ಲೋಕದರ್ಶನ ವರದಿ
ರಾಯಬಾಗ 27: ಪಟ್ಟಣದ ಮಹಾವೀರ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಸಭಾಭವನದಲ್ಲಿ ದಿ.22ರಂದು ಡಾ.ಬಿ.ಆರ್.ಅಂಬೇಡ್ಕರ ಸಾಂಸ್ಕೃತಿಕ ಕಲಾ ಸಂಘ, ಅಲಖನೂರ, ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಲಕ್ಷ್ಮೀಸೇನ ಸಂಸ್ಥೆಯ ಮಹಾವೀರ ಖಾಸಗಿ ಕೈಗಾರಕಾ ತರಬೇತಿ ಸಂಸ್ಥೆ ರಾಯಬಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ ಜರುಗಿತು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಮಾಲೋಚಕ ವೈ.ಆರ್.ಕಾಂಬಳೆ ಅವರು, ಬ್ಯಾಂಕಿನ ಸೌಲಭ್ಯ ಹಾಗೂ ಯೋಜನೆಗಳ ಕುರಿತು ವಿವರಿಸಿದರು. ಲಕ್ಷ್ಮೀಸೇನ ಸಂಸ್ಥೆಯ ಅಧ್ಯಕ್ಷ ಡಿ.ಎಮ್.ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಬೆಳಗಾವಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಆರ್.ಆರ್.ಮುತಾಲಿಕ ದೇಸಾಯಿ, ಮಹಾವೀರ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಟಿ.ವ್ಹಿ.ಕೇಶನೂರ, ಡಾ.ಎಸ್.ಎಸ್.ಪಾಟೀಲ, ಎಮ್.ಎಲ್.ಶಿಂಗೆ, ವಿಠ್ಠಲ ಜೋಡಟ್ಟಿ ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
ಸರಸ್ವತಿ ದೇವರುಸಿ ಸ್ವಾಗತಿಸಿದರು, ಯಲ್ಲಪ್ಪ ಮಾದರ ನಿರೂಪಿಸಿ, ವಂದಿಸಿದರು.