ಅನುದಾನಿತ ಕಾಲೇಜು ನೌಕರರ ಹಿತ ಕಾಯಲು ಸಿದ್ಧ-ರುದ್ರ​‍್ಪ ಲಮಾಣಿ

Rudrapa Lamani is ready to take care of aided college employees

ಅನುದಾನಿತ ಕಾಲೇಜು ನೌಕರರ ಹಿತ ಕಾಯಲು ಸಿದ್ಧ-ರುದ್ರ​‍್ಪ ಲಮಾಣಿ  

 ರಾಣೆಬೆನ್ನೂರು 17 : ಪದವಿಪೂರ್ವ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಹೊಣೆ ಹೊತ್ತಿರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ನೌಕರರು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಅರಿವು ನನಗೂ ಇದೆ. ಅನೇಕ ಬಾರಿ ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮತ್ತು ಮಂತ್ರಿಗಳ ಜೊತೆ ಚರ್ಚಿಸಿ ನಿಮ್ಮ ಹಿತ ಕಾಯಲು ಸಿದ್ಧನಿದ್ದೇನೆ ಎಂದು ವಿಧಾನಸಭೆ ಉಪಸಭಾಪತಿ ರುದ್ರ​‍್ಪ ಲಮಾಣಿ  ಭರವಸೆ ನೀಡಿದರು. ಅವರು ನಗರದ ಬಿಎ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಜಿಲ್ಲಾ ಸಂಘದ ಸಮಾರಂಭ ಉದ್ಘಾಟಿಸಿ ಮಾತನಾಡಿಡರು.ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಡಿಮೆ ಸಂಖ್ಯೆಯನ್ನು ಆಧರಿಸಿ ದೂರದ ಸ್ಥಳಗಳಿಗೆ ನಿಯೋಜನೆ ಮಾಡುವುದರಿಂದ ಉಪನ್ಯಾಸಕರಿಗೆ ಮಾನಸಿಕ ಕಿರಿಕಿರಿಯಾಗುತ್ತಿದೆ.ಅವರನ್ನು ಸೇವೆಯಿಂದ ಮಧ್ಯದಲ್ಲಿಯೇ ವಿಮುಕ್ತಿಗೊಳಿಸಿದರೆ ಕುಟುಂಬ ಬೀದಿಪಾಲಾಗುತ್ತದೆ. ಅದ್ದರಿಂದ ಶೀಘ್ರದಲ್ಲಿಯೇ  ಸಂಘಟನೆಯ ಪ್ರಮುಖರು ಮತ್ತು ಸಂಬಂಧಿಸಿದವರೊಂದಿಗೆ ಸಭೆ ನಡೆಸಿ  ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಪಿಯುಸಿ ಶಿಕ್ಷಣ ಮಕ್ಕಳಿಗೆ ಅತ್ಯಂತ ಮಹತ್ವವಾದದ್ದು. ಗುರುಗಳಾಗಿ ತಾವು ಶ್ರದ್ಧೆಯಿಂದ ಕರ್ತವ್ಯ ಮಾಡುತ್ತಿದ್ದೀರಿ. ನಿಮ್ಮ ನ್ಯಾಯಯುತವಾದ ಬೇಡಿಕೆಗಳಿಗೆ ನನ್ನ ಬೆಂಬಲ ಇದೆ. ಅದರ ಪರಿಹಾರಕ್ಕಾಗಿ ನಾನೂ ಶ್ರಮಿಸುತ್ತೇನೆ ಎಂದರು.       ಸಂಘದ ರಾಜ್ಯಾಧ್ಯಕ್ಷ ಡಾ.ಹರೀಶ್ ಎನ್‌. ಮಾತನಾಡಿ ಅನುದಾನಿತ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು ಕಡಿತಗೊಳಿಸಬೇಕು. ಉಪನ್ಯಾಸಕರನ್ನು ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜಿಸಬೇಕು. ಇಲ್ಲವೇ ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ, ಆದರ್ಶ ಇತ್ಯಾದಿ ಕಾಲೇಜುಗಳಿಗೆ ನಿಯೋಜಿಸಬಹುದು. ನೌಕರರಿಗೆ ಸೇವಾ ಭದ್ರತೆಯೊಂದಿಗೆ ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ಉಪನ್ಯಾಸಕರಿಗೆ ಸಿಗುವ ಸೌಲಭ್ಯಗಳನ್ನು ನಮಗೂ ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದರು. ಬಿಎ ಜೆಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ  ಡಾ. ಆರ್‌. ಎಂ.ಕುಬೇರ​‍್ಪ ಶಿಕ್ಷಕರ ಸಂಘಟನೆಗಳೊಂದಿಗಿನ ತಮ್ಮ ಸುದೀರ್ಘ ಹೋರಾಟವನ್ನು ವಿವರಿಸಿದರು. ಸೂಕ್ತ ಅಭ್ಯರ್ಥಿಯನ್ನು ಗುರುತಿಸಿ ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿದರೆ  ಉಪನ್ಯಾಸಕರ ಸಮಸ್ಯೆಗಳನ್ನ ಬಗೆಹರಿಸಬಹುದು.ಇಂದು ಹೋರಾಟಗಳು ಕ್ಷೀಣಿಸುತ್ತಿವೆ. ಅವು ಮತ್ತೆ ಚಳುವಳಿ ರೂಪಕ್ಕೆ ಮರಳಬೇಕು ಎಂದರು.ಸಾಹಿತಿ ಶೇಖರ ಭಜಂತ್ರಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿನ ನೌಕರರು ಎದುರಿಸುತ್ತಿರುವ ಸಮಸ್ಯೆಗಳು ಕುರಿತು ವಿಶೇಷ ಉಪನ್ಯಾಸ ನೀಡಿ ಸೈನಿಕ ಕೃಷಿಕ ಮತ್ತು ಶಿಕ್ಷಕ ದೇಶದ ಬೆನ್ನೆಲುಬು ಇದ್ದಂತೆ. ಇವರನ್ನು ಗೌರವದಿಂದ ಕಾಣುವುದರಿಂದ ದೇಶವನ್ನು ಸದೃಢವಾಗಿ ಕಟ್ಟಲು ಸಾಧ್ಯ. ಉಪನ್ಯಾಸಕರಧು ಬೌದ್ಧಿಕ ಮತ್ತು ಮಾನಸಿಕ ಶ್ರಮವಿದೆ.ಅವರನ್ನು ಕಾಡುತ್ತಿರುವ ಸಮಸ್ಯೆಗಳಿಂದ ವಿಮುಕ್ತಿಗೊಳಿಸಿದರೆ ಮಾತ್ರ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಾಧ್ಯ.ಜೊತೆಗೆ ಉಪನ್ಯಾಸಕರು ಕೂಡ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಕಾಲಘಟ್ಟದಲ್ಲಿ ಹೊಸ ಪೀಳಿಗೆಯ ಆದ್ಯತೆಗಳು ಬದಲಾಗುತ್ತಿವೆ. ಇದನ್ನು ಮನವರಿಕೆ ಮಾಡಿಕೊಂಡು ಬೋಧನೆಯ ಹೊಸ ಸಾಧ್ಯತೆಗಳನ್ನು ಗುರುತಿಸಿ ಅಳವಡಿಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಬೇಕು.ಜೊತೆಗೆ ಸಂಘದ ಪದಾಧಿಕಾರಿಗಳು ಕ್ರಿಯಾತ್ಮಕವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್‌. ಎಸ್‌. ನಿಸ್ಸಿಮಗೌಡರ, ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ನಾಗರಾಜ ದ್ಯಾಮನಕೊಪ್ಪ  ಈ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಪರಿಣಾಮವನ್ನು ವಿಶ್ಲೇಷಿಸಿದರು. ನೌಕರರು ಮತ್ತು ಸಂಸ್ಥೆಯ ಉಳಿವಿಗಾಗಿ ಹೋರಾಟ ಚಳುವಳಿ ರೂಪ ಪಡೆಯಬೇಕು ಎಂದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಪ್ರಭಾರಿ ಉಪ ನಿರ್ದೇಶಕ ಆನಂದ ಮುದುಕಮ್ಮನವರ ಮಾತನಾಡಿ ನಮ್ಮ ಹಂತದಲ್ಲಿ ಸಾಧ್ಯವಿರುವ  ನೌಕರರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಮುಂದಿನ ಬಾರಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಿ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಅನುದಾನಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಪರಶುರಾಮ ಗಚ್ಚಿನಮನಿ ಜಿಲ್ಲೆಯ ಎಲ್ಲಾ ಹಿರಿಯರ ಮಾರ್ಗದರ್ಶನದಂತೆ ನೌಕರರ ಹಿತ ಕಾಯಲು ಸಂಘವನ್ನು ರಚಿಸಲಾಗಿದ್ದು, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ರಾಜ್ಯಾಧ್ಯಕ್ಷರಾದ ಡಾ.ಹರೀಶ್ ರವರ ಆದೇಶದಂತೆ ಜಿಲ್ಲೆಯಲ್ಲಿ ಕ್ರಿಯಾತ್ಮಕವಾಗಿ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು. ಇದಕ್ಕೆ ತಮ್ಮೆಲ್ಲರ ಬೆಂಬಲವನ್ನು ಕೋರುತ್ತೇನೆ ಎನ್ನುತ್ತಾ ಜಿಲ್ಲೆಯ ಎಲ್ಲಾ ತಾಲೂಕುಗಳ  ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದರು. ಜಾವಿವಿ ಸಿಂಡಿಕೇಟ್ ಸದಸ್ಯ ರಮೇಶ ಲಮಾಣಿ, ಎನ್‌ಎಸ್‌ಎಸ್ ಅಧಿಕಾರಿ  ರವಿಕುಮಾರ ಅಂಬೋರೆ, ರಮಾಕಾಂತ ಭಟ್, ಎಂ.ಬಿ. ಸತೀಶ ಮತ್ತಿತರರು  ಉಪಸ್ಥಿತರಿದ್ದರು.    ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು ವೆಂಕಟೇಶ ರೆಡ್ಡಿ ಟಿ. ಸ್ವಾಗತಿಸಿ, ನಾಗರಾಜ ನಿಂಗಪ್ಪನವರ ಮತ್ತು ರವಿಕುಮಾರ ನಿರೂಪಿಸಿ ಆಂಜನೇಯ ಹಳ್ಳಳ್ಳಿ ವಂದಿಸಿದರು.