲ ಚಿಣ್ಣರ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದಿ.27.ರಿಂದ 29 ವರೆಗೆ ಎಸ್.ಕೆ. ಚಿನ್ನರ ಭನದಲ್ಲಿ ನೊಂದಣಿ ಮಾಡಿಕೊಳ್ಳಲು ಪಾರಂಭಿಸಲಾಗುವುದು. ದಿ. 30 ರಂದು ಬೆಳಿಗ್ಗೆ 9.30 ಯಿಂದ ಸಂಜೆ 4.ವರಗೆ ಆರೋಗ್ಯ ತಪಾಸಣಾ ಆಯೋಜಿಸಲಾಗಿದ್ದು ಆಧಾರ ಕಾರ್ಡ, ರೇಷನ್ ಕಾರ್ಡ ತರಬೇಕು. 500 ಜನರ ರೋಗಿಗಳಿಗೆ ಮಾತ್ರ ಚಿಕಿತ್ಸೆ ಮಾಡಿಕೊಳ್ಳವ ಅವಶಕಾವಿದೆ. ಅರ್ಥಿಕವಾಗಿ ಹಿಂದುಳಿದ ರೋಗಿಗಳಿದಲ್ಲಿ ಶಸ್ತ್ರಚಿಕಿತ್ಸೆ, ಆರ್.ಫೌಂಡೇಶನ್ ವತಿಯಿಂದಲೇ ಉಚಿತ ಚಿಕಿತ್ಸೆ ಮಾಡಿಸಲಾಗುವುದು ಎಂದು ತಿಳಿಸಿದರು.
ನಿರ್ದೇಶಕ ಓಂಕಾರ ಹೆದ್ದೂರಶೆಟ್ಟಿ, ಅವರು ಮಾತನಾಡಿ ಶಿಕ್ಷಣ ಪ್ರೇಮಿ ರವೀಂದ್ರ ಶೆಟ್ಟಿ ಅವರ 5.ನೇ ಪುಣ್ಯಾರಾಧನೆ ನಿಮಿತ್ಯ ನಡೆಯುವ ಅರ್ಥಪೂರ್ಣ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ ಸಿಬ್ಬಂದಿ ಕಾಯಿಲೆ, ದಂತ ತಪಾಸಣೆ, ಕಿಡ್ನಿಸ್ಟೋನ್, ಕಾನ್ಸರ್, ಕಣ್ಣು, ತಪಾಸಣೆ, ಮಾಡಲಾಗುವುದು. ಎಂದರು.
ಎಸ್.ಕೆ.ಪಬ್ಲಿಕ್ ಸ್ಕೂಲ ನಿರ್ದೇಶಕರಾದ ಅನೀಲ ಶೆಟ್ಟಿ, ರವಿ ಪರಕನಟ್ಟಿ, , ಸೋಮಶೇಖನಟ್ಟಿ ಪರಕನಟ್ಟಿ, ಅಶೋಕ ಚಿಕ್ಕೋಡಿ, ಸೋಮ ನಂದಿಕೋಲಮಠ, ಅಶೋಕ ಹಿರೇಮಠ, ದಯಾನಂದ ಹಿರೇಮಠ, ಬಸವರಾಜ ನಂದಿಕೋಲಮಠ, ಚೆನ್ನಪ್ಪಾ ಗಜಬರ, ವಿರೇಶ ಗಜಬರ, ರಾಹುಲ್ ಅಡಿಕೆ, ಪ್ರಸಾದ ಹಂದಿಗೂಡ, ಮಾರುತಿ ಮುತಗಿ, ಪ್ರಾಂಶುಪಾಲ ರಾಘವೇಂದ್ರಕುಲಕರ್ಣಿ, ಎಸ್.ಎಸ್. ಕಮತಗಿ, ಜಿಎಸ್, ಮುತಾಲಿಕ, ಸಿ.ವ್ಹಿ ಗಸ್ತ, ಮತ್ತಿತರರು ಉಪಸ್ಥಿತರಿದ್ದರು.