ಆರೋಗ್ಯದ ಕಡೆ ಗಮನ ಹರಿಸಬೇಕು : ಎಸ್.ಎಚ್.ಜತ್ತಿ
ಹಾವೇರಿ 13: ಕೆಲಸದ ಒತ್ತಡದಿಂದ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸದ ಪರಿಣಾಮ ನಾವು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಇದರಿಂದ ನಾವು ಹೊರಬರಬೇಕಾದರೆ ನಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಚ್.ಜತ್ತಿ ಎಂದರು
ನಗರದಲ್ಲಿ ಜಿಲ್ಲಾ ವಕೀಲರ ಸಂಘ,ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ಯ ಇಲಾಖೆಯವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ವಕೀಲರುಗಳಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ವಕೀಲರು ತಮ್ಮ ಆರೋಗ್ಯದ ಕಡೆ ಗಮನ ನೀಡುವುದು ಹೆಚ್ಚಾಗಬೇಕು.ಎಲ್ಲರೂ ಉಚಿತ ತಪಾಸಣೆಗೆ ಒಳಗಾಗಿ ಇದರ ಸದುಪಯೋಗ ಪಡೆದುಕೊಳಬೇಕೆಂದು ಕರೆ ನೀಡಿದರು.
ಡಾ.ಜಿ.ಸಿ.ನಿಡಗುಂದಿ ಮಾತನಾಡಿ ಇಂದು ಕೆಲಸದ ಒತ್ತಡದಿಂದ ನಾವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು,ಇದರಿಂದ ಹೊರಬರಲು ನಿತ್ಯ ವ್ಯಾಯಮ ಮತ್ತು ಉತ್ತಮ ಆಹಾರ ಕ್ರಮ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಿ.ಪಿ. ಜಾವಗಲ್ಲ, ಕಾರ್ಯದರ್ಶಿಗಳಾದ ಪಿ.ಎಸ್.ಹೆಬ್ಬಾಳ,ಸಹ ಕಾರ್ಯದರ್ಶಿಗಳಾದ ಎನ್.ಎಸ್.ಕಾಳೆ,ಆಡಳಿತ ಮಂಡಳಿ ಸದಸ್ಯರಾದ ಎಮ್.ಎಲ್.ಸೊನ್ನದ, ಬಿ.ಎಸ್.ಅಂಬ್ಲೇರಕವಿತಾ ಕಿತ್ತೂರ, ,ಆರ್.ಎಚ್.ತಂಗೊಡರ,ಸಿ.ಎಸ್.ಹಿರೇಮಠ, ಎಮ್.ಎಮ್. ರಜಾಕನವರ, ಕೋರ್ಟಿನ ವಕೀಲರು, ಜಿಲ್ಲಾ ಆಯುಷ್ ಇಲಾಖೆಯ ವೈದ್ಯರೂ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.