ುಕ್ಕಾನಟ್ಟಿ : ಮಕ್ಕಳೊಂದಿಗೆ ಮಾತೆಯರು ವಿಶೇಷ ಕಾರ್ಯಕ್ರಮ


ಮೂಡಲಗಿ 23: 'ವಿದ್ಯಾಥರ್ಿ ಜೀವನದಲ್ಲಿ ತಾಯಿಯ ಪಾತ್ರ ಪ್ರಮುಖವಾಗಿರುವುದರಿಂದ ಅವರ ಜವಾಬ್ದಾರಿಗಳನ್ನು ತಿಳಿಸುವುದಕ್ಕಾಗಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ, ವಿದ್ಯಾವಂತರನ್ನಾಗಿ ಮಾಡುವಲ್ಲಿ ಶಿಕ್ಷಕರಷ್ಟೇ ತಾಯಿಯು ಮುಖ್ಯವಾಗಿರುವುದರಿಂದ ಇವತ್ತು ನಾವು ಕೇವಲ ಮಕ್ಕಳ ತಾಯಂದಿರ ಸಭೆ ನಡೆಸುವುದರೊಂದಿಗೆ ಮಕ್ಕಳೊಂದಿಗೆ ಮಾತೆಯರು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮುಖ್ಯಾಧ್ಯಾಪಕ ಎ.ವ್ಹಿ. ಗಿರೆಣ್ಣವರ ಹೇಳಿದರು.


ಸಮೀಪದ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚೆಗೆ ಮಕ್ಕಳ ದಿನಾಚರಣೆ ಅಂಗವಾಗಿ, ಗುರುವಾರದಂದು ಜರುಗಿದ 'ಮಕ್ಕಳೊಂದಿಗೆ ಮಾತೆಯರು' ವಿಶೇಷ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

  ವಿದ್ಯಾಥರ್ಿಗಳ ಅಭ್ಯಾಸದೊಂದಿಗೆ ಹಾಗೂ ವಿಶೇಷವಾಗಿ ವಿದ್ಯಾಥರ್ಿನಿಯರ ವೈಯಕ್ತಿಕ ಸಮಸ್ಯೆಗಳನ್ನು ಅರಿತು ಹಾಗೂ ಆರೋಗ್ಯ ಅಭ್ಯಾಸ ಭವಿಷ್ಯದ ಸಮಾಲೋಚನೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 

   ಶಾಲಾ ಬಿಸಿಯೂಟ ಯೋಜನೆಯಲ್ಲಿ ಸುಮಾರು 600 ಕ್ಕಿಂತ ಹೆಚ್ಚು ವಿದ್ಯಾಥರ್ಿಗಳಿಗೆ ಹಾಗೂ ಅವರ ತಾಯಂದಿರಿಗೂ ಕೂಡ ಹೂರಣ ಹೋಳಿಗೆ, (ಒಬ್ಬಟ್ಟು) ತುಪ್ಪ, ಮಸಾಲೆ ಅನ್ನ, ಕಟ್ಟಿನ ಸಾರು, ಸಾಂಡಿಗೆ ಮಾಡಿ ಬಡಿಸಲಾಯಿತು. 

  ಶಾಲೆಯಲ್ಲಿ ಮಕ್ಕಳ ದಾಖಲಾತಿ ಹಾಜರಾತಿ ವೃದ್ಧಿಸುವ ಸಲುವಾಗಿ, ಹಮ್ಮಿಕೊಳ್ಳುವ ಅನೇಕ ಪಠ್ಯೇತರ ಕಾರ್ಯಕ್ರಮಗಳ ಜೊತೆಗೆ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಕೂಡ ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ. ಸರಕಾರದ ಬಿಸಿಯೂಟವನ್ನು ಈ ಶಾಲೆಯಲ್ಲಿ ಕೇವಲ ಅನ್ನ ಸಾಂಬರಿಗೆ ಸೀಮಿತಗೊಳಿಸಿಲ್ಲ. ಆಗಾಗ ಇಲ್ಲಿ ಇಡ್ಲಿ ಸಾಂಬಾರು, ಪೂರಿಭಾಜಿ, ಕೇಸರಿಬಾತ್, ಜಾಮೂನು, ಗೆಣಸು, ಬಾಳೆ ಹಣ್ಣು, ಶಾವಿಗೆ ಪಾಯಸ, ಗೋದಿಹುಗ್ಗಿ, ರವೆ ಉಂಡಿ, ಬುಂದಿಲಾಡು, ಬದಾಮಿ ಹಾಲು, ಕೇಸರಿ ಹಾಲು, ಮಸಾಲೆ ಅನ್ನ ಹೀಗೆ ವಿವಿಧ ಬಗೆಯ ಅಡುಗೆ ಮಾಡುವುದರ ಮೂಲಕ ಮಕ್ಕಳನ್ನು ಆಕಷರ್ಿಸಲಾಗುತ್ತಿದೆಯಲ್ಲದೇ ಅಕ್ಷರ ದಾಸೋಹ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. 

ಅಧ್ಯಕ್ಷತೆಯನ್ನು ತಾಲೂಕ ಪಂಚಾಯತ ಮಾಜಿ ಅಧ್ಯಕ್ಷ ಸುಲೋಚನಾ ಮದರ್ಿ ವಹಿಸಿದ್ದರು. ನೂರಾರು ತಾಯಂದಿರ ಜೊತೆಗೆ ಎಸ್.ಡಿ.ಎಂ.ಸಿ. ಸದಸ್ಯರಾದ ನಿರ್ಮಲಾ ಗದಾಡಿ, ಜಾಹೀದಾ ಮುಲ್ಲಾ ಉಪಸ್ಥಿತರಿದ್ದರು.

  ಶಿಕ್ಷಕ ಎಂ.ಡಿ. ಗೋಮಾಡಿ ಸ್ವಾಗತಿಸಿ ನಿರೂಪಿಸಿದರು. ಎ.ಆರ್. ಭಜಂತ್ರಿ ವಂದಿಸಿದರು. ಶಿಕ್ಷಕರಾದ ಪುಷ್ಫಾ ಬರಮದೆ, ಕುಸುಮಾ ಚಿಗರಿ, ವಿ.ಜಿ. ತೋರಗಲ್, ಎಸ್.ಆರ್. ಕುಲಕಣರ್ಿ, ಸಂಗೀತಾ ತಳವಾರ, ಎಸ್.ಡಿ. ಲಮಾಣಿ, ಎಂ.ಕೆ. ಕಮ್ಮಾರ ಉಪಸ್ಥಿತರಿದ್ದರು.