ಸರ್ಕಾರದ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಕೌಜಲಗಿ

ಲೋಕದರ್ಶನ ವರದಿ

ಬೈಲಹೊಂಗಲ 05:  ರಾಜ್ಯ ಸರ್ಕಾರ ಬಡ ವಿದ್ಯಾರ್ಥಿ \ಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

         ಅವರು ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವುಗಳ ಆಶ್ರಯದಲ್ಲಿ ಸುಸಜ್ಜಿತವಾಗಿ ನಿಮರ್ಾಣಗೊಂಡ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ನಿರ್ಮಿ ಸಿಕೊಳ್ಳಲು ಮೊರಾರ್ಜಿ  ವಸತಿ ಶಾಲೆಗಳು ರಾಜ್ಯಾಧ್ಯಂತ ತುಂಬಾ ಉಪಯುಕ್ತವಾಗಿವೆ. ಒಳ್ಳೆಯ ಶಿಕ್ಷಣ ಪಡೆದು ತಮ್ಮ ಕನಸನ್ನು ನನಸಾಗಿಸಿಕೊಳ್ಳಬೇಕು. ಸ್ಫಧರ್ಾತ್ಮಕ ಯುಗದಲ್ಲಿ ಇಲ್ಲಿ ಅವಕಾಶ ಪಡೆಯಲು ಪ್ರತಿಯೊಬ್ಬರು ಪ್ರಯತ್ನಿಸಬೇಕೆಂದರಲ್ಲದೇ ಮುಂಬರುವ ದಿನಗಳಲ್ಲಿ ನೂತನ ಕಟ್ಟಡಕ್ಕೆ ಸಕರ್ಾರದ ಮುಖಾಂತರ ಹಲವು ಸವಲತ್ತುಗಳನ್ನು ನೀಡಲು ಪ್ರಯತ್ನಿಸಲಾಗುವದೆಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

     ಮುಖ್ಯ ಅಥಿತಿಗಳಾಗಿ ಆಗಮಿಸಿದ ತಾ.ಪಂ.ಸದಸ್ಯ ಬಸನಗೌಡಾ ಪಾಟೀಲ ಮಾತನಾಡಿ, ತಿರುಳಗನ್ನಡನಾಡು ವಕ್ಕುಂದ ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಶಾಲಾ ಕಟ್ಟಡ ಈ ಭಾಗದ ವಿದ್ಯಾಥರ್ಿಗಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಉತ್ತಮ ಪರಿಸರ ಹೊಂದಿರುವ ಇಲ್ಲಿ ಕಲಿತ ವಿದ್ಯಾರ್ಥಿ ಗಳು ಗ್ರಾಮದ ಹೆಸರನ್ನು ಅಜರಾಮರಗೊಳಿಸಬೇಕಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಭೂದಾನ ಮಾಡಿ ಸಹಕಾರ ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸೌಕರ್ಯಗಳು ಈ ಗ್ರಾಮಕ್ಕೆ ಒದಗಿ ಬಂದು ಶಿಕ್ಷಣ ಕಾಶಿಯಾಗಲೂ ಜನಪ್ರತಿನಿಧಿಗಳೆಲ್ಲರೂ ಪ್ರಯತ್ನಿಸೋಣವೆಂದರು.

    ವೇದಿಕೆ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ರಾಮನಗೌಡಾ ಕನ್ನೋಳಿ, ತಾ.ಪಂ. ಕಾರ್ಯನಿವರ್ಾಹಕಾಧಿಕಾರಿ ಸಮೀರ ಮುಲ್ಲಾ, ಗ್ರಾ.ಪಂ.ಅಧ್ಯಕ್ಷ ಪರ್ವತಗೌಡ ಪಾಟೀಲ, ಗ್ರಾ.ಪಂ. ಉಪಾಧ್ಯಕ್ಷ್ಯೆ ಭಾರತಿ ಈಳಗೇರ, ಗ್ರಾ.ಪಂ. ಸದಸ್ಯರಾದ ಭೀಮಣ್ಣ ಮುರಗೋಡ, ಮಂಜುನಾಥ ಹೂವಿನ, ಸ್ನೇಹಾ ಶರಣ್ಣವರ, ಬೆಂಗಳೂರಿನ ಸಿಗ್ಮಾ ಐಎನ್ಸಿ ಪ್ರೊಜೆಕ್ಟನ್ ಗುತ್ತಿಗೆದಾರ ಕೋಟಿ ಲಕ್ಷ್ಮೀ ನಾರಾಯಣ, ಜಿ.ಪಂ.ಅಭಿಯಂತರ ಎಚ್.ಕೆ.ಒಂಟಗೋಡಿ, ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ, ರಾಮನಗೌಡ ಪಾಟೀಲ ಇದ್ದರು.

     ಶಿಕ್ಷಕರಾದ ಎಸ್.ಎಮ್.ಪಾಟೀಲ, ಪಿಎಸ್.ಹಿರೇಮಠ, ಕೋಮಲ ಕಾಮೋಜಿ, ರವಿಕುಮಾರ ಐಹೊಳೆ, ಎಸ್.ಎಸ್. ಕನಕಗಿರಿ, ಎಲ್.ಎಸ್.ಕುಲಕರ್ಣಿ \, ಎಮ್.ಎಸ್.ಶಿಲಿ, ಎ.ಆರ್.ಪಾಟೀಲ, ಬಿ.ಎ.ಅರ್ಚಕ ಇದ್ದರು. 

    ವಿದ್ಯಾಥರ್ಿನಿ ದೀಪಾ ನರಿ ಹಾಗೂ ರೂಪಾ ಹೊನಕುಪ್ಪಿ ಇವರಿಂದ ಪ್ರಾರ್ಥನೆ ಜರುಗಿತು. ಪ್ರಾಂಶುಪಾಲ ಈರಣ್ಣ ಮುನವಳ್ಳಿ ಸ್ವಾಗತಿಸಿದರು. ವ್ಹಿ.ಎಸ್.ಕರವಿರನ್ನವರ ನಿರೂಪಿಸಿದರು. ಶಿಕ್ಷಕ ಎಸ್.ಎಂ.ಶೆಟ್ಟೆಣ್ಣವರ ವಂದಿಸಿದರು.