ಲೋಕದರ್ಶನ ವರದಿ
ಯಲಬುಗರ್ಾ 02: ನಗರದ ಐದನೇ ವಾರ್ಡನಲ್ಲಿರುವ ಒಂದನೇ ಅಂಗನವಾಡಿಯ ಕೇಂದ್ರವು ಸರಕಾರಿ ರಸ್ತೆಯಲ್ಲಿದ್ದು ಇದಕ್ಕೆ ಅಡ್ಡಿ ಮಾಡಿದರೆ ಕಾನೂನು ಪ್ರಕಾರ ಕಠಿಣ ಕ್ರಮಕ್ಕೆ ಮುಂದಾಗಲಾಗುವದು ಎಂದು ತಹಶೀಲ್ದಾರ ರಮೇಶ ಅಳವಂಡಿಕರ್ ಹೇಳಿದರು.
ವಿವಾದಿತ ಸ್ಥಳಕ್ಕೆ ಬೇಟಿ ನೀಡಿ ಜಾಗ ಪರಿಶಿಲಿಸಿ ನಂತರ ಮಾತನಾಡಿದ ಅವರು, ಈ ಜಾಗ ನನ್ನದೆ ಅನ್ನುವ ಭಾಗಿರಥಿ ಜೋಗಿನವರ ವಾದ ಸರಿಯಲ್ಲಾ ಇದು ಸರಕಾರದ ಜಾಗ ಈ ಕೇಂದ್ರವನ್ನು ತಮ್ಮ ವಶಕ್ಕೆ ಪಡೆದದ್ದು ಕಾನೂನು ಬಾಹಿರ ಕೂಡಲೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ನಿಮರ್ಿಸಿದ ಗೊಡೆಗಳನ್ನ ಹೊಡೆದು ಅಂಗನವಾಡಿಯ ಕಟ್ಟಡವನ್ನು ಬೆಗನೇ ದುರಸ್ಥಿಗೋಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದರು.
ಪಪಂ ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ನಾವು ತಹಶೀಲ್ದಾರ ನೇತೃತ್ವದಲ್ಲಿ ಇಂದು ಜಾಗದ ಸವರ್ೆ ಮಾಡಲಾಗಿದೆ ಸರಕಾರಿ ಜಾಗದಲ್ಲಿ ಅವರು ಕಟ್ಟಡ ಕಟ್ಟಿಕೊಂಡಿದ್ದು ಕಂಡು ಬಂದಿದ್ದು ಹಾಗೂ ಸರಕಾರಿ ಜಾಗದಲ್ಲಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ ಅದನ್ನು ತೆಗೆಸಲಾಗುವದು ಯಾವುದೇ ಕಾರಣಕ್ಕು ಮಕ್ಕಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಲಾಗುವದು ಒಂದು ವೇಳೆ ಅಡ್ಡಿ ಪಡಿಸಿದಲ್ಲಿ ಪೋಲಿಸರ ನೆರವಿನೊಂದಿಗೆ ಬಾಗಿರಥಿ ಜೋಗಿನವರು ಆಕ್ರಮಿಸಿಕೊಂಡಿರುವ ಜಾಗವನ್ನು ತೆರವುಗೊಳಿಸಲಾಗುವದು ಎಂದರು.
ಈ ಸಂದರ್ಭದಲ್ಲಿ ಸಿಡಿಪಿಓ ಶರಣಮ್ಮ ಕಾರನೂರು, ಅಂಗನವಾಡಿ ಮೇಲ್ವೀಚಾರಕಿ ಲಲಿತಾ ನಾಯಕ, ಪಪಂ ಸದಸ್ಯರಾದ ಹನುಮಂತಪ್ಪ ಭಜಂತ್ರಿ, ಪಪಂ ಸಿಬ್ಬಂದಿಯಾದ ರಮೇಶ ಬೆಲೇರಿ, ರವಿಕುಮಾರ, ಬಸವಲಿಂಗಪ್ಪ ಬಾಸ್ಕರ್, ಗ್ರಾಮಲೆಕ್ಕಾಧಿಕಾರಿ ನಾಗೇಶ, ಮುಖಂಡರಾದ ಪರಶುರಾಮ ನಾಯಕ, ಸಿದ್ದಪ್ಪ ಕಟ್ಟಿಮನಿ, ಸಿದ್ದಪ್ಪ ದಂಡಿನ, ಸೇರಿದಂತೆ ಅನೇಕರು ಹಾಜರಿದ್ದರು.