ರಣವೀರ್ ಅಲಹಾಬಾದಿಯಾಗೆ ನಾಚಿಕೆಯಾಗಬೇಕು: ಸುಪ್ರೀಂ ಕೋರ್ಟ್

Ranveer Allahabadia should be ashamed: Supreme Court

ಬೆಂಗಳೂರು 18: ಕಾರ್ಯಕ್ರಮ ಒಂದರ ವೇಳೆ ಅಶ್ಲೀಲ ಹೇಳಿಕೆ ನೀಡಿದ ಸಂಬಂಧ ತನಿಖೆ ಎದುರಿಸುತ್ತಿರುವ ಯೂಟ್ಯೂಬರ್ ರಣವೀರ್‌ ಅಲಹಾಬಾದಿಯಾ ಬಂಧನಕ್ಕೆ ಸಂಬಂಧಿಸಿದ ಅರ್ಜಿಯನ್ನು ಆಲಿಸಿದ ಸುಪ್ರೀಂಕೋರ್ಟ್, ರಣವೀರ್‌ನ ರಣವೀರ್‌ ಅಲಹಾಬಾದಿಯಾ ಆಗೂ ಆತನ ಸಂಗಡಿಗರು ಖಾಸಗಿ ಶೋ ಒಂದರಲ್ಲಿ ತಂದೆ–ತಾಯಿ ಹಾಗೂ ಮಕ್ಕಳ ಸಂಬಂಧದ ಬಗ್ಗೆ ಮಾಡಿದ ಅತ್ಯಂತ ಅಶ್ಲೀಲ ಕಾಮೆಂಟ್  ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,  ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ ಮತ್ತು ರಣವೀರ್‌ ಮೇಲೆ ಹೆಚ್ಚುವರಿ ಎಫ್‌ಐಆರ್‌ಗಳನ್ನು ದಾಖಲಿಸದಂತೆ ನಿರ್ದೇಶನ ನೀಡಿದೆ.

ಇದರಿಂದ ಬಂಧನ ಭೀತಿಯಿಂದ ಯೂಟ್ಯೂಬರ್  ರಣವೀರ್‌ ಅಲಹಾಬಾದಿಯಾ ಸದ್ಯ ಪಾರಾಗಿದ್ದಾನೆ. ಆದರೆ ಆರೋಪಿಯು ದೇಶ ಬಿಟ್ಟು ಹೊರಡುವ ಹಾಗಿಲ್ಲ. ಈಗಾಗಲೇ ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ದಾಖಲಾಗಿರುವ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಸಹಕರಿಸಬೇಕು. ಪಾಸ್‌ಪೋರ್ಟ್‌ ಅನ್ನು ಪೊಲೀಸರ ವಶಕ್ಕೆ ನೀಡಬೇಕು. ಮುಂದಿನ ಆದೇಶದವರೆಗೆ ರಣವೀರ್‌ ಅಲಹಾಬಾದಿಯಾ ಹಾಗೂ ಆತನ ಸಹವರ್ತಿಗಳು ಯೂಟ್ಯೂಬ್‌ನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಬಿತ್ತರಿಸಬಾರದು ಎಂದು ಆದೇಶಿಸಿದೆ.

ಯೂಟ್ಯೂಬರ್ ರಣವೀರ್‌ ಮನಸ್ಸಿನಲ್ಲಿ ಏನೋ ಕೊಳಕು ಇದ್ದಿರಬಹುದು. ಅದಕ್ಕಾಗಿಯೇ ಅದನ್ನು ಯುಟ್ಯೂಬ್‌ನಲ್ಲಿ ವಾಂತಿ ಮಾಡಿದ್ದಾನೆ ಎಂದು ಅಭಿಪ್ರಾಯಪಟ್ಟಿದೆ.