ಕಡಬಿ ೨೬: ಸವದತ್ತಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತಾವಲಗೇರಿ ಮತ್ತು ತಾವಲಗೇರಿ ಕ್ರಾಸ್ ಹಾಗೂ ಕುರಬನದಡ್ಡಿ ಗ್ರಾಮಗಳಿಗೆ ಸರಕಾರದಿಂದ ಬರುವಂತ ಅನುದಾನಗಳಂತು ಸರಿಯಾಗಿ ಬರುತ್ತಿಲ. ತಾವಲಗೇರಿ ಕ್ರಾಸ್ನಲ್ಲಿ ನಿರ್ಮಾನವಾದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಬಸ್ ತಂಗುದಾನವು ಸಾರ್ವಜನಿಕರಿಗೆ ನೇರಳಾಗದ ಸ್ಥಿತಿಯಾಗಿದೆ. ಈ ಕಟ್ಟಡವು ಸರಿಯಾಗಿ ಸಿಮೆಂಟ ಹಾಕದೇ ನಿರ್ಮಿಸಿದ್ದಾರೆ ಜನರಿಗೆ ಕುಳಿತು ಕೋಳ್ಳಲು ನಿರ್ಮಿಸಿದ ಕಟ್ಟಡ ಕಿತ್ತು ಹೋಗಿರುವ ಕಟ್ಟಿ ನೋಡಿದರೆ ಗುರತಾಗುತ್ತೆ ಈ ಕಟ್ಟಡ ಎಷ್ಟು ಕಳಪೆ ಕಾಮಗಾರಿ ಎಂಬುವದು ತಿಳಿದು ಬರುತ್ತೆ ಜನ ಸಾಮನ್ಯರು ಇದನ್ನು ನೋಡಿ ಮಳೆ ಬಿಸಲಿನ ತಾಪಕ್ಕೆ ಕುಳಿತು ಕೋಳ್ಳಲು ಈ ಬಸ್ ತಂಗುದಾನ ನೋಡಿ ಜನರು ಹಿಡಿ ಶ್ಯಾಪ ಹಾಕುವಂತ್ತಾಗಿದೆ. ಈ ಗ್ರಾಮಗಳು ಸವದತ್ತಿ ತಾಲೂಕಿನ ಕೋನೆಯ ಗ್ರಾಮಗಳಾಗಿವೆ ಇತ್ತ ಕಡೆ ಯಾವ ಜನಪ್ರತಿನಿಧಿಗಳು ಆಸುಪಾಸು ಸುಳಿದೇಯಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಗ್ರಾಮದ ಜನತೆ ಬ್ಯಾಂಕ ಮತ್ತು ಇನ್ನಿತರ ಕಾರ್ಯಗಳಿಗೆ ಹೋಗಬೇಕಾದರೆ ಕಡಬಿ, ಯರಗಟ್ಟಿಗೆ ಹೋಗ ಬೇಕಾಗುತ್ತದೆ. ಈ ಗ್ರಾಮಕ್ಕೆ ಒಳಪಡುವ ಗ್ರಾಮಗಲಾದ ತಾವಲಗೇರಿ, ಕುರಬನದಡ್ಡಿ, ತಾವಲಗೇರಿ ಕ್ರಾಸ್. ಇಲ್ಲಿ ಯಾವ ಬ್ಯಾಂಕ ಸಹ ಇಲ್ಲ, ಪ್ರಥಮ ಚಿಕಿತ್ಸೆ ಪಡೆಯಲು ಒಂದು ಸಬ್ ಸೇಂಟರ್ ಇಲ್ಲ. ತಾವಲಗೇರಿ ಗ್ರಾಮದಿಂದ 4ಕೀ.ಮೀ.ದಿಂದ ವಿದ್ಯಾರ್ಥಿಗಳು, ಮತ್ತು ಸಾರ್ವಜನಿಕರು ನಡೆದು ಕೊಂಡು ಬರುತ್ತಾರೆ ಈ ಗ್ರಾಮಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಹೇಚ್ಚಿನ ವಿದ್ಯಾಬ್ಯಾಸಕ್ಕಾಗಿ ಯರಗಟ್ಟಿ, ಗೋಕಾಕಕ್ಕೆ ಹೋಗಬೇಕಾಗುತ್ತದೆ. ಹೆಣ್ಣು ಮಕ್ಕಳು ಭಯದಿಂದ ಹೋಗುವಂತ್ತಾಗಿದೆ ಆದ್ದರಿಂದ ಸಂಭಂದ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಬಸ್ಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.