ವಸತಿ ನಿಲಯಕ್ಕೆ ತಾಲೂಕಾ ಕಾರ್ಯನಿವರ್ಾಕ ಅಧಿಕಾರಿ ಧಿಡೀರ ಭೇಟಿ

ಲೋಕದರ್ಶನ ವರದಿ

ಇಂಡಿ 11: ಪಟ್ಟಣದ ಅಗರಖೇಡ ರಸ್ತೆಯಲ್ಲಿರುವ  ಬಿ.ಸಿ.ಎಮ್ ಮೆಟ್ರಿಕ ನಂತರದ ವಸತಿ ನಿಲಯಕ್ಕೆ ತಾಲೂಕಾ ಕಾರ್ಯನಿವರ್ಾಕ ಅಧಿಕಾರಿ ಡಾ. ವಿಜಯಕುಮಾರ ಅಜೂರ ಧಿಡೀರನೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ವಿಧ್ಯಾಥರ್ಿಗಳು ಅಧಿಕಾರಿಗಳ ಎದುರಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ವಸತಿ ನಿಲಯದ ದುವ್ರ್ಯವಸ್ಥೆ ನೋಡಿ ಸರ್ ನಾವು ಹೇಗೆ ಇಂತಹ ವ್ಯವಸ್ಥೆಯಲ್ಲಿ ಕಾಲ ಕಳೆಯುವದು ನಮಗೆ ಅಭ್ಯಾಸ ಮಾಡಬೇಕು ಎಂದು ಪುಸ್ತಕ ಹಿಡಿದು ಕೂತರೆ ದುರ್ಗಂಧ ವಾಸನೆಯಿಂದ ವಾಕರಿಕೆ ಬರುತ್ತಿದೆ. ಇಂತಹ ಭೂತ ಬಂಗಲೆಯಂತಾದ ಕಟ್ಟಡದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಡುಗೆ ಮಾಡುವ ಕೋಣೆ ಸಂಪೂರ್ಣ ಶಿಥಿಲಾವಸ್ಥೆಯಾಗಿದ್ದು ಮಳೆಗಾಲದಲ್ಲಿ ನೀರು ಜಿನುಗಿ ಸುಣ್ಣ ಬಣ್ಣ ಮತ್ತು ಪ್ಲಾಸ್ಟರ್ ಕಿತ್ತು ಹೋಗಿದೆ. ಲೈಟುಗಳ ವಾಯರ ಹಾಳಾಗಿದೆ. ಹೆಸರಿಗೆ ಮಾತ್ರ ಸೋಲಾರ ಇದೆ. ಹಾಸಿಗೆ ಹೊದಿಕೆಗಳು ಬಂದು ಒಂದು ತಿಂಗಳಾದರೂ ಇನ್ನೂ ವಿತರಣೆ ಮಾಡಿಲ್ಲ ಎಂದು ಹೇಳಿದಾಗ ವಿಧ್ಯಾಥರ್ಿಗಳ ನೋವು ಆಲಿಸಿದ ಅಧಿಕಾರಿ ನೋಡಿ ಸರಕಾರ ನಿಮಗೆ ಸಂಬಳ ಕೊಡುತ್ತಿರುವದು ವಿಧ್ಯಾಥರ್ಿಗಳನ್ನು ಸರಿಯಾಗಿ ನೋಡಿಕೊಳ್ಳಲು ಮತ್ತು ವಸತಿ ನಿಲಯದ ಮೇಲ್ವಿಚಾರಣೆ ಮಾಡಲು  ಊಟ  ಮಾಡುವ ಕೋಣೆ ಬಚ್ಚಲು ಮೋರೆಯಂತಾಗಿದೆ.  ವಸತಿ ನಿಲಯದ ಹೊರ  ಭಾಗ  ಡ್ರೈನೇಜ ಒಡೆದು ನೀರು ಹರಿಯುತ್ತಿದೆ. ಹೀಗಾಗಿ ಸೊಳ್ಳೆಗಳು ಉತ್ಪತಿಯಾಗಿ ಮಲೇರಿಯಾ ಸಾಂಕ್ರಾಮಿಕ ರೋಗ ರುಜಿನಗಳು ವಿಧ್ಯಾಥರ್ಿಗಳಿಗೆ ಹರಡಿದರೆ ಹೇಗೆ? ಯಾರು ಇದಕ್ಕೆ ಹೊಣೆ  ನಾಚಿಕೆಯಾಗಬೇಕು  ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಕ್ಕೆ ನಿಮಗೆ ಒಂದು ವಾರ ಗಡುವು ನೀಡುತ್ತೆನೆ ಸುಧಾರಣೆಯಾಗದಿದ್ದರೆ  ಮೇಲಾಧಿಕಾರಿಗಳಿಂದ ಶಿಸ್ತುಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವದಿಲ್ಲ ಎಂದು  ನಿಲಯ ಮೇಲ್ವೀಚಾರಕ ಆಯ್.ಜಿ. ತೆಲ್ಯಾಳ ಇವರಿಗೆ ಎಚ್ಚರಿಕೆ ನೀಡಿದರು. ತಾಲೂಕಾ ಬಿಸಿಎಂ ಅಧಿಕಾರಿ ವ್ಹಿ.ಬಿ. ಕೌಲಗಿ  ಹಾಗೂ ಬಿಸಿಎಂ ವಸತಿ ನಿಲಯದ ವಿಧ್ಯಾಥರ್ಿಗಳು ಉಪಸ್ಥಿತರಿದ್ದರು