ನಿರಂತರವಾದ ಅಭ್ಯಾಸದಿಂದ ಉನ್ನತ ಹುದ್ದೆ ಲಭಿಸಿದೆ :ಯಶವಂತ ಕುಮಾರ ಎಸ್‌.ಬಿ.

Achieved high position by constant practice : Yashwanth Kumar S.B.

ನಿರಂತರವಾದ ಅಭ್ಯಾಸದಿಂದ ಉನ್ನತ ಹುದ್ದೆ ಲಭಿಸಿದೆ :ಯಶವಂತ ಕುಮಾರ  ಎಸ್‌.ಬಿ. 

ಕೊಪ್ಪಳ: ನಿರಂತರವಾದ ಅಭ್ಯಾಸದ ಫಲವಾಗಿ ನನಗೆ ಉನ್ನತ ಹುದ್ದೆ ಲಭಿಸಿದೆ ಎಂದು ಸಿ.ಇ.ಎನ್‌.ಪೋಲಿಸ್ ಠಾಣೆಯ ಉಪ ಅಧಿಕ್ಷಕರಾದ ಯಶವಂತ ಕುಮಾರ. ಎಸ್‌.ಬಿ. ಹೇಳಿದರು. 

   ಅವರು ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್‌ ಬೆಂಗಳೂರು ಹಾಗೂ ಅರುಣೋದಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಮತ್ತು ಮನು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಅರಿವಿನ ಅಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ನಾನು ಕೂಡಾ ಸರಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾ,ದ್ವಿತೀಯ ಪಿ.ಯು.ಸಿ.ಯಲ್ಲಿ ಕಡಿಮೆ ಅಂಕವನ್ನು ಪಡೆದ ಪರಿಣಾಮವಾಗಿ ಓದಿ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಅಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಹರಿಸಿದ ಪರಿಣಾಮವಾಗಿ ಮೊದಲು ಶಿಕ್ಷಕನಾಗಿ ನೇಮಕವಾದೆ.ಆದರೆ ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯುತ್ತಾ, ಹೆಚ್ಚಿನ ಪರಿಶ್ರಮವನ್ನು ವಹಿಸಿ ಉತ್ನವಾದ ಹದ್ದೆಯನ್ನು ಪಡೆಯಲೇಬೇಕು ಎಂಬ ಹಂಬಲದಿಂದ ಸುಮಾರು 15 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದೆ. 15 ಸರ್ಕಾರಿ ಹುದ್ದೆಗಳನ್ನು ಪಡೆಯುವುದು ಅಷ್ಟು ಸುಲಭವಾದ ಕೆಲಸವಲ್ಲ. ಉನ್ನತವಾದ ಹುದ್ದೆಯನ್ನು ಮಕ್ಕಳು ಕೂಡಾ ಪಡೆಯಬೇಕಾದರೆ ಓದಿನ ಕಡೆಯಲ್ಲಿ ಹೆಚ್ಚು ಆಸಕ್ತಿ ವಹಿಸುವುದುರ ಜೊತೆಯಲ್ಲಿ ಅದಕ್ಕೆ ತಕ್ಕಂತೆ ಪರಿಶ್ರಮವನ್ನು ಪಡಬೇಕು.ವಿದ್ಯಾರ್ಥಿಗಳು ಕೂಡಾ ಪಠ್ಯೇತದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳ ಹೆಚ್ಚು ಗಮನ ಹರಿಸಬೇಕು. ವಿಶೇಷವಾಗಿ ಪತ್ರಿಕೆಗಳನ್ನು ಓದುವ,ಪುಸ್ತಕ ಓದುವ ಹವ್ಯಾಸ ಸೇರಿದಂತೆ ವಿವಿಧ ಅಭ್ಯಾಸಗಳನ್ನು ಬೆಳೆಸಬೇಕು ಅಂದಾಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ.ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಸಂಸ್ಕಾರ ನೀಡುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು. 

  ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. 

ಗ್ರಾಮ ಪಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ ಮಾತನಾಡಿ,ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು.ತಂದೆ ಹಾಗೂ ತಾಯಿಗಳು ಮಕ್ಕಳ ಶೈಕ್ಷಣಿಕ ಚುಟುವಟಿಕೆಗಳ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು. 

 ಬಹದ್ದೂರಬಂಡಿ ಕ್ಲಸ್ಟರ್ ಸಿ.ಆರ್‌.ಪಿ. ಹನುಮಂತಪ್ಪ ಕುರಿ ಮಾತನಾಡುತ್ತಾ,ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಅರಿವಿನ ಅಂಗಳ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಒಂದು ಉತ್ತಮವಾದ ಕಾರ್ಯಕ್ರಮವಾಗಿದೆ ವಿದ್ಯಾರ್ಥಿಗಳು ಇದನ್ನು ಸರಿಯಾದ ರೀತಿಯಲ್ಲಿ ಬಳಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಗೊಳಬೇಕು ಎಂದು ಹೇಳಿದರು. 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೇಲು ಉಸ್ತುವಾರಿ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಮಹಮ್ಮದರಫಿ, ಎಸ್‌.ಡಿ.ಎಂ.ಸಿ.ಸದಸ್ಯರಾದ ಮೈಲಪ್ಪ ಕಂಬದಮನಿ, ಬಸವರಾಜ,ಉರ್ದು ಶಾಲೆಯ ಅಧ್ಯಕ್ಷರಾದ ಮೌಲಾಸಾಬ ಕಮ್ಮಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ಶಿಕ್ಷಕರಾದ ಅಶೋಕ ಚೌಡಿ,ಶಿಕ್ಷಕರಾದ ರಿಜ್ವಾನಾ ಬೇಗಂ,ಭಾರತಿ ಉಪಾಧ್ಯಾಯ, ಮೀರಾಜುನ್ನಿಸಾ, ಮಮತಾ, ಹನುಮಂತವ್ವ, ಸುಜಾತ ಕುರಿ, ಗೀತಾ ಕುರಿ, ನಗ್ಮಾ, ಜಲಜಾಕ್ಷಿ, ಹನುಮಂತಪ್ಪ, ರಾಜಾ ಹುಸೇನ, ವೀಣಾ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಭಾರತಿ ಹವಳೆ ನಿರೂಪಿಸಿದರು. 

 ಶಿಕ್ಷಕಿ ಗಂಗಮ್ಮ ಕಪರಶೆಟ್ಟರ್ ಸ್ವಾಗತಿಸಿ, ಜ್ಯೋತಿಲಕ್ಷ್ಮೀ ವಂದಿಸಿದರು.