ರೇಲ್ವೆ ಮಾರ್ಗ ರಚನೆಯ ಕುರಿತು ಮಾಜಿ ಸಂಸದರೊಂದಿಗೆ ಚರ್ಚೆ
ಗಂಗಾವತಿ 13: ದರೋಜಿ-ಗಂಗಾವತಿ ಮತ್ತು ಗಂಗಾವತಿ-ಬಾಗಲಕೋಟ್ ಬ್ರಾಡಗೇಜ್ ರೇಲ್ವೆ ಮಾರ್ಗ ರಚನೆಯ ಕುರಿತು ಮಾಜಿ ಸಂಸದ ಕರಡಿ ಸಂಗಣ್ಣ ಅವರೊಡನೆ ಸೋಮವಾರ ಚರ್ಚಿಸಲಾಯಿತು.
ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಮನೆಗೆ ಸಂಗಣ್ಣನವರು ಭೇಟಿಯಾದಾಗ ಈ ವಿಷಯವಾಗಿ ಮಾತನಾಡಿದರು.ಹೇಗಾದರೂ ಮಾಡಿ ಮುಂಬರುವ ಬಜೆಟ್ ನಲ್ಲಿ ಅನುದಾನ ಒದಗಿಸಲು ರೇಲ್ವೆ ಸಚಿವರನ್ನು ಭೇಟಿಯಾಗಲು ಈ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.ಉದ್ದೇಶಿತ ಅನುದಾನಕ್ಕೆ ರಾಜ್ಯದ ಪಾಲನ್ನು ಪಡೆಯಲು ಸಚಿವ ಶಿವರಾಜ ತಂಗಡಗಿಯವರನ್ನು ಭೇಟಿಯಾಗಿ ಅನುದಾನ ಪಡೆಯುವ ಬಗ್ಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ನಗರಸಭಾ ಸದಸ್ಯ ಮನೋಹರಸ್ವಾಮಿ,ಬಿ.ಜೆ.ಪಿ.ಧುರಿಣ ಬಸಣ್ಣ, ವಿಶ್ವನಾಥ,ವೀರಯ್ಯಸ್ವಾಮಿ ಹಾಗೂ ಅಶೋಕಸ್ವಾಮಿ ಹೇರೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸಂಗಣ್ಣ ಕರಡಿಯವರನ್ನು ಚರ್ಚೆಯ ಸಮಯದಲ್ಲಿ ಸನ್ಮಾನಿಸಿ,ಗೌರವಿಸಲಾಯಿತು.