ಮೈಸೂರು 16: ನಟ ರಾಕ್ಷಸ ಡಾಲಿ ಧನಂಜಯ ಧನ್ಯತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾನುವಾರ ಮೈಸೂರಿನ ವಸ್ತು ಸಂಗ್ರಹಾಲಯ ಮೈದಾನದಲ್ಲಿ ಎರಡೂ ಕುಟುಂಬದ ಹಿರಿಯರು ಮತ್ತು ಆತ್ಮೀಯರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿತು.
ಧನಂಜಯ – ಧನ್ಯತಾ ಅವರ ಅದ್ಧೂರಿ ವಿವಾಹ ಸಂಭ್ರಮಕ್ಕೆ ನೂರಾರು ಗಣ್ಯರು ಆಗಮಿಸಿ ಶುಭಕೋರಿದ್ದಾರೆ.
ರಕ್ಷಿತಾ ಪ್ರೇಮ್, ಶ್ರೀಮುರುಳಿ, ನಿರ್ದೇಶಕ ಪ್ರೇಮ್, ಅಮೂಲ್ಯ, ಮೇಘನಾ, ಸಪ್ತಮಿ ಗೌಡ, ವಸಿಷ್ಠ ಸಿಂಹ, ಕೆ.ಮಂಜು, ಕೆವಿನ್ ನಿರ್ಮಾಪಕರು, ಪ್ರಥಮ್, ರಂಗಾಯಣ ರಘು, ತೆಲುಗು ನಿರ್ದೇಶಕ ಸುಕುಮಾರ್ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗಿದ್ದರು.
ಇದಲ್ಲದೆ ಕರ್ನಾಟಕದ ರಾಜ್ಯಪಾಲರು, ಬಿ.ವೈ ವಿಜಯೇಂದ್ರ, ಜಮೀರ್ ಅಹ್ಮದ್, ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಹಲವು ಭಾಗಿಯಾಗಿ ರಾಜಕೀಯ ಗಣ್ಯರು ನವಜೋಡಿಗೆ ಆಶೀರ್ವಾದ ಮಾಡಿದರು.
ಮದುವೆ ಮಂಟಪದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ ಮದುವೆಯ ಎಲ್ಲ ಕಾರ್ಯಕ್ರಮಗಳು ಶಾಂತಿಯುತ ನಡೆದಿದೆ. ಆರತಕ್ಷತೆಗೆ ನೂರಾರು ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಎಲ್ಲವೂ ಆಗಿದ್ದೂ ಎಲ್ಲರು ಖುಷಿ ಆಗಿದ್ದಾರೆ. ಚಿತ್ರರಂಗದ ಕುಟುಂಬಕ್ಕೆ, ಅಭಿಮಾನಿಗಳಿಗೆ ನಾನು ಯಾವಾಗಲೂ ಆಭಾರಿ ಆಗಿದ್ದೇನೆ ಎಂದರು.
ಸಾವಿರಾರು ಜನ ಬಂದು ಹಾರೈಸಿದ್ದು ಖುಷಿ ಆಯಿತು. ಅಭಿಮಾನಿಗಳ ಪ್ರೀತಿಗೆ ಏನು ವಾಪಾಸ್ ನೀಡವಬೇಕೆಂದು ಗೊತ್ತಿಲ್ಲ. ಅವರ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ. ಅವರು ತುಂಬಾ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ಅವರ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಡಾಲಿ ಹೇಳಿದರು.
ನನಗೂ ಕೆಲಸ ಇದೆ. ಅವರಿಗೂ ಕೆಲಸ ಇದೆ. ಮಾರ್ಚ್‌ನಿಂದ ಮತ್ತೆ ಶೂಟಿಂಗ್ ಶುರು ಮಾಡುತ್ತೇನೆ ಎಂದು ಧನಂಜಯ ಹೇಳಿದ್ದಾರೆ.