ಮೂಡಲಗಿ: ಸಕರ್ಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಿ: ಮಾವರಕರ

ಮೂಡಲಗಿ 06: ಕಾಮರ್ಿಕರಿಗೆ ಜೀವ ವಿಮೆ, ವೃದ್ಧಾಪ್ಯ ವೇತನ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಮುಂತಾದ ಪ್ರಮುಖ ಸೌಲಭ್ಯಗಳನ್ನು ಕಾಮರ್ಿಕ ಇಲಾಖೆಯ ಮೂಲಕ ಸಕರ್ಾರ ನೀಡುತ್ತಿದ್ದು  ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ ಎಂದು ಕಾಮರ್ಿಕ ನೀರಿಕ್ಷಕ ಪಿ.ವ್ಹಿ. ಮಾವರಕರ ಹೇಳಿದರು.

     ಅವರು ಸಮರ್ಥ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕ ಸಂಘ ಹಾಗೂ ಕಾಮರ್ಿಕ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ಕಾಮರ್ಿಕರ ದಿನಾಚರಣೆ ಮತ್ತು  ಸತ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ  ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರಿಗೆ ಸಕರ್ಾರ ನೀಡುತ್ತಿರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡುತ್ತ, ಕಟ್ಟಡ ಮತ್ತು ಇತರೆ ನಿಮರ್ಾಣ,  ರಸ್ತೆ ಕಾಮಗಾರಿ, ವಿದ್ಯುತ್ ಕೆಲಸ ಮುಂತಾದ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ  ಕಾಮರ್ಿಕರಿಗೆ ಸಕರ್ಾರ ಹಲವೂ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ ಮಾಹಿತಿ ಮತ್ತು ತಿಳುವಳಿಕೆಯ ಕೊರತೆಯಿಂದ ಬಹಳಷ್ಟು ಕಾಮರ್ಿಕರು ತಮ್ಮ ಹೆಸರುಗಳನ್ನು ಇಲಾಖೆಯಲ್ಲಿ ನೊಂದಾಯಿಸಿಕೊಂಡಿಲ್ಲ. ಎಲ್ಲಾ ಕಾಮರ್ಿಕರು ಕಾಮರ್ಿಕ ಇಲಾಖೆಯಲ್ಲಿ ಅಗತ್ಯ ದಾಖಲೆಯನ್ನು ನೀಡಿ ನೊಂದಾಣಿ ಮಾಡಿಸಿಕೊಂಡು ಸಕರ್ಾರದ ಸೌಲಭ್ಯಗಳನ್ನು  ಪಡೆದುಕೊಳ್ಳಿ ಎಂದರು.     

  ವಕೀಲರ ಸಂಘದ ಕಾರ್ಯದಶರ್ಿ ಎಲ್.ವಾಯ್. ಅಡಿಹುಡಿ ಮಾತನಾಡಿ,  ಕಾಮರ್ಿಕರ ಮಕ್ಕಳು ಕಾಮರ್ಿಕರಾಗದೇ ಉತ್ತಮ ಶಿಕ್ಷಣ  ಪಡೆದು  ಸಮಾಜದಲ್ಲಿ ಗೌರವನ್ವಿತ ವ್ಯಕ್ತಿಗಳಾಗಿ ಜೀವನ ಸಾಗಿಸಬೇಕು.  ಸಕರ್ಾರದ ಸೌಲಭ್ಯಗಳನ್ನು  ಪಡೆದುಕೊಂಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.      

ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ದೇಶದ ನಿಮರ್ಾಣ ಕಾರ್ಯದಲ್ಲಿ ಕಾಮರ್ಿಕರ ಪಾತ್ರ ಮಹತ್ತರವಾದದ್ದು. ಕಾಮರ್ಿಕರ ಹಿತದೃಷ್ಟಿಯಿಂದ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಇವುಗಳ ಬಗ್ಗೆ ವ್ಯಾಪಕವಾದ ಪ್ರಚಾರ ಮಾಡಬೇಕಾಗಿದೆ. ಪ್ರತಿಯೊಬ್ಬರಿಗೂ ಸಕರ್ಾರದ ಸೌಲಭ್ಯ ತಲುಪಿದಾಗ ಮಾತ್ರ ಯೋಜನೆಗೆ ಯಶಸ್ಸು ದೊರೆಯುತ್ತದೆ ಎಂದರು.

        ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಮಗದುಮ್ ಮಾತನಾಡಿ,  ಕಾಮರ್ಿಕರು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

      ಕಾಮರ್ಿಕರ ದಿನಚರಣೆಯ ಅಂಗವಾಗಿ ಪುರಸಭೆಯ  ಪೌರ ಕಾಮರ್ಿಕ ಪಾಂಡು ಹರಿಜನ ಹಾಗೂ ಎಸ್. ಎಸ್.ಎಲ್.ಸಿ.  ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಕಟ್ಟಡ ಕಾಮರ್ಿಕರ ಮಕ್ಕಳಾದ ಸುಭಾಸ್ ಖಾನಟ್ಟಿ, ವೀಣಾ ಪುಂಡೆ, ರಮೇಶ ಗಾಣಿಗ ಇವರನ್ನು ಸಂಘದಿಂದ ಸತ್ಕರಿಸಲಾಯಿತು.

     ಮೂಡಲಗಿ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀಪಾದಬೋದ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಮರ್ಥ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕ ಸಂಘದ ಅಧ್ಯಕ್ಷ ಬಸವರಾಜ ಪೋಳ ಅಧ್ಯಕ್ಷತೆಯನ್ನು  ವಹಿಸಿದ್ದರು. 

ಪುರಸಭೆ ಮುಖ್ಯಧಿಕಾರಿ ಜಿ.ಆರ್ ಪೂಜೇರಿ, ಗುತ್ತಿಗೆದಾರರಾದ ಎಸ್.ಎಸ್.ಮೋಕಾಶಿ, ಚಂದ್ರು ಗಾಣಿಗ, ಸಿದ್ದಣ್ಣ ದುರದುಂಡಿ, ಯುವ ಜೀವನ ಸೇವ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ಭಗವಂತ ಉಪ್ಪಾರ, ಭೀರಪ್ಪ ಮಾಳಗಿ, ರಾಜು ಪೂಜೇರಿ, ದಶರಥ ಬಂಡಿವಡ್ಡರ, ಹಸನಸಾಬ ಕುರಬೆಟ, ಶಾನೂರು ಉಪ್ಪಾರ, ಬಸಪ್ಪ ಖಾನಟ್ಟಿ ಸೇರಿದಂತೆ  ನೂರಾರು ಕಾಮರ್ಿಕರು ಉಪಸ್ಥಿತರಿದ್ದರು.

 ಗುರುನಾಥ ಗಂಗನ್ನವರ ನಿರೂಪಿಸಿ, ಸುಧೀರ ನಾಯರ್ ಸ್ವಾಗತಿಸಿದರು. ಸುಭಾಸ್ ಗೊಡ್ಯಾಗೋಳ ವಂದಿಸಿದರು.