ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ: ಪೋಳ

Take precautions to prevent environmental pollution from mining: Pola

ರಾಯಬಾಗ 12: ಗಣಿಗಾರಿಕೆಯಿಂದ ಪರಿಸರ ಮಾಲಿನ್ಯ ಉಂಟಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದರು ಪ್ರಾದೇಶಿಕ ಕಚೇರಿ ಚಿಕ್ಕೋಡಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೋಭಾ ಪೋಳ ಹೇಳಿದರು. 

ಬುಧವಾರ ತಾಲೂಕಿನ ನಂದಿಕುರಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಸಿ.ಎಚ್‌.ವೀರಾಜು ಮತ್ತು ಎಸ್‌.ವಿ.ಸತ್ಯನಾರಾಯಣ ರೆಡ್ಡಿ ಪಾಲುಗಾರಿಕೆಯ ಕಲ್ಲು ಗಣಿಗಾರಿಕೆಗೆ ಭೇಟಿ ನೀಡಿ ಸುತ್ತ ಮುತ್ತಲಿನ ಪರಿಸರ ವೀಕ್ಷಣೆ ಮಾಡಿ, ಸಾರ್ವಜನಿಕರ ಸಭೆ ನಡೆಸಿ ಮಾತನಾಡಿದ ಅವರು, ಇದು ಜನದಟ್ಟಣೆ ಪ್ರದೇಶ ವ್ಯಾಪ್ತಿಯಿಂದ ದೂರವಿದ್ದು, ಗಣಿಗಾರಿಕೆ ನಡೆಸುವವರು ಎಲ್ಲ ಸುರಕ್ಷಿತ ಕ್ರಮ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು  ತಿಳಿಸಿದರು. 

ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ಸುರೇಶ ಮುಂಜೆ, ಭೂ ವಿಜ್ಞಾನಿ ಫಯಾಜ್‌ಅಹ್ಮದ್ ಶೇಖ, ಪೃಥ್ವಿರಾಜ ಜಾಧವ, ಅಮೀತ ಜಾಧವ, ಸೋಮಶೇಖರ ಜೋರೆ, ರಾಜೇಂದ್ರ ಡಬ್ಬಣ್ಣನವರ, ಗೀರೀಶ ಬಿರಾದಾರ, ಸೋಮಶೇಖರ  ಸಂಕಪಾಳ, ರಾಜು ದಾವಣೆ ಸೇರಿ ಅನೇಕರು ಇದ್ದರು.