ವಿವಾದಕ್ಕೆ ಗ್ರಾಸರಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಸಿಡ್ನಿ, ನ.30- ತಮ್ಮ ಬ್ಯಾಟಿಂಗ್ನಿಂದ  ಸದಾ ಮುಂಚೂಣಿಯಲ್ಲಿದ್ದು ದಾಖಲೆಗಳನ್ನು ಬರೆಯುವ ಮೂಲಕ ಸದ್ದು ಮಾಡುತ್ತಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂದು ವಿವಾದವೊಂದಕ್ಕೆ ಗ್ರಾಸವಾಗಿದ್ದಾರೆ.

ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೊದಲ ದಿನದ ಆಟ ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, ಎರಡನೆ ದಿನವಾದ ಇಂದಜು ಟಾಸ್  ಹಾಕುವ ವೇಳೆ ವಿರಾಟ್ ಕೊಹ್ಲಿ ಅವರು ಶಾಟ್ಸರ್್ ಅನ್ನು ಧರಿಸುವ ಮೂಲಕ ವಿವಾದಕ್ಕೆಡೆ ಮಾಡಿಕೊಟ್ಟಿದೆ.

ಟಾಸ್ ಹಾಕುವ  ವೇಳೆ ಪಂದ್ಯ ಆಡುವ ಧರಿಸಿನಲ್ಲಿ ಕಾಣಿಸಿಕೊಳ್ಳುವುದು ವಾಡಿಕೆ ಆದರೆ  ವಿರಾಟ್ ಶಾಟ್ಸರ್್ನಲ್ಲಿ ಪ್ರತ್ಯಕ್ಷಗೊಂಡಿದ್ದರಿಂದ  ಕ್ರಿಕೆಟ್ ಆಟಕ್ಕೆ ಅಗೌರವ ತೋರಿಸಿದ್ದಾರೆ  ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಆಸ್ಟ್ರೇಲಿಯಾದ  ಕೆಲವು ಕ್ರಿಕೆಟ್ ಆಟಗಾರರು ಕೂಡ  ಆಗ್ರಹಿಸಿದ್ದಾರೆ.

ಇನ್ನೂ ಕೆಲವರು ವಿರಾಟ್ ಕೊಹ್ಲಿ  ಸ್ಟೈಲಿಶ್ ಆಟಗಾರನಾಗಿದ್ದು ಕ್ರಿಕೆಟ್ಗೆ ಅವರು ಈಗಾಗಲೇ  ಅನೇಕ ಗೌರವ ತರುವಂತಹ ಪ್ರಸಂಗಗಳನ್ನು ಸೃಷ್ಟಿಸಿದ್ದು, ಕೊಹ್ಲಿ ಶಾಟ್ಸರ್್ನಲ್ಲೇ ಕಾಣಿಸಿಕೊಂಡಿದ್ದನ್ನೇ ದೊಡ್ಡ ವಿವಾದ ಮಾಡುವುದು ಸರಿಯಲ್ಲ ಎಂದು  ಕೆಲವರು ಟ್ವಿಟ್ಟರ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಸೃಷ್ಟಿಸಿರುವ ಶಾಟ್ಸರ್್ ಸಂಸ್ಕೃತಿಯು ಮುಂದೊಂದು ದಿನ ಕ್ರಿಕೆಟ್ ಜೀವನದಲ್ಲಿ ಸ್ಟೈಲಿಷ್ ಆಗಿ ಗುರುತಿಸಿಕೊಂಡರೆ ಆಶ್ಚರ್ಯಪಡುವಂತಿಲ್ಲ.