ವಸತಿ ವಿನ್ಯಾಸಗಳಲ್ಲಿನ ಸಾರ್ವಜನಿಕ ಉದ್ದೇಶಗಳ ನಿವೇಶನಗಳ ಸಮೀಕ್ಷೆ ಸಮರೋಪಾದಿಯಲ್ಲಿ ಕೈಗೊಳ್ಳಿ - ಸಚಿವ ಆರ್.ವಿ.ದೇಶಪಾಂಡೆ

ಲೋಕದರ್ಶನ ವರದಿ

ಧಾರವಾಡ 17: ಹೊಸ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ನಿವೇಶನಗಳ ಸಮೀಕ್ಷಾ ಕಾರ್ಯವನ್ನು ಸಮರೋಪಾದಿಯಲ್ಲಿ  ಕೈಗೊಂಡು, ಶಾಲೆ,  ಹಾಸ್ಟೆಲ್ ನಿಮರ್ಾಣಕ್ಕೆ ಆದ್ಯತೆಯಡಿ ಒದಗಿಸಬೇಕು.

ಪ.ಜಾತಿ ಹಾಗೂ ಪ.ಪಂಗಡಗಳ ವಿದ್ಯಾಥರ್ಿಗಳೂ ಸೇರಿದಂತೆ ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳು ಯಾವ ಭಾಗದಲ್ಲಿ ಹೆಚ್ಚಿನ ಪ್ರವೇಶ ಆಗುತ್ತಿದೆಯೋ ಅಲ್ಲಿ ಭಾಡಿಗೆ ಕಟ್ಟಡಗಳನ್ನು ಗುರುತಿಸಿ, ಹೊಸ ಹಾಸ್ಟೆಲ್ ಸ್ಥಾಪಿಸಲು ಪ್ರಸ್ತಾವನೆ ಕಳಿಸಿದರೆ ಸಕರ್ಾರದ ಮಟ್ಟದಲ್ಲಿ ಮಂಜೂರಾತಿ ಕೊಡಿಸಲಾಗುವದು ಎಂದು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಜಿಪಂ ಸಭಾಂಗಣದಲ್ಲಿಂದು ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ಕನರ್ಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ ಪ್ರದೇಶಗಳಲ್ಲಿ ಹೊಸ ಲೇಔಟ್ಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಸಾರ್ವಜನಿಕ ಉದ್ದೇಶಕ್ಕೆ ಸಿ.ಎ.ನಿವೇಶನ ಮೀಸಲಿಡಬೇಕು. ಅವುಗಳನ್ನು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಹಾಗೂ ಶಾಲೆಗಳಿಗೆ ಆದ್ಯತೆಯ ಮೇಲೆ ಒದಗಿಸಬೇಕು ಎಂದು ಸೂಚಿಸಿದರು.

ಅವಳಿನಗರದಲ್ಲಿ 3 ಇಂದಿರಾ ಕ್ಯಾಂಟೀನ್ ಆರಂಭವಾಗಿವೆ. ಉಳಿದ 9 ಕ್ಯಾಂಟೀನ್ಗಳನ್ನು  ಶೀಘ್ರ ಆರಂಭಿಸಬೇಕು ಎಂದರು. ಅವಳಿನಗರಕ್ಕೆ ಕುಡಿಯುವ ನೀರು ಪೂರೈಸಲು  ಹಣ ಲಭ್ಯವಿದೆ. ಅದನ್ನು ನೀರು ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲು ಹಾಗೂ ಸರಿಯಾದ ವಿತರಣೆಗೆ ರೂಪಿಸಿರುವ ಯೋಜನೆಗೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವಳಿನಗರದಲ್ಲಿ ಸ್ವಚ್ಚತಾ ಪ್ರಮಾಣ ಸುಧಾರಣೆ ಆಗಬೇಕು. ಇದನ್ನು ಅನುಷ್ಠಾನಗೊಳಿಸಲು  ಕೊರತೆಗಳೇನು ಎಂದು ಪಾಲಿಕೆ ಆಯುಕ್ತರಿಂದ ಮಾಹಿತಿ ಪಡೆದರು. 

ಅರಣ್ಯವಾಸಿಗಳ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡ (ಎಸ್.ಟಿ) ಹಾಗೂ ಇತರ ಬುಡಕಟ್ಟುಗಳಿಗೆ ನಿಯಮಾನುಸಾರ ತ್ವರಿತವಾಗಿ ಹಕ್ಕು ಪತ್ರ ವಿತರಿಸಬೇಕು. ಅವರ ಹಕ್ಕಿಗೆ ನ್ಯಾಯ ಒದಗಿಸಬೇಕು. ಬಹುತೇಕ ಅಧಿಕಾರಿಗಳು ಬಡ ಮತ್ತು ಮಧ್ಯಮ ವರ್ಗದಿಂದ ಬಂದವರಾಗಿರುತ್ತೀರಿ, ಜನಸಾಮಾನ್ಯರು ಮತ್ತು ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವತರ್ಿಸಿ, ಸ್ಪಂದನೆ ನೀಡಬೇಕು. ಕಾನೂನು ಪ್ರಕಾರ ಆಗಬೇಕಾದ ಎಲ್ಲ ಕೆಲಸಗಳು ವಿಳಂಬವಿಲ್ಲದೇ ಆಗಬೇಕು. ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಉಪವಿಭಾಗಾಧಿಕಾರಿಗಳು ನಿರಂತರವಾಗಿ ಗ್ರಾಮೀಣ ಪ್ರದೇಶಗಳಿಗೆ, ಹಾಸ್ಟೆಲ್ಗಳಿಗೆ ಭೇಟಿ ನೀಡಿ ಗುಣಮಟ್ಟ ಪರೀಕ್ಷಿಸಬೇಕು. ನಿಮ್ಮ ಹಂತದಲ್ಲಿ ಸಾಧ್ಯವಿರುವ ಪರಿಹಾರ ಒದಗಿಸಬೇಕು, ಇಲ್ಲವಾದರೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಬೆಳೆವಿಮೆ, ಬೆಳೆ ಪರಿಹಾರ ಪಾವತಿಯಲ್ಲಿ  ತಾಂತ್ರಿಕ ದೋಷಗಳನ್ನು  ತ್ವರಿತವಾಗಿ ಸರಿಪಡಿಸಬೇಕು ಎಂದರು.

ಈ ಹಿಂದಿನ ಸರಕಾರವು ಸಹಕಾರ ಸಂಘಗಳಲ್ಲಿದ್ದ ರೈತರ ಸಾಲವನ್ನು 50 ಸಾವಿರ ರೂ.ವರೆಗೆ ಮನ್ನಾ ಮಾಡಿತ್ತು. ಅದಕ್ಕಾಗಿ 8641 ಕೋಟಿ ರೂ.ಗಳನ್ನು ಬ್ಯಾಂಕುಗಳಲ್ಲಿರುವ ರೈತರ ಸಾಲದ ಖಾತೆಗಳಿಗೆ ಜಮೆ ಮಾಡಲಾಗಿದೆ. ಈಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲಗಳನ್ನು ದೊಡ್ಡ ಪ್ರಮಾಣದಲ್ಲಿ ಮನ್ನಾ ಮಾಡಿದ್ದಾರೆ. ರಾಷ್ಟೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ, ಸಾಲ ಮರುಪಾವತಿ ಹಂತಗಳನ್ನು ನಿರ್ಧರಿಸಿದ್ದಾರೆ ಎಂದು ಸಚಿವ ದೇಶಪಾಂಡೆ ಹೇಳಿದರು.

ಬರುವ ನವೆಂಬರ 1 ರೊಳೊಗೆ ಅವಳಿ ನಗರವನ್ನು ದೂಳ ಮುಕ್ತಗೊಳಿಸಬೇಕು. ಇದ್ದಕ್ಕೆ ಅಗತ್ಯವಿರುವ ಕ್ರಮಗಳನ್ನು ಖುದ್ದು ಜಿಲ್ಲಾಧಿಕಾರಿಗಳು ಕೈಗೊಂಡು ಉಸ್ತವಾರಿ ವಹಿಸಬೇಕು. ಮಹಾನಗರ ಪಾಲಿಕೆ, ಲೋಕೊಪಯೊಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂದಿತ ಇಲಾಖೆಗಳು ಈ ಕಾರ್ಯದಲ್ಲಿ ತೊಡಗಿಸಕೊಳ್ಳಬೇಕು. ಮತ್ತು ಅವಳಿ ನಗರದಲ್ಲಿರುವ ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ಪ್ರತಿ ನಿತ್ಯ ಸ್ವಚ್ಚಗೊಳಿಸಿ, ಅಗತ್ಯವಿರುವೆಡೆಗೆ ಸುಣ್ಣ, ಬಣ್ಣ ಬಳಿದು ದುರಸ್ತಿಗೊಳಿಸುವಂತೆ ಅವರು ತಿಳಿಸಿದರು. ಈಗಾಗಲೇ ಸೂಚಿಸಿರುವಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದ ಬ್ಯಾನರ, ಪೋಸ್ಟರ್ ಅಳವಡಿಸುವವರ ವಿರುದ್ಧ ನಿದರ್ಾಕ್ಷೀಣ್ಯ ಕ್ರಮ ಜರುಗಿಸುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಿದರು. ರಾಜ್ಯದಲ್ಲಿಯೇ ಅಂದವಾಗಿರುವ ಅವಳಿನಗರವನ್ನು ಕಸ, ದೂಳು ಮುಕ್ತಗೊಳಿಸಿ ಸುಂದರ ನಗರವನ್ನಾಗಿ  ರೂಪಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕೆಂದು ಸಚಿವರು ತಿಳಿಸಿದರು.

ಸಂಸದ ಪ್ರಹ್ಲಾದ ಜೋಷಿ ಮಾತನಾಡಿ, ಅವಳಿನಗರದಲ್ಲಿ ಕುಡಿಯುವ ನೀರು ಪೂರೈಸುವ ಅವಧಿಯನ್ನು ಉತ್ತಮಪಡಿಸಬೇಕು. ಕನಿಷ್ಠ 5-6 ದಿನಗಳಿಗೊಮ್ಮೆ ಕುಡಿಯುವ  ನೀರು ಪೂರೈಸುವ ಕ್ರಮ ಕೈಗೊಳ್ಳಬೇಕು. ಅವಳಿನಗರದಲ್ಲಿ ನಿಮರ್ಿಸಲಾಗಿರುವ ರಸ್ತೆಗೆ ಹೊಂದಿಕೊಂಡು ಪಾದಚಾರಿಗಳಿಗೆ ಪೇವರ್ಸ ಗಳನ್ನು ಅಳವಡಿಸಲಾಗಿದೆ. ಆದರೆ ಅದರ ಮೇಲಿನ ಮಣ್ಣು ತೆರವುಗೊಳಿಸದಿರುವದರಿಂದ ಧೂಳು ಅಧಿಕವಾಗಿದೆ, ತಕ್ಷಣ ಅದನ್ನು ಸರಿಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಅವಳಿ ನಗರದಲ್ಲಿ ಸೋರಿಕೆಯಾಗುತ್ತಿರುವ ಕುಡಿಯುವ ನೀರನ್ನು  ತಡೆಯಲು ಪಾಲಿಕೆ ನಿಗಾವಹಿಸುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿಮರ್ೂಲನೆಗೆ ಸಹಕಾರಿಯಾಗಲಿದೆ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಮಾತನಾಡಿ, ಅವಳಿನಗರದಲ್ಲಿ ಕಟ್ಟು ನಿಟ್ಟಾಗಿ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ. ಗಾಂಜಾ ಸಂಗ್ರಹ ಮತ್ತು ಮಾರಾಟಗಾರರ ವಿರುದ್ಧ 8 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಶಕೀಲ ಅಹ್ಮದ್ ಅವರು, ಅವಳಿನಗರದಲ್ಲಿ ಸ್ಮಾಟರ್್ ಸಿಟಿ ಯೋಜನೆಯಡಿ ಈಗಾಗಲೇ 341 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದೆ. 100 ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಕರೆಯಲಾಗುವದು. ಅವಳಿನಗರಗಳಲ್ಲಿ ಈಗ ಸ್ವಚ್ಚತಾ ಕಾರ್ಯ ಸುಧಾರಣೆಯಾಗಿದೆ. ಈ ಹಿಂದೆ ದೇಶದಲ್ಲಿ  ಸ್ಮಾರ್ಟ ಸಿಟಿ ಯೀಜನೆಯಡಿ 62 ನೇ ರ್ಯಾಂಕಿಂಗ್ ನಲ್ಲಿದ್ದ ಅವಳಿ ನಗರದ ಸ್ಥಾನ ಈಗ 42 ನೇ ಸ್ಥಾನಕ್ಕೇರಿದೆ. ಇನ್ನಷ್ಟು ಕಸ ಸಂಗ್ರಹಣಾ ವಾಹನಗಳು ಬರಲಿವೆ, ಕಸ ಸಂಗ್ರಹಣಾ ಘಟಕ ನಗರದಿಂದ ದೂರ ಇದೆ. ಈಗ ಘನತ್ಯಾಜ್ಯ ವಿಲೇವಾರಿಗೆ 60 ಕೋಟಿ ರೂ. ಬಂದಿದೆ ಇನ್ನಷ್ಟು ವಾಹನಗಳನ್ನು ಬಳಸಿಕೊಳ್ಳುವ ಮೂಲಕ ಸ್ವಚ್ಚತಾ ಕಾರ್ಯವನ್ನು ಇನ್ನಷ್ಟು ಸುಧಾರಿಸಲಾಗುವದು ಎಂದರು.

ಜಿ.ಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಚನ್ನಮ್ಮ ಶಿವನಗೌಡರ, ನಿಂಗಪ್ಪ ಘಾಟೀನ್, ಕಲ್ಲಪ್ಪ ಪುಡಕಲಕಟ್ಟಿ, ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ, ಮತ್ತಿತರರು ಇದ್ದರು.