ಕಾಗವಾಡ ಮತಕ್ಷೇತ್ರದ 10 ಗ್ರಾಮಗಳಿಗೆ ಟ್ಯಾಂಕರ್ನಿಂದ ಕುಡಿಯುವ ನೀರು, 9 ಸ್ಥಳದಲ್ಲಿ ಮೇವು ಬ್ಯಾಂಕ್ ಪ್ರಾರಂಭ

ಕಾಗವಾಡ 14: ಕಾಗವಾಡ ಮತ್ತು ಅಥಣಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮದಭಾವಿ, ತೆಲಸಂಗ, ಅನಂತಪುರ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮಗಳ ಜನತೆಗೆ ಟ್ಯಾಂಕರ್ಗಳ ಮುಖಾಂತರ ಕುಡಿಯುವ ನೀರು ಮತ್ತು 9 ಸ್ಥಳದಲ್ಲಿ ಮೇವು ವಿತರಿಸುವ ಬ್ಯಾಂಕ್ಗಳು ಪ್ರಾರಂಭಿಸಿದ್ದೇವೆ. ಸಧ್ಯಕ್ಕೆ ಸ್ಥಿತಿ ಸಮಾಧಾನವಾಗಿದ್ದು, ಬಿಸಿಲಿನ ತಾಪ ಹೆಚ್ಚಾದಂತೆ ಬೇಡಿಕೆಗಳು ಹೆಚ್ಚಾಗಲಿವೆ ಎಂದು ಅಥಣಿ ತಾಲೂಕಾ ಪಂಚಾಯತಿಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ರವಿ ಬಂಗಾರಪನ್ನವರ ಹೇಳಿದರು.

ಗುರುವಾರ ದಿ. 14ರಂದು ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದಭಾವಿ, ಜಕ್ಕಾರಟ್ಟಿ ಗ್ರಾಮಗಳ ನಂದಿವಾಲೆ, ಮಾಳಿ, ಸಮಾಜದ ತೋಟಪಟ್ಟಿಗಳಲ್ಲಿ ವಾಸಿಸುವ ಜನರ ಮನೆಗಳಿಗೆ ಭೇಟಿನೀಡಿ, ಅವರ ಸಮಸ್ಯೆಗಳು ಖುದ್ದಾಗಿ ರವಿ ಬಂಗಾರಪನ್ನವರು ಅರಿತುಕೊಂಡು, ಯಾವುದೇ ತೊಂದರೆಬಾರದಂತೆ ನೋಡಿಕೊಳ್ಳುವದಾಗಿ ಭರವಸೆ ನೀಡಿದರು.

ಅಥಣಿ ತಹಸೀಲ್ದಾರ ಇವರ ನೇತೃತ್ವದಲ್ಲಿ ಇನ್ನೂಳಿದ ಇಲಾಖೆಯ ಅಧಿಕಾರಿಗಳು, ಗ್ರಾಮಾಭಿವೃದ್ಧಿ ಅಧಿಕಾರಿಗಳು ಒಳಗೊಂಡು, ತಂಡ ರಚಿಸಿದ್ದು. ನೀರಿನ ಸಮಸ್ಯೆಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಸಧ್ಯಕ್ಕೆ ಬಿಸಿಲಿನ ತಾಪಮಾಣ ಹೆಚ್ಚುತ್ತಿದೆ. ಇದರಿಂದ ಭಾವಿ, ಕೊಳವೆಭಾವಿಗಳ ನೀರಿನ ಮಟ್ಟ ಕುಸಿಯುತ್ತಿದೆ. ಅನೇಕ ಕೊಳವೆಭಾವಿಗಳು ಬತ್ತಿಹೋಗುತ್ತಿವೆ. ಅದರಿಂದ ನೀರಿನ ಸಮಸ್ಯೆ ಕೆಲ ತೋಟಪಟ್ಟಿಗಳಲ್ಲಿ ಹೆಚ್ಚಿಸುತ್ತಿದೆ. ಗ್ರಾಮಗಳ ಜನವಸ್ತಿಗಳಲ್ಲಿ ಸಮುದಾಯ ನೀರಾವರಿ ಯೋಜನೆ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ತೋಟಪಟ್ಟಿಗಳಲ್ಲಿ, ಈ ವ್ಯವಸ್ಥೆ ನೀಡಲು ಸಮಸ್ಯೆ ಆಗುತ್ತಿದ್ದರಿಂದ ಟ್ಯಾಂಕರ್ ಹಾಗೂ ಇತರ ವ್ಯವಸ್ಥೆ ಮಾಡಲಾಗಿದೆ.

ನೀರಿನ ಟ್ಯಾಂಕರ್ ಮತ್ತು ಮೇವಿನ ಬ್ಯಾಂಕ್:

ಈಗಾಗಲೇ ಕಾಗವಾಡ ವಿಧಾನಸಭಾ ಕ್ಷೇತ್ರದ ಮದಭಾವಿ, ಖಿಳೆಗಾಂವ, ಪಾಂಡೆಗಾಂವ, ಶಿರೂರ, ಜಂಬಗಿ, ವಿಷ್ಣುವಾಡಿ, ಕಿರಣಗಿ, ಜಕ್ಕಾರಟ್ಟಿ, ಸೇರಿದಂತೆ 10 ಗ್ರಾಮಗಳ ತೋಟಪಟ್ಟಿ ವಸತಿಯ ಜನರಿಗೆ ಕುಡಿಯುವ ನೀರು ಮತ್ತು 9 ಸ್ಥಳದಲ್ಲಿ ಜನಜಾನುವಾರಗಳಿಗೆ ಮೇವು ಪೂರೈಸಲು, ಮೇವಿನ ಬ್ಯಾಂಕ್ ಪ್ರಾರಂಭಿಸಲಾಗಿದೆ ಎಂದು ರವಿ ಬಂಗಾರಪನ್ನವರ ಹೇಳಿದರು.

ಗುಳೆ ಹೋಗಬೇಡಿ:

ಈಗಾಗಲೇ ರಾಜ್ಯ ಸಕರ್ಾರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಶಾಸಕರು ಬೇಸಿಗೆ ಕಾಲಿನಲ್ಲಿ ಜನರಿಗೆ ಕುಡಿಯುವ ನೀರು ಮತ್ತು ಕೈಗೆ ಕೆಲಸ ನೀಡುವ ಸಖಲಸಿದ್ಧತೆ ಮಾಡಿಕೊಂಡಿದ್ದಾರೆ. ಎನ್.ಆರ್.ಜಿ ಯೋಜನೆ ಅಡಿಯಲ್ಲಿ ಪ್ರತಿಯೊಂದು ಕುಟುಂಬಕ್ಕೆ ಕೈಗೆ ಕೆಲಸ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಪಂಚಾಯತಿಗೆ ಭೇಟಿನೀಡಿರಿ. ಜನರು ಕೈಗೆ ಕೆಲಸಕ್ಕಾಗಿಬೇರೆ ಸ್ಥಳಕ್ಕೆ ಗುಳೆ ಹೋಗದಂತೆ ರವಿ ಬಂಗಾರಪನ್ನವರ ಮನವಿ ಮಾಡಿಕೊಂಡರು.

ಪಿಡಿಒ ಎಸ್.ಟಿ.ಸರನಾಯಿಕ, ಪುಂಡ್ಲಿಕ್ ಅಭ್ಯಂಕರ, ರಾಜಾರಾಮ ನಂದಿವಾಲೆ, ಬಾಬುರಾವ ನಂದಿವಾಲೆ, ಬಿಚ್ಛು ನಂದಿವಾಲೆ, ರಾಮು ನಂದಿವಾಲೆ, ಸೇರಿದಂತೆ ಅನೇಕ ಮಹಿಳೆಯರು ಇದ್ದರು.