ದೇವಾಲಯ ಪ್ರವೇಶ, ಪೂಜೆ ಮಹಿಳೆ ಪುರುಷರಿಗೆ ಸಮಾನ ಅವಕಾಶ: ಸುಪ್ರೀಂ

ನವದೆಹಲಿ 18: ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧಿಸಿರುವುದು ಸಂವಿಧಾನದ ಅಧ್ಯಾದೇಶಕ್ಕೆ ವಿರುದ್ಧವಾದದ್ದು ಎಂದು ಸುಪ್ರೀಂಕೋಟರ್್ ಬುಧವಾರ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ಶಬರಿಮಲೆಗೆ ಜೈವಿಕ ಕಾರಣಗಳಿಂದ ಮಹಿಳೆಯರ ಪ್ರವೇಶವನ್ನು ನಿರಾಕರಿಸುವುದು ಹಾಗೂ ಪ್ರವೇಶ ನಿಷೇಧ ಸಂವಿಧಾನದ ಉಲ್ಲಂಘನೆ ಎಂಬ ಕುರಿತ ಅಜರ್ಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ, ಜಸ್ಟೀಸ್ ಗಳಾದ ಫಾಲಿ ನಾರಿಮನ್, ಎಎಂ ಖಾನ್ ವಿಲ್ಕರ್, ಡಿವೈ ಚಂದ್ರಾಚೂಡ್ ಹಾಗೂ ಇಂದು ಮಲೋತ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಕೈಗೆತ್ತಿಕೊಂಡಿದೆ. 

ನೀವು(ದೇವಾಲಯದ ಆಡಳಿತ ಮಂಡಳಿ) ಯಾವ ಆಧಾರದ ಮೇಲೆ ಮಹಿಳೆಯರ ಪ್ರವೇಶವನ್ನು ನಿರಾಕರಿಸಿದ್ದೀರಿ? ಇದು ಸಂವಿಧಾನದ ಅಧ್ಯಾದೇಶದ ಉಲ್ಲಂಘನೆ. ಒಂದು ಬಾರಿ ನೀವು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಎಂಬುದಾಗಿ ಹೇಳಿದ ಮೇಲೆ, ಯಾರು ಬೇಕಾದರು ದೇವಸ್ಥಾನ ಪ್ರವೇಶಿಸಬಹುದು ಎಂದು ಮುಖ್ಯ ನ್ಯಾಯಮೂತರ್ಿ ಮಿಶ್ರಾ ಹೇಳಿದರು. 

ಒಂದು ವೇಳೆ ಪುರುಷರು ದೇವಸ್ಥಾನ ಪ್ರವೇಶಿಸಬಹುದಾದರೆ, ಮಹಿಳೆಯರು ಕೂಡಾ ಹೋಗಬಹುದು. ಖಾಸಗಿ ದೇವಾಲಯ ಎಂಬ ಯಾವ ನಿಯಮವೂ ಇಲ್ಲ. ಒಂದು ವೇಳೆ ದೇವಸ್ಥಾನ ಹೌದಾದ ಮೇಲೆ ಇದೊಂದು ಸಾರ್ವಜನಿಕ ಸ್ಥಳ..ಅಲ್ಲಿಗೆ ಪ್ರತಿಯೊಬ್ಬರಿಗೂ ಹೋಗಲು ಅವಕಾಶ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಈ ವಿವಾದದಲ್ಲಿ ಮೂರನೇ ವ್ಯಕ್ತಿ ಮಧ್ಯಪ್ರವೇಶಿಸಬೇಕೆಂಬ ವಾದವನ್ನು ಪೀಠ ತಳ್ಳಿ ಹಾಕಿದೆ. ದೇವಾಲಯದೊಳಗೆ ಮಹಿಳೆಯರ ಪ್ರವೇಶ ನಿಷೇಧ, ಸಂಪ್ರದಾಯ ಎರಡೂ ಕೂಡಾ ಕಾನೂನು ಬಾಹಿರ. ಅದೇ ರೀತಿ ಅಸಂವಿಧಾನಿಕ ಎಂದು ಹಿರಿಯ ವಕೀಲ ಇಂದ್ರಾಣಿ ಜೈಸಿಂಗ್ ಕೋಟರ್್ ಗೆ ತಿಳಿಸಿದರು. 

ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶ ನಿಷೇಧಿಸಿರುವ ಸಂಪ್ರದಾಯವನ್ನು ಪ್ರಶ್ನಿಸಿ ಇಂಡಿಯನ್ ಯಂಗ್ ಲಾಯಸರ್್ ಅಸೋಸಿಯೇಶನ್ ಸುಪ್ರೀಂಕೋಟರ್್ ಗೆ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಸಲ್ಲಿಸಿತ್ತು. 

ಶಬರಿಮಲೆ ದೇವಾಲಯದೊಳಗೆ 10-50ವರ್ಷದೊಳಗಿನ ಮಹಿಳಾ ಭಕ್ತರಿಗೆ ದೇವಾಲಯದೊಳಕ್ಕೆ ಪ್ರವೇಶ ನೀಡುವ ಬಗ್ಗೆ ಕೇರಳ ಸಕರ್ಾರ, ತಿರುವಾಂಕೂರ್ ದೇವಸ್ವಂ ಮಂಡಳಿ, ಶಬರಿಮಲೆಯ ಮುಖ್ಯ ಅರ್ಚಕ ಹಾಗೂ ಪಟ್ಟಣಂತಿಟ್ಟಾ ಜಿಲ್ಲಾಧಿಕಾರಿಗೆ ನಿದರ್ೆಶನ ನೀಡಬೇಕೆಂದು ಪಿಐಎಲ್ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ. 

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಈ ಅಜರ್ಿಯ ವಿಚಾರಣೆಯನ್ನು ಸುಪ್ರೀಂಕೋಟರ್್ ಪಂಚಸದಸ್ಯರ ಸಾಂವಿಧಾನಿಕ ಪೀಠಕ್ಕೆ ವಗರ್ಾಯಿಸಿತ್ತು. ಎಲ್ಲಾ ವಯಸ್ಸಿನ ಮಹಿಳೆಯರೂ ಶಬರಿಮಲೆ ದೇವಾಲಯ ಪ್ರವೇಶಿಸುವ ನಿಲುವಿಗೆ ಕೇರಳ ಸಕರ್ಾರ ಬೆಂಬಲ ಸೂಚಿಸಿದೆ. ಈ ವಿಚಾರದಲ್ಲಿ ರಾಜ್ಯ ಸಕರ್ಾರ 4ನೇ ಬಾರಿ ತನ್ನ ನಿಲುವನ್ನು ಬದಲಿಸುತ್ತಿದೆ ಎಂದು ಮುಖ್ಯ ನ್ಯಾಯಮೂತರ್ಿ ಮಿಶ್ರಾ ಹೇಳಿದರು. ಗುರುವಾರ ಮತ್ತೆ ವಿಚಾರಣೆ ಮುಂದುವರಿಯಲಿದೆ.