ಲೋಕದರ್ಶನ ವರದಿ
ಯಲ್ಲಾಪುರ, 19: ನಾವು ನಮ್ಮ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಹಾಗೂ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಸದಾ ಜಾಗೃತಿ ವಹಿಸಬೇಕು. ಪ್ರತಿ ದಿನ ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ರೋಗ,ರುಜಿನಗಳಿಂದ ದೂರವಿದ್ದು ಸಮಾಜದಲ್ಲಿ ಸಾಸ್ಥ್ಯದಿಂದ ಬದುಕೋಣ ಎಂದು ತಾಲೂಕಾ ಪಂಚಾಯತ್ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು.ಅವರು ಸೋಮವಾರ ಜಿಲ್ಲಾ ಪಂಚಾಯತ್ ,ತಾಲೂಕಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕಿರವತ್ತಿಯಲ್ಲಿ ತಾಲೂಕಾ ಮಟ್ಟದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿ, ಶೌಚಾಲಯದ ಬಳಕೆಯ ಕುರಿತು ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶೌಚಾಲಯ ಹೊಂದಿಲ್ಲದವರು ಕೂಡಲೇ ಗ್ರಾಮ ಪಂಚಾಯತ್ ಅಥವಾ ತಾಲೂಕಾ ಪಂಚಾಯತ್ ಅಧಿಕಾರಿಗಳನ್ನು ಸಂಪಕರ್ಿಸಿ ಶೌಚಾಲಯ ನಿಮರ್ಿಸಿಕೊಳ್ಳಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ನಮ್ಮ ಮನಸ್ಸು,ದೇಹ ಆರೋಗ್ಯವಾಗಿರುತ್ತದೆ. ಸ್ವಚ್ಛತೆಯ ಕೊರತೆಯಿಂದ ನಾನಾ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮನೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಪ್ರತಿನಿತ್ಯ ಶೌಚಾಲಯವನ್ನು ಬಳಸುವಂತೆ ವಿಧ್ಯಾಥರ್ಿಗಳೂ ಪಾಲಕರನ್ನು ಒತ್ತಾಯಿಸಬೇಕು ಎಂದು ಅವರು ಸಲಹೆ ನೀಡಿದರು.
ತಾಲೂಕಾ ಪಂಚಾಯತ್ ಸಹಾಯಕ ನಿದರ್ೇಶಕ ರಮೇಶ ರೆಡ್ಡಿ ಮಾತನಾಡಿ, ಸ್ವಚ್ಛತೆಯ ಕೊರತೆಯಿಂದ ಹರಡುವ ವಾಂತಿ,ಬೇಧಿ ಮುಂತಾದ ಸಾಂಕ್ರಾಮಿಕ ರೋಗಗಳಿಂದಾಗಿ ವಿಶ್ವದಾದ್ಯಂತ ಪ್ರತೀ ವರ್ಷ 5 ವರ್ಷದ ಒಳಗಿನ ಅನೇಕ ಮಕ್ಕಳು ಅಸುನೀಗುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಕೆಲವು ಪ್ರದೇಶಗಳಲ್ಲಿ ಶೌಚಾಲಯ ಕಟ್ಟಡವಿದ್ದರೂ ಅದು ಬೇರೆಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದೂ ಗಮನಕ್ಕೆ ಬಂದಿದೆ. ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುವದು ಅಗತ್ಯವಾಗಿದೆ ಎಂದರು. ತಾ.ಪ.ಸದಸ್ಯೆ ಮಾಲಾ ಚಂದಾವರ ಮಾತನಾಡಿದರು. ಕಿರವತ್ತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಬಿನಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಕಲ್ಪನಾ ಸಿ.ನಾಯ್ಕ್ ಶೌಚಾಲಯ ಬಳಕೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಿರವತ್ತಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಮಂಜುಳಾ ನಾಯ್ಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಕುಂತಲಾ ಪಾಂಡ್ರಮೀಸೆ ಹಾಗೂ ಸಂಗಡಿಗರು ಪ್ರಾಥರ್ಿಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿಟ್ಟಲ್ ನಾಟೇಕರ ಸ್ವಾಗತಿಸಿದರು. ಕಿರವತ್ತಿ ಗ್ರಾ.ಪಂ.ಪಿ.ಡಿ.ಓ ಯೋಗೇಂದ್ರ ಕಾರ್ಯಕ್ರಮ ನಿರ್ವಹಿಸಿ,ವಂದಿಸಿದರು. ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಡೆದ ಸ್ಫಧರ್ೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶೌಚಾಲಯ ಬಳಕೆಯ ಬಗ್ಗೆ ಅರಿವು ಮೂಡಿಸಲು ಕಿರವತ್ತಿಯ ಪ್ರಮುಖ ಬೀದಿಗಳಲ್ಲಿ ಜಾಗ್ರತಿ ಜಾಥಾ ನಡೆಸಲಾಯಿತು.