ಲೋಕದರ್ಶನ ವರದಿ
ತಾಳಿಕೋಟೆ 25: ಪಾವನ ಕ್ಷೇತ್ರದಲ್ಲಿ ಹುಟ್ಟಿ ಬೆಳೆದು ಚಿಕ್ಕಂದಿನಿಂದಲೂ ಇದೇ ನೆಲದಲ್ಲಿ ಅಡ್ಡಾಡಿದ ನಾವು ಶಿಕ್ಷಣ ಕ್ಷೇತ್ರದಲ್ಲಿ ವೈಧ್ಯಕೀಯ ಕ್ಷೇತ್ರದಲ್ಲಿ ಮುಂದುವರೆಯುತ್ತಾ ಜನಮೆಚ್ಚುಗೆಗೆ ಪಾತ್ರರಾಗುತ್ತಾ ಸಾಗಿರುವ ನಾವು ದನ್ಯರೆಂದು ವಿಜಯಪುರದ ಏಕ್ಸ್ ಲಂಟ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಶಿವನಂದ ಎನ್ ಕೆಲ್ಲೂರ ನುಡಿದರು.
ಸ್ಥಳೀಯ ಶ್ರೀ ಶರಣಮುತ್ಯಾರವರ ಜಾತ್ರಾ ಮಹೋತ್ಸವ ಅಂಗವಾಗಿ ಸಾಗಿಬಂದ ತೋಂಟದ ಯಡಿಯೂರ ಶ್ರೀ ಸಿದ್ದಲಿಂಗೇಶ್ವರರ ಪುರಾಣ ಪ್ರವಚನದ ಮಹಾ ಮಂಗಲದಿನದಂದು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಮಾತಾಪಿತರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದ ಅವರು ಬಡತನದಲ್ಲಿ ಬೆಳೆದು ಏಕ್ಸ್ಲಂಟಸಂಸ್ಥೆಯ ಕಾರ್ಯದಶರ್ಿಯಾಗಿ ಸೇವೆಗೆ ಮುಂದಾಗಿದ್ದೇನೆ ಸುಮಾರು 700 ಕ್ಕೂ ಮಿಕ್ಕಿ ಶಿಕ್ಷಕರು ಈ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಸಾಗಿದ್ದಾರೆ ಇಂತಹ ಸೇವಾ ಕಾರ್ಯಗಳಿಗೆ ದೇವರ ದಯೆ ಎಂಬುದು ಅಗತ್ಯ ಬೇಕಾಗುತ್ತದೆ ಎಂದರು.
ಅತಿಥಿ ವಿಜಯಪುರದ ಚಾಣಿಕ್ಯ ಅಕಾಡೆಮಿ ಮುಖ್ಯಸ್ಥರಾದ ಎನ್.ಎಂ.ಬಿರಾದಾರ ಮಾತನಾಡಿ ತಾಳಿಕೋಟೆ ಕ್ಷೇತ್ರದಲ್ಲಿ ಪವಾಡ ಮಹಿಮಿಗಳೆಂಬುದು ಗೊತ್ತಾಗುತ್ತಲೇ ಸಾಗಿದೆ ಇದು ಶರಣರ ಶಿವಯೋಗಿಗಳ ಮಹಾ ಸ್ಥಾನವಾಗಿದೆ ಎಂದು ಹೇಳಿದರು
ಅತಿಥಿ ವಿಜಯಪುರದ ಯಶೋದರಾ ಆಸ್ಪತ್ರೆಯ ತಜ್ಞವೈಧ್ಯರಾದ ಡಾ.ರವೀಂದ್ರ ಮದ್ದರಕಿ ಮಾತನಾಡಿ ಯಾವುದೇ ಕಾರ್ಯಕ್ರಮ ವಿರಲಿ ಸಾರ್ಥಕಥೆಯತ್ತ ಕೊಂಡೊಯುವ ಕಾರ್ಯಕ್ರಮವಾಗಿರಬೇಕು ಶ್ರೀ ಶರಣರ ಮಠವಾಗಲಿ ಶ್ರೀ ಖಾಸ್ಗತರ ಮಠವಾಗಲಿ ಭಕ್ತರನ್ನು ಉದ್ದರಿಸುತ್ತಾ ಸಾಗಿಬಂದಿವೆ ಆದ್ಯಾತ್ಮವೆಂಬುದು ಇದು ಶರಣ ಸಂತರ ಯೋಗಿಗಳ ವಾಣಿಯಿಂದಲೇ ಹೊರಬರುತ್ತದೆ ಆದ್ಯಾತ್ಮ ಎನ್ನುವದು ಜೀವನವನ್ನೇ ಉದ್ದರಿಸುತ್ತದೆ ಅಲ್ಲದೇ ಸನ್ಮಾರ್ಗಕ್ಕೆ ಕೊಂಡೊಯುತ್ತದೆ ಅಂತಹ ಕಾರ್ಯಕ್ರಮಗಳು ತಾಳಿಕೋಟೆಯಲ್ಲಿ ನಡೆಯುತ್ತಾ ಸಾಗಿವೆ ಎಂದರು.
ಇದೇ ಸಮಯದಲ್ಲಿ ಸಾಧಕ ಡಾ.ರವೀಂದ್ರ ಮದ್ದರಕಿ ಅವರಿಗೆ ವೈಧ್ಯರತ್ನ ಪ್ರಶಸ್ತಿ, ಎನ್.ಎಂ.ಬಿರಾದಾರ ಅವರಿಗೆ ಮತ್ತು ಶಿವಾನಂದ ಕೆಲ್ಲೂರ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿಗಳನ್ನು ಶ್ರೀಮಠದ ವತಿಯಿಂದ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಾನಿದ್ಯವಹಿಸಿದ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಜಯಸಿದ್ದೇಶ್ವರ ಮಹಾಸ್ವಾಮಿಗಳು, ಹಾಗೂ ಕೈಲಾಸ ಪೇಠೆಯ ಬಸವಪ್ರಭು ದೇವರು ಮಾತನಾಡಿ ಬದುಕನ್ನು ಕಟ್ಟಿಕೊಳ್ಳಲು ಯಶಸ್ಸನ್ನು ಸಾಧಿಸಬೇಕಾದರೆ ಬಹಳೇ ಕಷ್ಟ ಪಡಬೇಕಾಗುತ್ತದೆ ಅಂದರೆ ಮಾನ ಸನ್ಮಾನ ಕೈ ಮಾಡಿ ಕರೆಯುತ್ತದೆ ಎಂದು ನೋವು ನಲಿವುಗಳನ್ನು ಅನುಭವಿಸಿದ ಇದೀಗ ಪ್ರಶಸ್ತಿ ಪಡೆದ 3 ಜನ ಜ್ಞಾನಿಷ್ಠರು ಸಾಧನೆಯ ಗಡೆಗೆ ಹೆಜ್ಜೆ ಹಾಕುತ್ತಾ ಗುರಿಯನ್ನು ಮುಟ್ಟಿದವರಾಗಿದ್ದಾರೆಂದು ಶ್ರೀ ಶರಣಮುತ್ಯಾರವರ ಹಾಗೂ ಶ್ರೀ ಖಾಸ್ಗತರ ಪರಂಪರೆಯ ಕುರಿತು ವಿವರಿಸಿದರು.
ಪುರಾಣ ಪ್ರವಚನಕಾರ ಆಕಾಶವಾಣಿ ದೂರದರ್ಶನ ಕಲಾವದರಾದ ಶ್ರೀ ಆರ್.ಶರಣಬಸವ ಶಾಸ್ತ್ರೀಗಳು ಸಿದ್ದಲಿಂಗೇಶ್ವರರ ಪುರಾಣ ಪ್ರವಚನಕ್ಕೆ ಮಂಗಲ ಹಾಡಿ ಪುನಃ ಪ್ರಾರಂಬಿಸಿದರು.
ಇದೇ ಸಮಯದಲ್ಲಿ ಪುರಾಣ ಪ್ರವಚನದ ಸಾರವನ್ನು ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟಿಸಲು ಸಂಗ್ರಹಿಸಿದ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತ್ತಲ್ಲದೇ ಸಂಗ್ರಹದ ಪುರಾಣದ ರಚನೆಯನ್ನು ಪುರಾಣಿಕರಿಗೆ ಹಾಗೂ ಶರಣರ ಮಠಕ್ಕೆ ಘೋರ್ಪಡೆ ನೀಡಿದರು.
ಈ ಸಮಯದಲ್ಲಿ ಖಾಸ್ಗತೇಶ್ವರ ಮಠದ ವೇ.ಸಂಗಯ್ಯ ವಿರಕ್ತಮಠ, ಶರಣರ ಮಠದ ಬಸಣ್ಣ ಶರಣರ, ಶರಣಪ್ಪ ಶರಣರ, ಸಿದ್ದನಗೌಡ ಪೊಲೀಸ್ಪಾಟೀಲ, ಬಸವರಾಜ ಹಿರೇಮಠ, ವೀರೇಶ ಹಿರೇಮಠ, ಎಸ್.ಎನ್.ಬಸಣ್ಣವರ, ಕಾಶಿರಾಯ ದೇಸಾಯಿ, ಗುರು ಸಜ್ಜನ, ಮಲ್ಲಣ್ಣ ಇಂಗಳಗಿ, ನಾಗಪ್ಪ ಬಿಳ್ವಾರ, ಎನ್.ಎಸ್.ಪಾಟೀಲ, ರಜಶೇಖರ ಸಜ್ಜನ, ಮಲ್ಲಪ್ಪ ಬಿಳೇಭಾವಿ, ತಿಪ್ಪಣ್ಣ ಸಜ್ಜನ, ಶರಣಪ್ಪ ದೊರೆ, ಬಸನಗೌಡ ಮಾಲಿಪಾಟೀಲ, ನಿಂಗನಗೌಡ ಬಿರಾದಾರ ಮೊದಲಾದವರು ಉಪಸ್ಥಿತರಿದ್ದರು. ಶರಣಗೌಡ ಪೊಲೀಸ್ಪಾಟೀಲ ಸ್ವಾಗತಿಸಿದರು. ವಿಜಯಕುಮಾರ ಹಿರೇಮಠ ನಿರೂಪಿಸಿ ವಂದಿಸಿದರು.