ಸುಲ್ತಾನ್ ಪುರದಲ್ಲಿ ರಸ್ತೆ ಅಪಘಾತ: ಮೂವರು ಕಾರ್ಮಿಕರು ಸಾವು

ಸುಲ್ತಾನಪುರ, ಫೆ .15 ಜಿಲ್ಲೆಯ ಮೋತಿಗ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡೆ ಬಾಬಾ ಬಜಾರ್ನಲ್ಲಿ ಶನಿವಾರ ಪ್ರಯಾಣಿಕರ ವ್ಯಾನ್ ವೊಂದು ಟ್ರಾಕ್ಟರ್-ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇತರ ಆರು ಮಂದಿ ಗಾಯಗೊಂಡಿದ್ದಾರೆ.  ಕಾರ್ಮಿಕರು ಮೌ ನಲ್ಲಿನ ಇಟ್ಟಿಗೆಗೂಡು ಕಾರ್ಖಾನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಮೃತರನ್ನು ರಾಜೇಶ್ (22), ರಂಬುಜ್ (25) ಮತ್ತು ಲಕ್ಷ್ಮಿಶಂಕರ್ (23) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.  ಅಪಘಾತ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.